ಚಿಕ್ಕಮಗಳೂರು: ಜಿಲ್ಲೆಯಲ್ಲಿ ಸರ್ವೆ ಕಾರ್ಯ ಅಂತಿಮಗೊಳಿಸುವ ಮೊದಲು ಜಿಲ್ಲಾಧಿಕಾರಿಗಳು ಪರಿಶೀಲಿಸಿ ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳು, ಹೋರಾಟ ಸಮಿತಿ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿ ಉಳಿದ ಭೂಮಿಗೆ ಮುಂದಿನ ಆದೇಶ ನೀಡಬೇಕೆಂದು ಕಸ್ತೂರಿ ರಂಗನ್ ವರದಿ ಮತ್ತು ಮುಳ್ಳಯ್ಯನಗಿರಿ ಮೀಸಲು ಯೋಜನೆ ವಿರೋಧಿ ಹೋರಾಟ ಸಮಿತಿ ಆಗ್ರಹಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಇಂದು ಈ ವಿ?ಯ ತಿಳಿಸಿದ ಸಮಿತಿ ಪ್ರಧಾನ ಸಂಚಾಲಕ ಎಸ್. ವಿಜಯ್ ಕುಮಾರ್ ಜಿಲ್ಲೆಯಲ್ಲಿ ನಡೆಸಲಾಗುತ್ತಿರುವ ಕಂದಾಯ ಮತ್ತು ಅರಣ್ಯ ಭೂಮಿಗಳ ಜಂಟಿ ಸರ್ವೆ ಕಾರ್ಯವು ತಾಲ್ಲೂಕಿನ ಸುಮಾರು ೧೮ ಸರ್ವೆ ನಂಬರ್ಗಳ ತ್ವರಿತಗತಿಯಲ್ಲಿ ಮುಗಿಸಿ ತಾಲ್ಲೂಕು ಭೂ ಮಾಪನ ಅಧಿಕಾರಿಗಳ ರವರಿಗೆ ಸಲ್ಲಿಸಿ ಜಿಲ್ಲೆಯ ಇತರೆ ತಾಲ್ಲೂಕುಗಳ ಸರ್ವೆ ಕಾರ್ಯ ನಡೆಸಲು ಮುಂದಾಗಿರುವುದನ್ನು ಅಭಿನಂದಿಸಿದರು.
ಸರ್ವೆ ಆಗಿರುವ ಪ್ರದೇಶಗಳಲ್ಲಿ ಯಾವ ರೀತಿ ಸರ್ವೆ ಕಾರ್ಯ ನಡೆದಿದೆ ಎಂಬುದು ನಿಗೂಢವಾಗಿದೆ. ದಯಮಾಡಿ ಸರ್ವೆ ಕಾರ್ಯ ಅಂತಿಮಗೊಳಿಸುವ ಮೊದಲು ಜಿಲ್ಲಾಧಿಕಾರಿಗಳು ಪರಿಶೀಲಿಸಿ ಸಾರ್ವಜನಿಕ ಉಪಯೋಗದ ಭೂಮಿ ಶಾಲೆ, ಸ್ಮಶಾಣ, ರಸ್ತೆ ಮತ್ತು ಇತರೆ ಅಭಿವೃದ್ಧಿಗೆ ಅಗತ್ಯವಾದ ಭೂಮಿ ಹಾಗೂ ಪಂಚಾಯತಿ ವ್ಯಾಪ್ತಿಯ ದನಕರುಗಳಿಗೆ ಗೋಮಾಳವನ್ನು ಮೀಸಲಿಟ್ಟು ಉಳಿಕೆ ಭೂಮಿಯ ಬಗ್ಗೆ ಸೂಕ್ತ ಕ್ರಮ ವಹಿಸಬೇಕೆಂದು ಒತ್ತಾಯಿಸಿದರು.
ಜಿಲ್ಲಾ ಪಂಚಾಯಿತಿಯಲ್ಲಿ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಕೆ.ಡಿ.ಪಿ ಸಭೆಯಲ್ಲಿ ಸ್ಥಳೀಯ ಶಾಸಕ ಹೆಚ್.ಡಿ ತಮ್ಮಯ್ಯನವರ ಒತ್ತಾಯದಂತೆ ಮುಳಯ್ಯನಗಿರಿ ಸಂರಕ್ಷಿತ ಮೀಸಲು ಪ್ರದೇಶದ ಪ್ರಸ್ತಾವನೆಯನ್ನು ಮತ್ತೊಮ್ಮೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಜನಾಭಿಪ್ರಾಯ ಪಡೆಯುವ ನಿರ್ಣಯಕ್ಕೆ ಅಭಿನಂದಿಸುತ್ತೇವೆ. ಹಾಗೂ ಈ ಬಾರಿಯಾದರೂ ಜನಾಭಿಪ್ರಾಯದಂತೆ ಅಧಿಕಾರಿಗಳು ಕ್ರಮ ಕೈಗೊಂಡು ಜಿಲ್ಲೆಯ ಅರಣ್ಯ ಹಾಗೂ ಜನಸಾಮಾನ್ಯರ ಸಮತೋಲನ ಕಾಪಾಡಬೇಕೆಂದು ಅಭಿಪ್ರಾಯಪಟ್ಟರು.
ಈಗಾಗಲೇ ಸರ್ಕಾರ ಅಕ್ರಮ ಸಕ್ರಮ ಸಮಿತಿಗಳನ್ನು ರಚಿಸಿದ್ದು ಜಿಲ್ಲೆಯ ತಹಶೀಲ್ದಾರ್ರವರುಗಳು ಆಯಾ ತಾಲ್ಲೂಕಿನ ವ್ಯಾಪ್ತಿಯಲ್ಲಿ ಗೋಮಾಳ ಭೂಮಿಗಳನ್ನು ಕೂಡಲೇ ನಿಗಧಿಗೊಳಿಸಿಕೊಂಡು ಅರ್ಜಿ ಸಲ್ಲಿಸಿರುವ ಅರ್ಹ ಫಲಾನುಭವಿಗಳಿಗೆ ಸಾಗುವಳಿ ಚೀಟಿ ಮತ್ತು ನಿವೇಶನ ರಹಿತರಿಗೆ ನಿವೇಶನ ನೀಡಲು ಕ್ರಮ ವಹಿಸಬೇಕೆಂದು ಆಗ್ರಹಿಸಿದರು.
ಜಿಲ್ಲೆಯ ಸೆಕ್ಷನ್ ೪(೧) ಪ್ರದೇಶಗಳ ಅಂತಿಮಗೊಳಿಸಿ ಮೀಸಲು ಅರಣ್ಯ ಮಾಡಲು ಈಗಿರುವ ಅರಣ್ಯ ವ್ಯವಸ್ಥಾಪನಾಧಿಕಾರಿಗಳ ಜೊತೆಯಲ್ಲಿ ಹೊಸದಾಗಿ ಜಿಲ್ಲೆಯ ಚಿಕ್ಕಮಗಳೂರು, ಮೂಡಿಗೆರೆ, ಕೊಪ್ಪ, ಶೃಂಗೇರಿ ಹಾಗೂ ಕಳಸಾ ತಾಲ್ಲೂಕುಗಳ ಮೀಸಲು ಅರಣ್ಯ ಪ್ರಸ್ತಾವನೆಯ ಕಡತಗಳನ್ನು ಇತ್ಯರ್ಥಗೊಳಿಸಲು ಸಾಗರದ ಹುಲಿ ಅರಣ್ಯ ವ್ಯವಸ್ಥಾಪನಾಧಿಕಾರಿಗಳಾದ ಕೆ.ಸುಬ್ರಾಯ ಕಾಮತ್ರವರನ್ನು ನೇಮಿಸಲಾಗಿದೆ ಎಂದರು.
ಅರಣ್ಯ ವ್ಯವಸ್ಥಾಪನಾಧಿಕಾರಿಗಳಿಗೆ ಕಚೇರಿ ನಡೆಸಲು ಜಿಲ್ಲೆಯ ಎಲ್ಲಾ ರೈತರಿಗೂ ಸುಗಮವಾಗಿ ಅರ್ಜಿ ಸಲ್ಲಿಸಿ ಅಧಿಕಾರಿಗಳನ್ನು ಸಂಪರ್ಕಿಸಲು ಅವಕಾಶವಾಗುವಂತೆ ಚಿಕ್ಕಮಗಳೂರು ತಾಲ್ಲೂಕು ಕಚೇರಿಯಲ್ಲಿ ಕೊಠಡಿ ನೀಡಬೇಕೆಂದು ಜಿಲ್ಲಾ ಮಟ್ಟದ ಕೆ.ಡಿ.ಪಿ ಸಭೆಯಲ್ಲಿ ನಿರ್ಣಯಿಸಲಾಗಿದೆಯೆಂದು ಶಾಸಕರು ತಿಳಿಸಿದ್ದು ಅದರಂತೆ ಜಿಲ್ಲಾಧಿಕಾರಿಗಳು ಕೊಠಡಿ ನೀಡಲು ತಹಶೀಲ್ದಾರ್ಗೆ ಸೂಚನೆ ನೀಡಿ ಕೊಠಡಿ ವ್ಯವಸ್ಥೆ ಮಾಡಿಕೊಡಬೇಕೆಂದು ಒತ್ತಾಯಿಸಿದರು. ಪತ್ರಿಕಾಗೋಷ್ಠಿಯಲ್ಲಿ ಹೋರಾಟ ಸಮಿತಿ ಸಂಚಾಲಕರುಗಳಾದ ಕೆ.ಕೆ ರಘು, ಪ್ರಭು ರೇಣುಕಾರಾz
Kasturi Rangan Report and Mullaiyanagiri Reserve Project Struggle Committee press conference