ಚಿಕ್ಕಮಗಳೂರು: ರಾಜ್ಯದ ಜನರ ದುಡ್ಡನ್ನು ಬಿಟ್ಟಿ ಯೊಜನೆಗಳಿಗೆ ಬಳಸುತ್ತಿರುವುದರಿಂದ ಜಿಲ್ಲೆಯ ಅಭಿವೃದ್ಧಿ ಕುಂಠಿತವಾಗಿದೆ. ಶಾಸಕರು ತಮ್ಮ ಅವಯಲ್ಲಿ ತಂದಿರುವ ಹೊಸ ಅಭಿವೃದ್ಧಿ ಯೋಜನೆಗಳ ಬಗ್ಗೆ ಶ್ವೇತಪತ್ರ ಹೊರಡಿಸಲಿ ಎಂದು ಬಿಜೆಪಿ ಆಗ್ರಹಿಸಿದೆ.
ಬಿಜೆಪಿ ಮುಖಂಡ ಹಿರೇಮಗಳೂರು ಪುಟ್ಟಸ್ವಾಮಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,ರಾಜ್ಯದ ಜನ ತೆರಿಗೆ ಕಟ್ಟಿದ ಹಣವನ್ನು ಸರಕಾರ ಬಿಟ್ಟಿ ಯೋಜನೆಗಳಿಗೆ ಬಳಸಿದೆ. ಇದರಿಂದ ರಾಜ್ಯದ ಖಜಾನೆ ಬರಿದಾಗಿದೆ.ಲೋಕಸಭೆ ಚುನಾವಣೆ ನಂತರ ಈ ಬಿಟ್ಟಿ ಯೋಜನೆಗಳನ್ನು ಸರಕಾರ ನಿಲ್ಲಿಸುವ ಷಡ್ಯಂತರ ನಡೆಸಿದೆ ಎಂದು ಆರೋಪಿಸಿದರು.
ರಾಜ್ಯದ ಎಸ್ಸಿಎಸ್ಟಿ ಸಮುದಾಯಕ್ಕೆ ಬಳಸಬೇಕಾದ ೧೦ ಸಾವಿರ ರೂ.ಕೋಟಿ ಅನುದಾನವನ್ನು ಮುಸ್ಲೀಂ ಸಮುದಾಯಕ್ಕೆ ಬಿಡುಗಡೆ ಮಾಡಿದೆ. ಎಲ್ಲ ರಾಜ್ಯಕ್ಕೆ ನೀಡಿರುವ ತೆರಿಗೆ ಪಾಲಿನ ಬಗ್ಗೆ ಕೇಂದ್ರ ಅರ್ಥ ಸಚಿವೆ ನಿರ್ಮಲಾಸೀತರಾಮನ್ ಅವರು ಸ್ಪಷ್ಟನೆ ನೀಡಿದ್ದರೂ ಸಹ ತಮ್ಮ ರಾಜ್ಯಕ್ಕೆ ತೆರಿಗೆ ಪಾಲು ನೀಡಿಲ್ಲ ಎಂದು ರಾಜ್ಯ ಸರಕಾರ ಜನರಲ್ಲಿ ಗೊಂದಲ ಸೃಷ್ಟಿಮಾಡಿದೆ ಎಂದು ದೂರಿದರು.
ಕೇಂದ್ರದಿಂದ ಮಂಜೂರಾಗಿರುವ ಮೆಡಿಕಲ್ ಕಾಲೇಜನ್ನು ಶೀಘ್ರ ಪೂರ್ಣಗೊಳಿಸಬೇಕು.ಡಿಸಿ ಕಚೇರಿ ಸಂಕೀರ್ಣ, ಹೊಸ ಕೋರ್ಟ್ ಕಟ್ಟಡ, ಅರಣ್ಯಭವನ, ತಾಲೂಕು ಕಚೇರಿ, ಮೆಡಿಕಲ್ ಕಾಲೇಜು ಈ ಎಲ್ಲ ಕಾಮಗಾರಿಗಳು ಹಿಂದಿನ ಶಾಸಕ ಸಿ.ಟಿ.ರವಿ ಅವರ ಅಧಿಕಾರ ಅವಧಿಯಲ್ಲಿ ಮಂಜೂರಾಗಿವೆ. ಈಗಿನ ಶಾಸಕರು ೯ ತಿಂಗಳ ಅವಯಲ್ಲಿ ಯಾವ ಕಾಮಗಾರಿ ಹಾಗೂ ಅನುದಾನ ತಂದಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದರು.
ಮುಖಂಡ ಕೆ.ಪಿ.ವೆಂಕಟೇಶ್ ಮಾತನಾಡಿ ನಗರದಲ್ಲಿ ಗುರುವಾರ ನಡೆದ ಚಕ್ರವರ್ತಿ ಸೂಲಿಬೆಲೆ ಅವರ ಕಾರ್ಯಕ್ರಮಕ್ಕೆ ಅಡ್ಡಿಪಡಿಸಿದ ಕಾಂಗ್ರೆಸ್ ಕಾರ್ಯಕರ್ತರ ಕ್ರಮ ಸರಿಯಲ್ಲ, ನಮಗೂ ಅವರ ಕಾರ್ಯಕ್ರಮಕ್ಕೆ ಅಡ್ಡಿಪಡಿಸಲು ಗೊತ್ತಿದೆ. ಆದರೆ ಅಶಾಂತಿ ಸೃಷ್ಟಿಸುವ ಕೆಲಸಕ್ಕೆ ನಾವು ಕೈಹಾಕುವುದಿಲ್ಲ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ವಕ್ತಾರ ಟಿ.ರಾಜಶೇಖರ್, ಮುಖಂಡರಾದ ಜಯಣ್ಣ ನೆಟ್ಟೆಕೆರೆಹಳ್ಳಿ, ಕನಕರಾಜ್ ಅರಸ್, ಸಚಿನ್ ಉಪಸ್ಥಿತರಿದ್ದರು.
Give information about the works earmarked in the budget for the constituency