ಚಿಕ್ಕಮಗಳೂರು: ಸಮಾಜಮುಖಿ ರಂಗ ಬಳಗ ಬೆಂಗಳೂರು ಇವರಿಂದ ಜಯರಾಮ್ ರಾಯಪುರ ನಾಟಕೋತ್ಸವ ಮಾರ್ಚ್ ೨ ಮತ್ತು ೩ರಂದು ಕುವೆಂಪು ಕಲಾಮಂದಿರದಲ್ಲಿ ಸಂಜೆ ೭ ಗಂಟೆಗೆ ಚಾವುಂಡರಾಯ, ವಾರಸುದಾರ ನಾಟಕ ಪ್ರದರ್ಶನ ಆಯೋಜಿಸಲಾಗಿದೆ.
ಇಂದು ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಲಯನ್ಸ್ ಕ್ಲಬ್ ಅಧ್ಯಕ್ಷ ಜಿ. ರಮೇಶ್ ಕಲಾ ಸೇವಾ ಸಂಘ, ಸುಗಮ ಸಂಗೀತಾ ಗಂಗಾ, ಪ್ರತಿಭಾ ಕಲಾ ಸಂಘ, ಜಿಲ್ಲಾ ಕನ್ನಡ ಸಾಹಿತ್ಯ ಪರಿ?ತ್, ಜಿಲ್ಲಾ ಜಾನಪದ ಪರಿ?ತ್ ಮತ್ತು ಕಲ್ಕಟ್ಟೆ ಪುಸ್ತಕಮನೆ ಇವರ ಸಂಯುಕ್ತಾಶ್ರಯದಲ್ಲಿ ಈ ಇತಿಹಾಸದ ಹಿನ್ನೆಲೆಯುಳ್ಳ ಎರಡು ನಾಟಕ ಪ್ರದರ್ಶನ ಏರ್ಪಡಿಸಲಾಗಿದೆ ಎಂದರು.
ಉದ್ಘಾಟನೆಯನ್ನು ಸುಗಮ ಸಂಗೀತ ಗಂಗಾ ಅಧ್ಯಕ್ಷ ಡಾ|| ಜೆ.ಪಿ ಕೃ?ಗೌಡ ನೆರವೇರಿಸುವರು. ಡಾ|| ಸಿ.ಕೆ ಸುಬ್ರಾಯ, ಸೂರಿ ಶ್ರೀನಿವಾಸ್, ಸುರೇಶ್ ಹೆಚ್.ಎಂ, ನಾಗರಾಜ್ರಾವ್ ಕಲ್ಕಟ್ಟೆ, ಜಾನ್ಮಥಾಯಿಸ್, ಜಯರಾಮ ರಾಯಪುರ, ಪ್ರೊ. ಜಯಪ್ರಕಾಶ್ಗೌಡ, ಕೆ. ಮೋಹನ್ ಅಧ್ಯಕ್ಷತೆ ವಹಿಸುವರು.
ಹುಲಿಗಪ್ಪ ಕಟ್ಟಿಮನಿ ನಿರ್ದೇಶನದ ಚಾವುಂಡರಾಯ, ಪ್ರಸಾದ್ ಕುಂದೂರು ನಿರ್ದೇಶನದ ವಾರಸುದಾರ ನಾಟಕಗಳು ಈ ಎರಡು ದಿನ ಪ್ರದರ್ಶನಗೊಳ್ಳಲಿವೆ ಹೆಚ್ಚಿನ ಸಂಖ್ಯೆಯಲ್ಲಿ ಕಲಾಭಿಮಾನಿಗಳು ಆಗಮಿಸಿ ರಂಗ ಕಲೆಯನ್ನು ಪ್ರೋತ್ಸಾಹಿಸಬೇಕೆಂದು ಮನವಿ ಮಾಡಿದರು.
ಪ್ರವೇಶ ಉಚಿತವಾಗಿರುತ್ತದೆ ಪತ್ರಿಕಾಗೋಷ್ಠಿಯಲ್ಲಿ ಜಿ.ಕೆ.ಸಾ.ಪ ಅಧ್ಯಕ್ಷ ಸೂರಿ ಶ್ರೀನಿವಾಸ್, ಡಾ|| ಜೆ.ಪಿ ಕೃ?ಗೌಡ, ಟಿ. ನಾರಾಯಣಸ್ವಾಮಿ, ಕೆ. ಮೋಹನ್ ಎಸ್.ಆರ್ ಪ್ರಭು ವೈದ್ಯ, ಗೋಪಿಕೃ? ಇದ್ದರು
Mar. 2-3 Chavundaraya-Varsudara drama performance at Kalamandir