ಚಿಕ್ಕಮಗಳೂರು: ನಗರಸಭಾ ವ್ಯಾಪ್ತಿಯಲ್ಲಿ ಕೈಗೊಂಡಿರುವ ಕೆಲವು ಅವೈಜ್ಞಾನಿಕ ಆದೇಶ ಗಳನ್ನು ತಕ್ಷಣವೇ ರದ್ದುಪಡಿಸಬೇಕು ಎಂದು ವರ್ತಕರ ಸಂಘದ ಮುಖಂಡರುಗಳು ಸೋಮವಾರ ಜಿಲ್ಲಾ ಉಸ್ತು ವಾರಿ ಸಚಿವರು ಹಾಗೂ ನಗರಸಭಾ ಅಧ್ಯಕ್ಷರಿಗೆ ಮನವಿ ಸಲ್ಲಿಸಿದರು.
ಈ ಕುರಿತು ಮಾತನಾಡಿದ ಸಂಘದ ಅಧ್ಯಕ್ಷ ಟಿ.ಸಿ.ಚಂದ್ರಶೇಖರ್ ನಗರದ ಎಂ.ಜಿ.ರಸ್ತೆಯಲ್ಲಿ ನಾಲ್ಕು ಚಕ್ರದ ವಾಹನಗಳ ನಿಲುಗಡೆಗೆ ಶುಲ್ಕ ವಸೂಲಾತಿ ಹಕ್ಕನ್ನು ಖಾಯಂಗೊಳಿಸಬಾರದು, ಕಸದ ಬಿಲ್ಲನ್ನು ಏಕಾಏಕಿ ಏರಿಸಿ ರುವುದಲ್ಲದೇ ಒಂದೊಂದು ದರವನ್ನು ವಿಧಿಸಿರುವ ಆದೇಶವನ್ನು ಕೂಡಲೇ ರದ್ದುಪಡಿಸಬೇಕು ಎಂದರು.
ಅದಲ್ಲದೇ ಟ್ರೇಡ್ ಲೈಸೆನ್ಸ್ ಸಂಬಂಧ ಹಾಸನ, ಶಿವಮೊಗ್ಗ ನಗರವ್ಯಾಪ್ತಿಯಲ್ಲಿ ಅತಿಕಡಿಮೆ ದರದಲ್ಲಿ ಶುಲ್ಕ ವಿದೆ. ಆದರೆ ಚಿಕ್ಕಮಗಳೂರು ನಗರಸಭಾ ವ್ಯಾಪ್ತಿಯಲ್ಲಿ ೩ ರಿಂದ ೫ಪಟ್ಟು ಹೆಚ್ಚಿಸಿರುವುದು ಸರಿಯಲ್ಲ. ಹೀಗಾಗಿ ಈ ಹಿಂದಿನ ಟ್ರೇಡ್ ಲೈಸೆನ್ಸ್ನ ಶುಲ್ಕವನ್ನು ಕಡ್ಡಾಯಗೊಳಿಸಬೇಕು ಎಂದರು.
ನಗರದ ಪ್ರಮುಖ ರಸ್ತೆಗಳಲ್ಲಿ ಒಂದಾದ ಎಂ.ಜಿ.ರಸ್ತೆಯು ಮೆರವಣಿಗೆ ಅಥವಾ ಜಾಥಾ ಸಮಯದಲ್ಲಿ ಇಡೀ ರಸ್ತೆಯನ್ನೇ ಬೆಳಿಗ್ಗಿನಿಂದ ಸಂಜೆಯವರೆಗೂ ಬಂದ್ ಮಾಡಲಾಗುತ್ತಿದೆ. ಇದರಿಂದ ವ್ಯಾಪಾರ ವಹಿವಾಟು ಕುಂಠಿತ ವಾಗಿದೆ ಎಂದು ಅಸಮಾಧಾನ ಹೊರಹಾಕಿದ ವರ್ತಕರು ಕನಿಷ್ಟ ಮೂರ್ನಾಲ್ಕು ಗಂಟೆಗೆ ಮಾತ್ರ ಮೆರವಣಿಗೆ ಸೀಮಿ ತಗೊಳಿಸಿ ವ್ಯವಹಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂದರು.
ಇತ್ತೀಚಿನ ದಿನಗಳಲ್ಲಿ ನಗರ ಸಮೀಪದಲ್ಲಿ ಹಲವಾರು ಸೂಪರ್ಮಾರ್ಕೆಟ್ಗಳು ಪ್ರಾರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಸಣ್ಣಪುಟ್ಟ ದಿನಸಿ, ಕಿರಣಿ, ಸ್ಟೇಷನರಿ ಸೇರಿದಂತೆ ಇನ್ನಿತರೆ ಅಂಗಡಿದಾರರು ವ್ಯಾಪಾರ ಕುಟುತ್ತಾ ಸಾಗುತ್ತಿದೆ. ಇದರ ಬೆನ್ನಲ್ಲೇ ಜೀರೋ ಪಾರ್ಕಿಂಗ್, ರಸ್ತೆ ಬಂದ್ಗೊಳಿಸಿದರೆ ವರ್ತಕರ ಜೀವನ ತೀವ್ರ ಸಂಕಷ್ಟ ಸಿಲುಕಲಿದೆ ಎಂದು ಹೇಳಿದರು.
ಆ ನಿಟ್ಟಿನಲ್ಲಿ ನಗರಸಭಾ ವ್ಯಾಪ್ತಿಯಲ್ಲಿ ಅವೈಜ್ಞಾನಿಕ ಕೈಗೊಂಡಿರುವ ಆದೇಶವನ್ನು ಹಿಂಪಡೆದು ಸ್ಥಳೀಯ ವರ್ತಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸಂಘದ ಕಾರ್ಯದರ್ಶಿ ತನೋಜ್ಕುಮಾರ್, ಖಜಾಂಚಿ ಸತಿಶ್, ಸಹ ಕಾರ್ಯದರ್ಶಿ ಸಿ.ಆರ್.ರಮೇಶ್, ವಕ್ತಾರ ಅಶೋಕ್ಕುಮಾರ್, ಜಂಟಿ ಕಾರ್ಯದರ್ಶಿ ಹರೀಶ್, ಸದಸ್ಯರಾದ ಕುಮಾರ್, ನಾಗ ರಾಜ್, ಉಮೇಶ್, ಪ್ರೇಮ್ಕುಮಾರ್, ರಘು, ಅಮರ್ ಮತ್ತಿತರರು ಹಾಜರಿದ್ದರು.
Appeal to District In-charge Minister and City Council President