ಚಿಕ್ಕಮಗಳೂರು: ತಿನಿತ್ಯ ಕಟ್ಟಡ ವೃತ್ತಿಯಲ್ಲಿ ಕಾರ್ಯನಿರ್ವಹಿಸುವ ಕಾರ್ಮಿಕರು ದುಡಿಮೆ ಯ ಜೊತೆಗೆ ಆರೋಗ್ಯ ಕಡೆ ಹೆಚ್ಚು ಗಮನಹರಿಸಬೇಕು. ನಿರ್ಲಕ್ಷ್ಯವಹಿಸಿದರೆ ಮುಂದೊಂದು ದಿನ ಆರೋಗ್ಯ ಯುತ ಶರೀರ ಅನಾರೋಗ್ಯ ಪೀಡಿತವಾಗಲಿದೆ ಎಂದು ಕಟ್ಟಡ ಕಾರ್ಮಿಕರ ಸಂಘದ ತಾಲ್ಲೂಕು ಅಧ್ಯಕ್ಷ ಸಿ.ವಸಂತ್ ಕುಮಾರ್ ಹೇಳಿದರು.
ನಗರದ ತಮಿಳು ಕಾಲೋನಿಯಲ್ಲಿ ಎನ್.ಐ.ಎಂ.ಎ., ತಾಲ್ಲೂಕು ಕಟ್ಟಡ ಕಾರ್ಮಿಕರ ಸಂಘ ಹಾಗೂ ರಾಜಸ್ಥಾನ ಔಷಧಾಲಯ ಸಹಯೋಗದಲ್ಲಿ ಮಂಗಳವಾರ ಸಂಜೆ ಕಟ್ಟಡ ಕಾರ್ಮಿಕರಿಗೆ ಏರ್ಪಡಿಸಿದ್ದ ಉಚಿತ ಆರೋಗ್ಯ ಹಾಗೂ ನೇತ್ರಾ ತಪಾಸಣೆ ಶಿಬಿರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಕಾರ್ಮಿಕರು ಕಟ್ಟಡ ನಿರ್ಮಿಸುವ ವೇಳೆಯಲ್ಲಿ ದೂಳು ಅಥವಾ ಇನ್ನಿತರೆ ಪರಿಣಾಮದಿಂದ ಆರೋಗ್ಯವು ಹದಗೆಡಲಿದೆ. ಕೆಲವರು ತಲೆಕೆಡಿಸಿಕೊಳ್ಳದೇ ಮೌನವಾಗಿರುವ ಕಾರಣ ಮುಂಬರುವ ದಿನ ಅನಾರೋಗ್ಯ ಕಾಯಿ ಲೆಗಳಿಗೆ ತುತ್ತಾಗುವ ಸಾಧ್ಯತೆಯಿದೆ. ಆ ಹಿನ್ನೆಲೆಯಲ್ಲಿ ಬಿಡುವು ಮಾಡಿಕೊಂಡು ಆರೋಗ್ಯ ತಪಾಸಣೆಗೆ ಮುಂದಾಗ ಬೇಕು ಎಂದರು.
ಕಾರ್ಮಿಕರ ಮಂಡಳಿಯಿಂದ ಹಲವಾರು ಯೋಜನೆಗಳು ಕಾರ್ಮಿಕರಿಗೆ ದೊರೆಯುತ್ತಿದ್ದು ಇವುಗಳ ಸದು ಪಯೋಗಪಡಿಸಿಕೊಂಡು ಮುನ್ನೆಡೆಯಬೇಕು. ಅದಲ್ಲದೇ ವೃತ್ತಿಯಲ್ಲಿ ಅನಾಹುತ ಸಂಭವಿಸಿದರೆ ಇಲಾಖೆಯಿಂದ ಚಿಕಿತ್ಸೆ ಹಾಗೂ ಕುಟುಂಬ ನಿರ್ವಹಣೆಗೆ ಸರ್ಕಾರವು ಸವಲತ್ತು ಒದಗಿಸುತ್ತಿದೆ ಎಂದು ತಿಳಿಸಿದರು.
ಎನ್.ಐ.ಎಂ.ಎ. ಮುಖ್ಯಸ್ಥ ಡಾ. ಅನಿತ್ಕುಮಾರ್ ಮಾತನಾಡಿ ನಗರಾದ್ಯಂತ ಕಾರ್ಮಿಕರಿಗೆ ಅನುಕೂಲ ವಾಗುವ ನಿಟ್ಟಿನಲ್ಲಿ ಕಣ್ಣು, ಬಿಪಿ ಸೇರಿದಂತೆ ಇನ್ನಿತರೆ ಸಾಮಾನ್ಯ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ. ಜೊತೆಗೆ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ ಅವಶ್ಯವಿದ್ದಲ್ಲಿ ಆ ವ್ಯಕ್ತಿಗೆ ಉಚಿತವಾಗಿ ಸರ್ಕಾರಿ ಅಥವಾ ಹೋಲಿಕ್ರಾಸ್ ಆಸ್ಪತ್ರೆಯಲ್ಲಿ ಬಿಪಿಎಲ್ ಕಾರ್ಡ್ ಆಧಾರದ ಮೇಲೆ ಚಿಕಿತ್ಸೆ ಒದಗಿಸಲಾಗುವುದು ಎಂದು ತಿಳಿಸಿದರು.
ರಾಜಸ್ಥಾನ ಔಷಧಾಲಯ ಮುಖ್ಯಸ್ಥ ಮುಜಾಯಿದ್ ಪಾಷ ಮಾತನಾಡಿ ಶಿಬಿರದಲ್ಲಿ ಕಾರ್ಮಿಕರಿಗೆ ಅನುಕೂ ಲವಾಗುವ ನಿಟ್ಟಿನಲ್ಲಿ ಯಾವುದೇ ರಾಸಾಯನಿಕ ಔಷಧಿಗಳನ್ನು ಬಳಸದೇ ನೈಸರ್ಗಿಕವಾಗಿ ದೊರೆಯುವ ಔಷಧಿ ಗಳನ್ನು ವಿತರಿಸಲಾಗುತ್ತಿದೆ. ಇದರಿಂದ ಆರೋಗ್ಯವು ನಿಧಾನಗತಿಯಲ್ಲಿ ಚೇತರಿಕೆ ಕಾಣಲಿದೆ ಎಂದು ತಿಳಿಸಿದರು.
ಇದೇ ವೇಳೆ ಶಿಬಿರದಲ್ಲಿ ೧೦೦ ಕ್ಕೂ ಹೆಚ್ಚು ಮಂದಿ ಪಾಲ್ಗೊಂಡು ಶಿಬಿರದ ಪ್ರಯೋಜನ ಪಡೆದುಕೊಂಡರು. ಜೊತೆಗೆ ಇಬ್ಬರಿಗೆ ಕಣ್ಣಿನ ಪೊರೆ ಸಮಸ್ಯೆಯಿರುವ ಹಿನ್ನೆಲೆಯಲ್ಲಿ ಚಿಕಿತ್ಸೆಗೆ ಮುಂದಾಲಾಗುವುದು ಎಂದರು.
ಈ ಸಂದರ್ಭದಲ್ಲಿ ಕಾರ್ಮಿಕರ ಸಂಘದ ತಾಲ್ಲೂಕು ಉಪಾಧ್ಯಕ್ಷ ಮಂಜೇಗೌಡ, ಕಾರ್ಯದರ್ಶಿ ಜಾನಕಿ, ಮಾತೃಭೂಮಿ ಸಂಘದ ಅಧ್ಯಕ್ಷ ಕೆ.ಕುಮಾರ್, ವೈದ್ಯೆ ಡಾ. ಸಹೀದಾ ಕಮಲ್, ಸ್ಥಳೀಚಿiರಾದ ಅಬ್ದುಲ್ ವಾಜೀದ್, ಗುಡ್ಡದೂರು ರವಿ, ಸುರೇಶ್, ಅಬ್ರೋಜ್ ಮತ್ತಿತರರು ಹಾಜರಿದ್ದರು.
Free health and eye check-up arranged for construction workers