ಚಿಕ್ಕಮಗಳೂರು: ಸಮಾಜದ ಗುರುಗಳು ಮತ್ತು ಹಿರಿಯರು ರಾಜ್ಯಾದ್ಯಂತ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಯುವ ಪೀಳಿಗೆಗೆ ನಮ್ಮ ಭಾಷೆ ಸಂಸ್ಕೃತಿಯ ಜೋತೆಗೆ ಸಂಸ್ಕಾರವನ್ನು ನೀಡಿ ರಾಜ್ಯಕ್ಕೆ ಮಾದರಿ ಆಗಿದ್ದಾರೆ ಎಂದು ಜಿಲ್ಲಾ ಒಕ್ಕಲಿಗರ ಮಹಿಳಾ ಸಂಘದ ಅಧ್ಯಕ್ಷರಾದ ಕಲ್ಪನಾಪ್ರದೀಪ್ ತಿಳಿಸಿದರು.
ಗುರುವಾರ ನಗರದ ಒಕ್ಕಲಿಗರ ಭವನದಲ್ಲಿ ಶ್ರೀ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಡಾ. ಬಾಲಗಂಗಾಧರನಾಥ ಸ್ವಾಮೀಗಳ ೭೯ನೇ ವರ್ಷದ ಜನ್ಮ ದಿನೋತ್ಸವ ಕಾರ್ಯಕ್ರಮದಲ್ಲಿ ಬಾಲಗಂಗಾಧರನಾಥ ಸ್ವಾಮೀಜಿಗಳ ಭಾವಚಿತ್ರಕ್ಕೆ ಪುಷ್ವನಮನ ಸಲ್ಲಿಸಿ ಮಾತನಾಡಿ ಸಮಾಜಕ್ಕೆ ಶಿಕ್ಷಣ ಮತ್ತು ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸಿ ರಾಜ್ಯದ ಮೂಲೆ ಮೂಲೆಗಳಲ್ಲು ವೈದ್ಯಕೀಯ ಮತ್ತು ಇಂಜಿನಿಯರಿಂಗ್ ಕಾಲೇಜುಗಳನ್ನು ಪ್ರಾರಂಬಿಸಿ ಯುವ ಪೀಳಿಗೆಗೆ ಹೆಚ್ಚಿನ ಅನುಕೂಲ ಮಾಡಿಕೊಟ್ಟವರು ಬಾಲಗಂಗಾಧರನಾಥ ಸ್ವಾಮೀಜಿ ಎಂದರು.
ಪೋಷಕರು ಮಕ್ಕಳಿಗೆ ಹಣದ ಕೊರತೆಯಿಂದ ಶಿಕ್ಷಣ ವಂಚಿತರನ್ನಾಗಿ ಮಾಡಬೇಡಿ ಸ್ವಾಮೀಜಿಯವರು ಎಲ್ಲಾ ವರ್ಗದವರಿಗೆ ಅನುಕೂಲವಾಗಲೆಂದು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಉನ್ನತ ವ್ಯಾಸಂಗ ಮಾಡುವವರಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಕಾವ್ಯಸುಕುಮಾರ್, ಕಾರ್ಯದರ್ಶಿ ಅಮಿತಾವಿಜೇಂದ್ರ, ಖಜಾಂಚಿ ಕೋಮಲಾರವಿ ಕಳವಾಸೆ, ನಿರ್ದೇಶಕರುಗಳಾದ ರಾಗಿಣಿಮಂಜುನಾಥ್, ಮುಂಜುಳಾಹರೀಶ್, ವೇದಚಂದ್ರಶೇಖರ್, ಚಂಪಾಜಗಧೀಶ್, ಅನುಪಮಾರಮೇಶ್, ವಿನುತಾಪ್ರಸಾದ್, ರಾಜೇಶ್ವರಿ ಅಭಿಷೇಕ್, ಕೀರ್ತಿಕೌಶಿಕ್ ಉಪಸ್ಥಿತರಿದ್ದರು.
Dr. from District Okkaligar Mahila Sangh at Okkaligar Bhavan in the city. Birth anniversary of Balagangadharnath Swami