ಚಿಕ್ಕಮಗಳೂರು: ಭಾರತೀಯ ಜನತಾ ಪಕ್ಷದ ನೂತನ ಜಿಲ್ಲಾಧ್ಯಕ್ಷರಾಗಿ ದೇವರಾಜ್ ಶೆಟ್ಟಿ ನೇಮಕರಾಗಿದ್ದಾರೆ.
ತೀವ್ರ ಪೈಪೋಟಿ ನಡುವೆ ದೇವರಾಜ್ ಶೆಟ್ಟಿ ಅವರನ್ನು ಜಿಲ್ಲೆಯ ನೂತನ ಬಿಜೆಪಿ ಜಿಲ್ಲಾಧ್ಯಕ್ಷರನ್ನಾಗಿ ನೇಮಕ ಮಾಡಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ ವಿಜಯೇಂದ್ರ ಹೆಸರು ಘೋಷಿಸಿದ್ದಾರೆ. ರಾಜ್ಯದ 39 ಘಟಕಗಳಿಗೂ ಅಧ್ಯಕ್ಷರನ್ನು ಏಕ ಕಾಲದಲ್ಲಿ ನೇಮಕ ಮಾಡಲಾಗಿದೆ.
ಜಿಲ್ಲೆಯಲ್ಲಿ ಹತ್ತಾರು ಜನರು ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಪೈಪೋಟಿ ನಡೆಸಿದ್ದರು. ಅಂತಿಮವಾಗಿ ಮೂವರ ಹೆಸರು ಕೇಳಿ ಬಂದಿತ್ತು. ಅದರಲ್ಲೂ ದೇವರಾಜ್ ಶೆಟ್ಟಿ ಹೆಸರು ಪೈಪೋಟಿ ಯಲ್ಲಿ ಮುಂಚೂಣಿಯಲ್ಲಿತ್ತು. ನಿರೀಕ್ಷೆ ಯಂತೆ ದೇವರಾಜ್ ಶೆಟ್ಟಿ ಹೆಸರು ಆಯ್ಕೆಯಾಗಿದೆ.
ದೇವರಾಜ್ ಶೆಟ್ಟಿ ಹೆಸರು ಜಿಲ್ಲಾಧ್ಯಕ್ಷರಾಗಿ ಪ್ರಕಟಗೊಳ್ಳುತ್ತಿದ್ದಂತೆ ಕಾರ್ಯಕರ್ತರಿಂದ ಶುಭಾಶಯಗಳ ಮಹಾಪೂರ ಹರಿದು ಬರುತ್ತಿದ್ದು, ಶೆಟ್ಟಿ ಕುಟುಂಬಸ್ಥರಲ್ಲಿ ಹರ್ಷೋದ್ಗಾರ ಹೆಚ್ಚಿದೆ. ಈ ಮೂಲಕ ಸಂಕ್ರಾಂತಿಯ ಸಿಹಿಯನ್ನು ಬಿಜೆಪಿ ಪಕ್ಷ ನೀಡಿದೆ.
ಮುಂಬರುವ ಲೋಕಸಭಾ ಚುನಾವಣೆ ದೃಷ್ಟಿಯಿಂದ ಈ ನೇಮಕಾತಿ ಮಹತ್ವ ಪಡೆದಿದ್ದು ನೂತನ ಜಿಲ್ಲಾಧ್ಯಕ್ಷರ ಹೆಗಲಿಗೆ ಪಕ್ಷದ ಅಭ್ಯರ್ಥಿ ಗೆಲ್ಲಿಸುವ ಜವಾಬ್ದಾರಿ ಹೊರಿಸಿದಂತಾಗಿದೆ.
Devaraj Shetty has been elected as the new BJP district president