ಚಿಕ್ಕಮಗಳೂರು: ಸಮೀಪದ ಅಂಬಳೆ ಉಂಡಾಡಿಹಳ್ಳಿಯಲ್ಲಿ ಶ್ರೀ ಜಯಬಸವ ತಪೋವನ ವಿಶ್ವಧರ್ಮ ಪೀಠದಲ್ಲಿ ಮಾ.೧ ಮತ್ತು ೨ರಂದು ಚಂದ್ರಶೇಖರ ಮಹಾಸ್ವಾಮಿಗಳ ೧೬೯ ನೇ ಜಯಂತಿ ಮತ್ತು ಲಿಜಯ ಚಂದ್ರಶೇಖರ ಮಹಾಸ್ವಾಮಿಗಳ ೨೯ನೇ ಸ್ಮರಣೋತ್ಸವ ಸಾಧನಾ ಸಮಾವೇಶ ೨೦೨೪ ಏರ್ಪಡಿಸಲಾಗಿದೆ.
ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಈ ವಿಷಯ ತಿಳಿಸಿದ ಪೀಠದ ಡಾ|| ಜಯಬಸವಾನಂದ ಸ್ವಾಮಿಗಳು ಷಟ್ಸ್ಥಲ ಧ್ವಜಾರೋಹಣವನ್ನು ಕಾಫಿ ಬೆಳೆಗಾರರ ಕೆ.ಆರ್ ರುದ್ರೇಗೌಡ ನೆರವೇರಿಸುವರು. ದಿವ್ಯ ಸಾನಿಧ್ಯವನ್ನು ಬೆಂಗಳೂರು ಬಸವ ಗಂಗೋತ್ರಿ ಶ್ರೀ ಚನ್ನಬಸವೇಶ್ವರ ಜ್ಞಾನಪೀಠದ ಪೂಜ್ಯ ಜಗದ್ಗುರು ಡಾ|| ಶ್ರೀ ಚನ್ನಬಸವಾನಂದ ಸ್ವಾಮಿಗಳು ವಹಿಸಲಿದ್ದಾರೆ.
ಬೆಟ್ಟದಹಳ್ಳಿ ಗವಿಮಠದ ಚಂದ್ರಶೇಖರ ಮಹಾಸ್ವಾಮಿಗಳು, ಶ್ರೀರಂಗಪಟ್ಟಣದ ಚಂದ್ರವನ ಆಶ್ರಮದ ಡಾ|| ತ್ರಿನೇತ್ರ ಮಹಾಂತ ಶಿವಯೋಗಿ ಮಹಾಸ್ವಾಮಿಗಳು ಭಾಗವಹಿಸಲಿದ್ದು ಅಧ್ಯಕ್ಷತೆಯನ್ನು ತಾವು ವಹಿಸಲಿರುವುದಾಗಿ ತಿಳಿಸಿದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಕೃಷಿ ಮತ್ತು ರೈತ ಕಲ್ಯಾಣ ಖಾತೆ ರಾಜ್ಯ ಸಚಿವೆ ಕುಮಾರಿ ಶೋಭಾಕರಂದ್ಲಾಜೆ ನೆರವೇರಿಸುವರು. ಮುಖ್ಯ ಅತಿಥಿಗಳಾಗಿ ಹುಲ್ಲಳ್ಳಿ ಸುರೇಶ್, ಸಿ.ಟಿ ರವಿ, ಡಾ|| ಜೆ.ಪಿ ಕೃ?ಗೌಡ ಮಹೇಂದ್ರ ಮುನ್ನೋಟ್, ಎಂ.ಆರ್ ದೇವರಾಜಶೆಟ್ಟಿ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಉಪನ್ಯಾಸಕ ಡಾ|| ಜಿ.ವಿ ಮಂಜುನಾಥ ಶರಣ ಸಂಸ್ಕೃತಿ ಕುರಿತು ಉಪನ್ಯಾಸ ನೀಡುವರು ಆಶಾಕಿರಣ ಅಂಧಮಕ್ಕಳ ಶಾಲೆ ವಿದ್ಯಾರ್ಥಿಗಳಿಂದ ವಚನ ಗಾಯನ ದಾವಣಗೆರೆಯ ಟಿ.ಎಂ ಅಮೃತ ಇವರಿಂದ ವಚನ ನೃತ್ಯ ನಡೆಯಲಿದೆ ಎಂದರು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿರುವವರನ್ನು ಗುರುತಿಸಿ ಬಸವಭೂ?ಣ ಪ್ರಶಸ್ತಿ, ಅಕ್ಕಮಹಾದೇವಿ ಪ್ರಶಸ್ತಿ, ಸಮಾಜ ಸೇವಾರತ್ನ, ಕಾಯಕಯೋಗಿ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗುವುದೆಂದು ಹೇಳಿದರು.
ಮಾರ್ಚ್ ೨ರಂದು ಶಿವಾನುಭವ ಕಮ್ಮಟ, ಅಷ್ಠಾವರಣ ಪೂರ್ಣ ಅವಲೋಕನ ದಿವ್ಯ ಸಾನಿಧ್ಯ ಕೋಳುಗುಂದ ಕೇದಿಗೆ ಮಠದ ಜಯಚಂದ್ರ ಶೇಖರ ಮಹಾಸ್ವಾಮಿಗಳು ವಹಿಸಲಿದ್ದು ನವಿಲಪ್ಪ, ಶರಶ್ಚಂದ್ರಗುಜನೂರ್, ವಿದ್ಯಾಧರೆ ಭಾಗವಹಿಸಲಿದ್ದಾರೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಮಹೇಶ್ವರಪ್ಪ ನಿರಂಜನ ಸ್ವಾಮಿ ರುದ್ರೇಶ್ ಸಂಗಮನಾಥ್ ಇದ್ದರು
Mar. 1 and 2 Basavatva Samavesh at Jayabasava Tapovana