ಚಿಕ್ಕಮಗಳೂರು: ಅಯೋಧ್ಯೆಯಲ್ಲಿ ಐತಿಹಾಸಿಕ ರಾಮಮಂದಿರದ ಉದ್ಘಾಟನೆಯ ಅಂಗವಾಗಿ ನಗರದಲ್ಲಿ ಜನವರಿ ೨೦ರಂದು ಶನಿವಾರ, ಶ್ರೀ ರಾಮ ಸಾಂಸ್ಕೃತಿಕ ಸಂಭ್ರಮವನ್ನು ನಗರದ ಸುಗಮ ಸಂಗೀತಗಂಗಾ ಸೇರಿದಂತೆ ಎಲ್ಲಾ ಸಾಂಸ್ಕೃತಿಕ ಸಂಘಗಳು ನಡೆಸಲು ಉದ್ದೇಶಿಸಲಾಗಿದೆ ಎಂದು ಸುಗಮ ಸಂಗೀತ ಗಂಗಾದ ಉಪಾಧ್ಯಕ್ಷರಾದ ಸ. ಗಿರಿಜಾಶಂಕರ ತಿಳಿಸಿದರು.
ಈ ಕುರಿತು ಇಂದು ನಗರದ ಪ್ರೆಸ್ಕ್ಲಬ್ ನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಈ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮವನ್ನು ಬಸವನಹಳ್ಳಿಯ ಬ್ರಹ್ಮಸಮುದ್ರ ರಂಗಣ್ಣನವರ ಕಲ್ಯಾಣ ಮಂಟಪದಲ್ಲಿ ಅಂದು ಸಂಜೆ ೫.೩೦ಕ್ಕೆ (ಶ್ರೀರಾಮನನ್ನು) ಸಾಂಸ್ಕೃತಿಕವಾಗಿ ಅಭಿವ್ಯಕ್ತಿಗೊಳಿಸುವ, ನೃತ್ಯ, ಸಂಗೀತ, ಗಮಕ, ಯಕ್ಷಗಾನ, ಚಿತ್ರಕಲೆ, ಗರ್ಭಾನೃತ್ಯ, ಭಜನಾ ಶೈಲಿ ಹಾಗೂ ಇನ್ನಿತರ ವೈವಿಧ್ಯಮಯ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ ಎಂದರು.
ಈ ಕಾರ್ಯಕ್ರಮದಲ್ಲಿ ನಗರದ ಮನೋರಂಜಿನಿ ಮಹಾವಿದ್ಯಾಲಯ, ನಾದ ಚೈತನ್ಯ, ದಾಸಸಾಹಿತ್ಯ ಭಜನಾ ಮಂಡಳಿ, ಪೂರ್ವಿ ಸುಗಮ ಸಂಗೀತ ಅಕಾಡೆಮಿ, ಮಲ್ಲಿಗೆ ಸುಗಮ ಸಂಗೀತ ಟ್ರಸ್ಟ್, ಆರಾಧನಾ ಸಂಗೀತ ಶಾಲೆ, ರಾಗರಂಜಿನಿ ಸಂಗೀತ ಶಾಲೆ, ವಾಗ್ಗೇವಿ ಸಂಗೀತ ಶಾಲೆ, ಅಮೃತವರ್ಷಿಣಿ ಸಂಗೀತ ಶಾಲೆ, ಪಾವನಿ ವೀಣಾಶಾಲೆ, ಕರ್ನಾಟಕ ಸಂಗಮ ಸಂಗೀತ ಪರಿಷತ್ತು, ವಿಷ್ಣು ಸಮಾಜ, ಮೂಕಾಂಬಿಕಾ ನೃತ್ಯ ಶಾಲೆ. ಶ್ರೀ ಕಂಠೇಶ್ವರ ಕಲಾ ಮಂದಿರ. ನೂಪುರ ಆಕಾಡೆಮಿ, ಭರತ ಕಲಾಕ್ಷೇತ್ರ. ರಾಗ ತಾಳ ತಂಡ, ಸುವಿಧಾ ನಾಟ್ಯ ನಿಕೇತನ, ಯಕ್ಷಸಿರಿ ನಾಟ್ಯ ವೃಂದ, ಇಚ್ಛಾಶಕ್ತಿ ನಾಟ್ಯಾಲಯ, ಗುಜರಾತಿ ಪರಿವಾರ, ಶಾಂತಿನಿಕೇತನ ಚಿತ್ರಕಲಾ ಮಹಾವಿದ್ಯಾಲಯ, ಸಪ್ತಸ್ವರ ಸಂಗೀತ ಶಾಲೆ ಮತ್ತು ಗಾಯತ್ರಿ ಮಹಿಳಾ ಮಂಡಳಿಗಳು ವೈವಿಧ್ಯಮಯ ಕಾರ್ಯಕ್ರಮಗಳನ್ನು ನೀಡಲಿವೆ ಎಂದು ಮಾಹಿತಿ ನೀಡಿದರು.
ಸಾಂಸ್ಕೃತಿಕ ರಾಷ್ಟ್ರೀಯತೆಯನ್ನು ಬಿಂಬಿಸುವ ಈ ಸಂಭ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಲಾಭಿಮಾನಿಗಳು, ಸಾರ್ವಜನಿಕರು ಭಾಗವಹಿಸಬೇಕೆಂದು ಮನವಿ ಮಾಡಿದರು.
ಈ ಸುದ್ದಿಗೋಷ್ಟಿಯಲ್ಲಿ ಸುಗಮ ಸಂಗೀತಗಂಗಾದ ಸಂಚಾಲಕರಾದ ಎಂ.ಎಸ್ ಸುಧೀರ್, ಮಲ್ಲಿಗೆ ಸುಧೀರ್ ಪಾಲ್ಗೊಂಡಿದ್ದರು.
Sri Rama cultural celebration in the city on January 20