ಚಿಕ್ಕಮಗಳೂರು: ಮಹಿಳೆಯರು ಸಂಘ ಸಂಸ್ಥೆಗಳ ಮೂಲಕ ಸಂಘಟಿತರಾಗಿ ಸಮಾಜಸೇವೆ ಕೆಲಸವನ್ನು ಮಾಡಿ ಮಾದರಿಯಾಗಬೇಕೆಂದು ಅಖಿಲ ಭಾರತೀಯ ತೇರಾಪಂಥ್ ಮಹಿಳಾ ಮಂಡಲ್ ರಾಜ್ಯಾಧ್ಯಕ್ಷರಾದ ಜೈಪುರದ ಸರಿತಾಜೀ ಡಾಗಾ ತಿಳಿಸಿದರು.
ಭಾನುವಾರ ನಗರದ ರುಕ್ಮಿಣಿಯಮ್ಮ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಆವರಣದಲ್ಲಿ ಅಖಿಲ ಭಾರತೀಯ ತರಾಪಂಥ್ ಮಹಿಳಾ ಮಂಡಲ್ ಮತ್ತು ಚಿಕ್ಕಮಗಳೂರು ತೇರಾಪಂಥ್ ಮಹಿಳಾ ಮಂಡಲಿ ವತಿಯಿಂದ ಆಚಾರ್ಯ ಮಹಾಶ್ರೀಮಣ್ ಕನ್ಯಾಸುರಕ್ಷಾ ವೃತ್ತ ಮತ್ತು ಐದು ಬೇಂಚ್ಗಳನ್ನು ಉದ್ಘಾಟಿಸಿ ಮಾತನಾಡಿ ತೇರಾಪಂಥ್ ಮಹಿಳೆಯರು ರಾಜ್ಯದಾದ್ಯಂತ ಮಹಿಳಾ ಸಂಘಗಳನ್ನು ಒಗ್ಗೂಡಿಸಿಕೊಂಡು, ಜನಾಂಗದ ಅಭಿವೃದ್ಧಿಯ ಜೊತೆಗೆ ಸಮಾಜಕ್ಕೆ ಅಗತ್ಯ ಇರುವ ಕೆಲಸಗಳನ್ನು ಮಾಡಿ ಮಾದರಿಯಾಗಿದ್ದಾರೆ ಎಂದರು.
ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ಮಾತನಾಡಿ ಜೈನ ಸಂಘಕ್ಕೆ ನಗರದ ಆಸ್ಪತ್ರೆ ಆವರಣದಲ್ಲಿ ಆಚಾರ್ಯ ಮಹಾಶ್ರೀಮಣ್ ಕನ್ಯಾಸುರಕ್ಷಾ ವೃತ್ತ ಮಾಡಲು ಸಂಪೂರ್ಣ ಸಹಕಾರ ನೀಡಿ ಪ್ರತಿಯೋಬ್ಬರು ಹೆಣ್ಣು ಮಕ್ಕಳನ್ನು ರಕ್ಷಿಸಬೇಕು, ಹೆಣ್ಣು ಭ್ರೂಣ ಹತ್ಯೆಯನ್ನು ತಡೆಗಟ್ಟಬೇಕು ಎಂಬ ದ್ಯೇಯ ವಾಕ್ಯವನ್ನು ತೇರಾಪಂಥ್ ಮಹಿಳಾ ಮಂಡಳಿ ಇಟ್ಟುಕೊಂಡು ವೃತ್ತವನ್ನು ನಿರ್ಮಿಸಿದ್ದಾರೆ ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಮಂಗಳ.ಹೆಚ್.ಡಿ.ತಮ್ಮಯ್ಯ ಮಾತನಾಡಿ ಹೆಣ್ಣು ಸಮಾಜದ ಕಣ್ಣು, ಉನ್ನತ ಶಿಕ್ಷಣ ಮಾಡಿ ಪುರುಷರ ಸರಿಸಮಾನರಾಗಿ ಬೆಳೆದು ಸಮಾಜಸೇವಾ ಕೆಲಸವನ್ನು ಮಾಡುತ್ತಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಅಖಿಲ ಭಾರತೀಯ ತೇರಾಪಂಥ್ ಮಹಿಳಾ ಮಂಡಲದ ಕಾರ್ಯದರ್ಶಿ ನೀತೂಜೀ ಓಸ್ತ್ವಾಲ್, ಕಾರ್ಯಕಾರಿಣಿ ಸದಸ್ಯರಾದ ಸಂತೋಷ್ಜೀ ವೇದಾಮುಧಾ, ಸಹಕಾರ್ಯದರ್ಶಿ ಶಶಿಕಲಾಜೀ, ಜಿಲ್ಲಾಸ್ಪತ್ರೆ ವೈದ್ಯರಾದ ಡಾ. ಚಂದ್ರಶೇಖರ್ ಸಾಲಿಮಠ್, ಜೈನ್ ತೇರಾಪಂಥ್ ಸಭಾಧ್ಯಕ್ಷ ತಾರಾಚಂದ್ ಜೈನ್, ನಗರಸಭೆ ಸದಸ್ಯ ವಿಫುಲ್ಕುಮಾರ್ ಜೈನ್, ತೇರಾಪಂಥ್ ಮಹಿಳಾ ಮಂಡಳಿ ಅಧ್ಯಕ್ಷೆ ಗುಣವತಿನಾಹರ್, ಕಾರ್ಯದರ್ಶಿ ನರಿತಾಗಾಧಿಯಾ, ಅಣುವ್ರತ್ ಸಮಿತಿ ಅಧ್ಯಕ್ಷೆ ಮಂಜುಬಾಯಿ ಬನ್ಸಾಲಿ ಉಪಸ್ಥಿತರಿದ್ದರು. ಮದನ್ಚಂದ್ ಗಾಧಿಯಾ ಸ್ವಾಗತಿಸಿ ವಂದಿಸಿದರು.
Inauguration of Acharya Mahashriman Kanyasuraksha circle and five benches