ಚಿಕ್ಕಮಗಳೂರು: ಕನ್ನಡಸೇನೆ ರಾಜ್ಯಾದ್ಯಕ್ಷ ಕೆ.ಕುಮಾರ್ ಜಿಲ್ಲೆಗಾಗಮಿಸಿದ ಹಿನ್ನೆಲೆಯಲ್ಲಿ ಜಿಲ್ಲಾ ಘಟಕದ ವತಿಯಿಂದ ನಗರದ ಮಲ್ಲಂದೂರು ರಸ್ತೆ ಸಮೀಪದ ಭಗತ್ಸಿಂಗ್ ಆಟೋ ನಿಲ್ದಾಣದಲ್ಲಿ ಜೈ ಘೋಷ ಕೂಗುತ್ತಾ ರಾಜ್ಯಾಧ್ಯಕ್ಷರಿಗೆ ಆತ್ಮೀಯವಾಗಿ ಸ್ವಾಗತಿಸಿದರು.
ಬಳಿಕ ಮಾತನಾಡಿದ ಕೆ.ಕುಮಾರ್ ಕನ್ನಡ ಭಾಷೆ, ಸಂಸ್ಕೃತಿ ಉಳಿಸುವ ನಿಟ್ಟಿನಲ್ಲಿ ಸಂಘವು ಯಾವುದೇ ಬೆದ ರಿಕೆಗಳಿಗೆ ಜಗ್ಗದೇ ಧೈರ್ಯವಾಗಿ ಮುನ್ನುಗ್ಗಿ ಕನ್ನಡ ಬೆಳವಣಿಗೆ ಸಹಕರಿಸುತ್ತಿದೆ. ಜೊತೆಗೆ ಅಂಗಡಿದಾರರು ನಾಮ ಫಲಕದಲ್ಲಿ ಶೇ.೮೦ರಷ್ಟು ಕನ್ನಡ ಪದಗಳ ಬಳಕೆ ಮಾಡುವ ನಿಟ್ಟಿನಲ್ಲಿ ಫೆ.೨೮ ತನಕ ಗಡುವು ನೀಡಲಾಗಿದೆ ಎಂದರು.
ಇವುಗಳನ್ನು ಮೀರಿ ಅಂಗಡಿದಾರರು ನಾಮಫಲಕದಲ್ಲಿ ಬದಲಾವಣೆಗೊಳಿಸದಿದ್ದಲ್ಲಿ ೨೮ರ ಬಳಿಕ ಕನ್ನಡ ಸೇನೆ ಹಾಗೂ ಕನ್ನಡಪರ ಸಂಘಟನೆಗಳ ಜೊತೆಗೂಡಿ ಇಡೀ ರಾಜ್ಯಾದ್ಯಂತ ದೊಡ್ಡ ಅಭಿಯಾನವನ್ನು ಕೈ ಗೊಂಡು ಆಂಗ್ಲವ್ಯಾಮೋಹದ ಅಂಗಡಿದಾರರ ನಾಮಫಲಕಗಳಿಗೆ ಮಸಿಬಳೆಯುವ ಕೆಲಸಕ್ಕೆ ಮುಂದಾಗಲಾಗುವುದು ಎಂ ದು ತಿಳಿಸಿದರು.
ಹೀಗಾಗಿ ನಾಡಿನ ಸಾವಿರಾರು ವರ್ಷಗಳ ಪರಂಪರೆ ಹೊಂದಿರುವ ಕನ್ನಡ ಭಾಷೆಯ ಬೆಳವಣಿಗೆ ನಾವುಗಳೇ ಸಹಕರಿಸದಿದ್ದರೆ ಕನ್ನಡ ಮಣ್ಣಿನ ಕಂಪು ಮರೆಯಾಗುವ ಸಾಧ್ಯತೆಯಿರುವ ಹಿನ್ನೆಲೆಯಲ್ಲಿ ರಾಜ್ಯದ ಅಂಗಡಿ ಮಾಲೀ ಕರು ಜಾಗೃತರಾಗಿ ನಾಮಫಲಕದಲ್ಲಿ ಶೇ.೮೦ ರಷ್ಟು ಕನ್ನಡ ಪದ ಬಳಸಿ ನಾಡಿನ ಶ್ರೇಯೋಭಿವೃದ್ದಿಗೆ ಶ್ರಮಿಸಬೇಕು ಎಂದರು.
ಕನ್ನಡಸೇನೆ ಜಿಲ್ಲಾಧ್ಯಕ್ಷ ಪಿ.ಸಿ.ರಾಜೇಗೌಡ ಮಾತನಾಡಿ ರಾಜ್ಯಾಧ್ಯಕ್ಷರು ಬಹುದಿನಗಳ ಬಳಿಕ ಜಿಲ್ಲೆಗೆ ತಮ್ಮ ವೈಯಕ್ತಿಕ ಕಾರ್ಯಕ್ರಮಕ್ಕೆ ಆಗಮಿಸಿದ ಹಿನ್ನೆಲೆಯಲ್ಲಿ ಜಿಲ್ಲಾ ಘಟಕದ ಆತ್ಮೀಯವಾಗಿ ಗೌರವಿಸಲಾಗಿದೆ. ಅವರ ಆಶಯದಂತೆ ಮುಂಬರುವ ದಿನಗಳಲ್ಲಿ ಕನ್ನಡ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ರಾಜ್ಯಾದ್ಯಕ್ಷರ ಕೈಬಲಪಡಿಸಿ ನಾಡಿನ ಏಳಿಗೆಗೆ ಪ್ರಾಮಾಣಿಕವಾಗಿ ದುಡಿಯಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸೇನೆಯ ರಾಜ್ಯ ಮುಖಂಡ ರವಿ, ಜಿಲ್ಲಾ ಆಟೋ ಘಟಕದ ಅಧ್ಯಕ್ಷ ಜಯಪ್ರಕಾಶ್, ಸಂಘಟನಾ ಕಾರ್ಯದರ್ಶಿ ಸತೀಶ್, ಮುಖಂಡರುಗಳಾದ ಶಂಕರೇಗೌಡ, ಹುಣಸೇಮಕ್ಕಿ ಲಕ್ಷ್ಮಣ್, ಶಿವು, ನವೀ ನ್, ಹರೀಶ್, ಪಾಲಾಕ್ಷಿ, ವಿನಯ್, ಅನ್ವರ್ ಮತ್ತಿತರರು ಹಾಜರಿದ್ದರು.
After the deadline of Feb. 28 nameplates must be blacked out