ಚಿಕ್ಕಮಗಳೂರು: ತಾಲ್ಲೂಕು ಮರ್ಲೆ ಗ್ರಾಮದಲ್ಲಿ ಶ್ರೀ ಕೊಲ್ಲಾಪುರದಮ್ಮ ದೇವಾಲಯದ ನೂತನ ರಾಜಗೋಪುರ ಬ್ರಹ್ಮ ಕಲಶ ಪ್ರತಿಷ್ಠಾಪನಾ ಮಹೋತ್ಸವ ಇದೇ ಫೆ.೨೬ ಮತ್ತು ೨೭ ರಂದು ನಡೆಯಲಿದೆ.
ಇಂದು ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಗ್ರಾಮಸ್ಥರುಗಳಾದ ಎಂ.ಆರ್ ಜಗದೀಶ್, ಮಂಜಪ್ಪಶೆಟ್ಟಿ, ಧರ್ಮಶೇಖರ್ ಇವರುಗಳು ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಹುಲಿಕೆರೆ ದೊಡ್ಡ ಮಠದ ಶ್ರೀಶ್ರೀ ವಿರೂಪಾಕ್ಷಲಿಂಗ ಶಿವಾಚಾರ್ಯ ಮಹಾ ಸ್ವಾಮಿಗಳು ಹಾಗೂ ಶಂಕರ ದೇವರ ಮಠದ ಶ್ರೀಶ್ರೀ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ವಹಿಸಲಿದ್ದಾರೆಂದು ಹೇಳಿದರು.
ಫೆ.೨೬ ರಂದು ಬೆಳಗ್ಗೆ ೯.೪೦ ಕ್ಕೆ ಅಗ್ರೋದಕ ಗಂಗಾ ಪೂಜೆ, ದೇವಾಲಯ ಪ್ರವೇಶ ನಂತರ ಮಹಾ ಸಂಕಲ್ಪ, ಮಹಾ ಗಣಪತಿ ಪೂಜೆ, ಪುಣ್ಯಾಹ ಶುದ್ಧಿ, ನಾಂದಿ ಪೂಜೆ, ಕಲಶ ಪೂಜಾದಿಗಳು, ಪರಿವಾರ ದೇವತಾ ಪೂಜೆ, ಪ್ರಧಾನ ಕಲಶ ಪೂಜಾದಿಗಳು. ಸಂಜೆ ೬ ಗಂಟೆಗೆ ಪ್ರಧಾನ ಕಲಶ ಪೂಜಾದಿಗಳು ನವಗ್ರಹ ಹೋಮ, ಮೃತ್ಯುಂಜಯ ಹೋಮ, ವಾಸ್ತು ಹೋಮ, ಶಾಂತಿ ಹೋಮ ಮತ್ತಿತರ ಕಾರ್ಯಕ್ರಮಗಳು ಜರುಗಲಿವೆ ಎಂದರು.
ಫೆ.೨೭ ರಂದು ಮಂಗಳವಾರ ಬೆಳಗ್ಗೆ ೬ ಗಂಟೆಗೆ ಹೊಳೆ ಪೂಜೆ, ಕುಂಭಾಭಿಷೇಕದ ಕಲಶ ಪೂಜೆ ನಂತರ ಕಲಶಗಳ ಮೆರವಣಿಗೆ ಆರಂಭಗೊಂಡು ದೇವಾಲಯಕ್ಕೆ ಪ್ರವೇಶ ಬರುವುದು. ೧೦.೧೦ ಕ್ಕೆ ಗೋಪುರ ಬ್ರಹ್ಮಕಲಶ ಪ್ರತಿಷ್ಠಾಪನೆ ನಂತರ ದೃಷ್ಠಿಪೂಜೆ, ಕುಂಭಾಭಿಷೇಕ, ಪ್ರಧಾನ ಹೋಮ, ಮಹಾ ಪೂರ್ಣಾಹುತಿ ಸಮರ್ಪಣೆ. ಅಷ್ಟೋತ್ತರ ಮಹಾ ಮಂಗಳಾರತಿ, ತೀರ್ಥ-ಪ್ರಸಾದ ವಿನಿಯೋಗ ನಡೆಯಲಿದೆ ಎಂದು ಹೇಳಿದರು.
ಈ ಎರಡು ದಿನ ನಡೆಯಲಿರುವ ಕಾರ್ಯಕ್ರಮದಲ್ಲಿ ಭಾಗವಹಿಸುವ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿದ್ದು, ಬ್ರಹ್ಮಕಲಶ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಗ್ರಾಮಸ್ಥರು, ಭಕ್ತಾಧಿಗಳು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಈ ಮಹೋತ್ಸವವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.
Marley Brahmakalasha Foundation Jubilee Press Conference