ಚಿಕ್ಕಮಗಳೂರು: ಜಿಲ್ಲೆಯ ತರೀಕೆರೆ ತಾಲೂಕು ಕಸಬಾ ಹೋಬಳಿ ಹೆಚ್.ರಂಗಾಪುರ ಗ್ರಾಮದ ನಿವೇಶನ ರಹಿತರಿಗೆ ಒಂದು ವಾರದಲ್ಲಿ ನಿವೇಶನ ಕೊಡದಿದ್ದರೆ ಅಲ್ಲಿನ ತಹಸೀಲ್ದಾರ್ ಕಚೇರಿ ಎದುರು ಅಹೋರಾತ್ರಿ ಧರಣಿ ನಡೆಸಲಾಗುವುದು ಎಂದು ಕರ್ನಾಟಕ ದಲಿತ ಸಂಘ? ಸಮಿತಿ (ಅಂಬೇಡ್ಕರ್ ವಾದ) ಜಿಲ್ಲಾ ಪ್ರಧಾನ ಸಂಚಾಲಕ ಮರ್ಲೆ ಅಣ್ಣಯ್ಯ ತಿಳಿಸಿದರು.
ಇಂದು ಪತ್ರಿಕಾಗೋಷ್ಠಿಯಲ್ಲಿ ಈ ವಿ?ಯ ತಿಳಿಸಿದ ಅವರು ಹೆಚ್.ರಂಗಾಪುರ ಗ್ರಾಮದಲ್ಲಿ ಸುಮಾರು ೫೦೦ ಕುಟುಂಬಗಳು ಸ್ವಂತ ಖರ್ಚಿನಿಂದ ರಸ್ತೆ, ಕುಡಿಯುವ ನೀರು ಮುಂತಾದ ಮೂಲಭೂತ ಸೌಕರ್ಯಗಳನ್ನು ನಿರ್ಮಿಸಿಕೊಂಡು ವಾಸಿಸುತ್ತಿದ್ದು ಗ್ರಾಂ.ಪಂ ಅಧ್ಯಕ್ಷರು ಚಿಂತಾವಣಿ ನಡೆಸಿ ಗುಡಿಸಲುಗಳಿಗೆ ಬೆಂಕಿ ಹಾಕಿದ್ದಾರೆ ಎಂದು ಆರೋಪಿಸಿದರು.
ಹೆಚ್.ರಂಗಾಪುರ ಗ್ರಾಮದ ಸರ್ವೆ ನಂಬರ್ ೧೪ ರಲ್ಲಿ ೫೭ ಎಕರೆ ೧೬ ಗುಂಟೆ ಸರ್ಕಾರಿ ಜಮೀನಿನ ಪೈಕಿ ೧೫ ಎಕರೆ ಜಾಗದಲ್ಲಿ ನಿವೇಶನ ರಹಿತರು ಗುಡಿಸಲು ನಿರ್ಮಿಸಿಕೊಂಡು ಜೈಭೀಮ್ ನಗರ ಎಂದು ಹೆಸರು ನಾಮಕರಣ ಮಾಡಿಕೊಂಡು ಗುಡಿಸಲು ಕಟ್ಟಿಕೊಂಡು ವಾಸಿಸುತ್ತಿದ್ದು ಈ ಜಾಗದಲ್ಲಿ ಕೆಲವು ಭೂಗಳ್ಳರು, ಭೂಮಿ ಹೊಡೆಯಲು ಸಂಚು ಮಾಡಿ ಇಲ್ಲಿ ವಾಸಮಾಡುತ್ತಿದ್ದ ಬಡವರ ಗುಡಿಸಲುಗಳನ್ನು ಕಿತ್ತು ಸುಟ್ಟಾಗಿದ್ದು ಅಲ್ಲಿಯ ಬಡವರಿಗೆ ಜೀವ ಭಯ ಸೃಷ್ಟಿ ಮಾಡಿ ಅವರನ್ನು ಆ ಹೊಕ್ಕಲೆಬ್ಬಿಸಿದ್ದಾರೆ ಎಂದು ದೂರಿದರು.
ಎಂ.ಸಿ ಹಳ್ಳಿ ಎಚ್.ರಂಗಾಪುರ ಗ್ರಾಮದ ಸರ್ಕಾರಿ ಮಲ್ಲಯ್ಯನ ಕರೆಯನ್ನು ಈ ಊರಿನ ಮೇಲ್ವರ್ಗದ ಗ್ರಾಮ ಪಂಚಾಯಿತಿ ಅಧ್ಯಕ್ಷರು ಒತ್ತುವರಿ ಮಾಡಿದ್ದು, ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ಉಸ್ತುವಾರಿ ಕಾರ್ಯದರ್ಶಿಗಳಿಗೆ ತಾಲೂಕು ಸಂಚಾಲಕರಾದ ರಾಮಚಂದ್ರರವರು ದಾಖಲೆ ಸಮೇತ ದೂರು ನೀಡಿದ್ದು ದೂರಿನ ಅನ್ವಯ ಕೆರೆ ಒತ್ತುವರಿ ತೆರವುಗೊಳಿಸಲು ಸರ್ಕಾರದಿಂದ ಆದೇಶ ಬಂದಿದ್ದು ತಹಶೀಲ್ದಾರ್ ಅವರು ರಾಜಕೀಯ ಒತ್ತಡಕ್ಕೆ ಮಣಿದು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಟೀಕಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಮಿತಿ ಜಿಲ್ಲಾ ಖಜಾಂಚಿ ಸಂತೋ? ಲಕ್ಯಾ, ಉದ್ದೇಬೋರನಹಳ್ಳಿ ರಮೇಶ್, ಮಧು, ರಮೇಶ್, ಮೋಹನ್, ವಿಕಾಸ್ ಮತ್ತಿತರರಿದ್ದರು.
If the homeless are not given a place within a week they will sit on a sit-in