ಚಿಕ್ಕಮಗಳೂರು: ಅಯೋಧ್ಯೆಯಲ್ಲಿ ಭಗವಾನ್ ಶ್ರೀಬಾಲರಾಮನ ಪ್ರಾಣ ಪ್ರತಿ?ಪನೆ ಅಂಗವಾಗಿ ಪ್ರಧಾನಮಂತ್ರಿಗಳ ಸ್ವಚ್ಚತಾ ಕರೆಯ ಮೇರೆಗೆ ನಗರದ ಶ್ರೀ ಕೋದಂಡರಾಮಚಂದ್ರಸ್ವಾಮಿ ದೇಗುಲ ದಲ್ಲಿ ನಗರ ಬಿಜೆಪಿ ವತಿಯಿಂದ ಕಾರ್ಯಕರ್ತರು ಸೋಮವಾರ ಮುಂಜಾನೆ ದೇಗುಲವನ್ನು ಸ್ವಚ್ಚಗೊಳಿಸುವ ಮೂಲಕ ಸಾಮೂಹಿಕವಾಗಿ ಶ್ರಮದಾನ ನಡೆಸಿದರು.
ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಮಾಜಿ ಸಚಿವ ಸಿ.ಟಿ.ರವಿ ಭವ್ಯ ಭಾರತದ ಸಾಂಸ್ಕೃತಿಕ ಇತಿ ಹಾಸ ರಾಮಾಯಣವಿಲ್ಲದೇ ಪೂರ್ಣಗೊಳಿಸಲು ಸಾಧ್ಯವಿಲ್ಲ. ಅಂತಹ ಪರಂಪರೆ ಹೊಂದಿರುವ ಅಯೋಧ್ಯೆಯಲ್ಲಿ ಸುಮಾರು ಐದು ಶತಮಾನದ ಹೋರಾಟದ ಫಲವಾಗಿ ಶ್ರೀರಾಮಚಂದ್ರನ ಮಂದಿರ ನಿರ್ಮಾಣವಾಗುತ್ತಿದೆ. ಆ ನಿಟ್ಟಿನಲ್ಲಿ ದೇವಾಲಯವನ್ನು ಸ್ವಚ್ಚಗೊಳಿಸುವ ಕಾರ್ಯಕ್ಕೆ ಮುಂದಾಗಿದೆ ಎಂದು ಹೇಳಿದರು.
ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಶ್ರೀರಾಮ ಪ್ರಾಣಪ್ರತಿಷ್ಟಾಪನೆ ಅಂಗವಾಗಿ ಒಂದು ವಾರಗಳ ಕಾಲ ಇಡೀ ದೇಶಾದ್ಯಂತ ಸ್ವಚ್ಚತಾ ಅಭಿಯಾನ ಕೈಗೊಳ್ಳಬೇಕು. ವಿಶೇಷವಾಗಿ ದೇಗುಲಗಳ ಸ್ವಚ್ಚತೆಗೆ ಆದ್ಯತೆ ನೀಡಬೇಕೆಂದು ಕರೆಕೊಟ್ಟಿರುವ ಹಿನ್ನೆಲೆಯಲ್ಲಿ ನಿನ್ನೆ ಕಳಸಾಪುರದ ದೇವಾಲಯ ಹಾಗೂ ಇಂದು ಶ್ರೀ ಕೋದಂಡರಾಮಚಂದ್ರ ದೇವಾಲಯಕ್ಕೆ ಸ್ವಚ್ಚತಾ ಕಾರ್ಯಕ್ಕೆ ಚಾಲನೆ ನೀಡಲಾಗಿದೆ ಎಂದರು.
ಹೀಗಾಗಿ ಜಿಲ್ಲೆ ಹಾಗೂ ನಾಡಿನ ಸಮಸ್ತ ಜನತೆ ತಮ್ಮ ಗ್ರಾಮಗಳಲ್ಲಿರುವ ದೇವಾಲಯವನ್ನು ಅಚ್ಚುಕಟ್ಟಾಗಿ ಸ್ವಚ್ಚಗೊಳಿಸಿ ಆಂದೋಲನವನ್ನಾಗಿ ಮಾಡಬೇಕು. ಸ್ವಚ್ಚತೆ ಎಲ್ಲಿರುವುದು ಆ ಪ್ರದೇಶದಲ್ಲಿ, ಮನಸ್ಸಿನಲ್ಲಿ ಹಾಗೂ ಹೃದ ಯದಲ್ಲಿ ಭಗವಾನ್ ಶ್ರೀರಾಮನು ನೆಲೆಸಿರಲು ಸಾಧ್ಯ ಎಂಬ ಹಿರಿಯ ನಂಬಿಕೆಗನುಣವಾಗಿ ದೇವಾಲಯವನ್ನು ಸ್ವಚ್ಚವಾಗಿಡುವ ಕೆಲಸ ಮಾಡಬೇಕು ಎಂದರು.
ಯಾವುದೇ ದೇವಾಲಯಗಳು ಮೊದಲು ಜಾತಿ, ಅಸ್ಪಶ್ಯತೆಯಿಂದ ಮುಕ್ತವಾಗಬೇಕು. ಶುಚಿತ್ವದ ವಿಚಾರ ದಲ್ಲಿ ಜಾತಿ, ಬೇಧ ಹಾಗೂ ತಾರತಮ್ಯ ಹೊಂದದೇ ಸದುದ್ದೇಶವನ್ನಿಟ್ಟುಕೊಂಡು ಸ್ವಚ್ಚತೆಯಲ್ಲಿ ತೊಡಗಿಸಿದರೆ ಮಾತ್ರ ಪ್ರಭು ಶ್ರೀರಾಮನ ಪ್ರಾಣಪ್ರತಿಷ್ಟಾಪನೆಗೆ ಸಂಪೂರ್ಣ ಅರ್ಥ ಮೂಡಲಿದ್ದು ಸರ್ವರು ಒಂದೇ ಎಂಬುದನ್ನು ಮನೆ, ಮನದಲ್ಲಿ ಮೂಡಿಸಿಕೊಳ್ಳುವ ಸಂಕಲ್ಪ ರೂಢಿಸಿಕೊಳ್ಳಬೇಕು ಎಂದು ತಿಳಿಸಿದರು.
ಬಿಜೆಪಿ ನಗರಾಧ್ಯಕ್ಷ ಮಧುಕುಮಾರ್ ರಾಜ್ ಅರಸ್ ಮಾತನಾಡಿ ಶ್ರೀರಾಮಪ್ರಭುವಿನ ಭವ್ಯ ಮಂದಿರದ ನಿರ್ಮಾಣದ ಅಂಗವಾಗಿ ನಗರ ಕಮಿಟಿಯಿಂದ ಇಂದು ಸ್ವಚ್ಚತಾ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ಜ.೨೨ ರವರೆಗೂ ನಗರದ ವಿವಿಧ ದೇಗುಲಗಳಲ್ಲಿ ಸ್ವಚ್ಚತೆ ನಡೆಸಿ ಬಾಲರಾಮನ ಮಂದಿರ ಪ್ರಾಣ ಪ್ರತಿಷ್ಟಾಪನೆಗೆ ಸಕ್ರಿಯ ವಾಗಿ ತೊಡಗಿಸಿಕೊಂಡಿದೆ ಎಂದರು.
ಈ ಸಂದರ್ಭದಲ್ಲಿ ಕನ್ನಡಪೂಜಾರಿ ಹಿರೇಮಗಳೂರು ಕಣ್ಣನ್, ನಗರಸಭಾ ಉಪಾಧ್ಯಕ್ಷ ಅಮೃತೇಶ್ ಚೆನ್ನಕೇಶವ, ಬಿಜೆಪಿ ನಗರಾಧ್ಯಕ್ಷ ಮಧುಕುಮಾರ್ ರಾಜ್ಅರಸ್, ಜಿಲ್ಲಾ ಎಸ್ಸಿ ಘಟಕದ ಅಧ್ಯಕ್ಷ ಕುರುವಂಗಿ ವೆಂಕ ಟೇಶ್, ನಗರ ಅಧ್ಯಕ್ಷ ಕೇಶವ, ಯುವಮೋರ್ಚಾ ಜಿಲ್ಲಾಧ್ಯಕ್ಷ ಸಂತೋಷ್ ಕೋಟ್ಯಾನ್, ಮಾದ್ಯಮ ಪ್ರಮುಖ್ ಅಂ ಕಿತಾ, ಮುಖಂಡರುಗಳಾದ ಪುಷ್ಪರಾಜ್, ರಾಜ್ಕುಮಾರ್, ಹಿರೇಮಗಳೂರು ಪುಟ್ಟಸ್ವಾಮಿ ಮತ್ತಿತರರು ಹಾಜ ರಿದ್ದರು.
Mass donation by cleaning the temple