ಚಿಕ್ಕಮಗಳೂರು: ಬೆಂಗಳೂರಿನ ರಾಮೇಶ್ವರ ಕಫೆ ಬಾಂಬ್ ಬ್ಲಾಸ್ಟ್ ಪ್ರಕರಣ ಸಿಸಿಬಿಗೆ ನೀಡಿದ್ದೇವೆ. ಅಗತ್ಯ ಬಿದ್ದರೇ ಎನ್ ಐಎ ಗೆ ವಹಿಸುತ್ತೇವೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಭಾನುವಾರ ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿ, ಬಾಂಬ್ ಬ್ಲಾಸ್ಟ ಪ್ರಕರಣ ಸಿಲ್ಲಿ ಪ್ರಕರಣ ಅಲ್ಲ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಸರ್ಕಾರಕ್ಕೆ ಜನರ ಭದ್ರತೆ ಮುಖ್ಯ, ಜನರಿಗೆ ಸೆಕ್ಯೂರಿಟಿ ಕೊಡಬೇಕು ಎಂದು ಶರಣ್ ಗೌಡ ಪಾಟೀಲ್ ಹೇಳಿಕೆಗೆ ಪ್ರತಿಕ್ರಿಯಿಸಿದರು.
ಎನ್ ಐಎಗೆ ನೀಡಬೇಕೆಂಬ ಬಿಜೆಪಿ ಆಗ್ರಹಕ್ಕೆ ಪ್ರತಿಕ್ರಿಯಿಸಿ, ಪ್ರಕರಣವನ್ನು ಸಿಸಿಬಿಗೆ ನೀಡಿದ್ದೇವೆ. ತನಿಖೆ ಆರಂಭವಾಗಿದೆ. ಯಾರು ಸಿಕ್ಕಿಲ್ಲ. ಸಿಕ್ಕರೇ ನೋಡೋಣ, ಅಗತ್ಯ ಬಿದ್ದರೇ ನೀಡಲಾಗು ವುದು ಎಂದರು.
ಬ್ರಾಂಡ್ ಬೆಂಗಳೂರು ಬಾಂಬ್ ಬೆಂಗಳೂರು ಆಗುತ್ತಿದೆ ಎಂಬ ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯಿಸಿ, ಬೆಜೆಪಿ ಅವರ ಕಾಲದಲ್ಲೂ ಬಾಂಬ್ ಬ್ಲಾಸ್ಟ್ ಆಗಿತ್ತು.೨೦೦೮ರಲ್ಲಿ ನಾಲ್ಕು ಬಾರೀ ಬಾಂಬ್ ಬ್ಲಾಸ್ಟ್ ಆಗಿದೆ. ಬ್ಲಾಸ್ಟ್ ಪ್ರಕರಣ ಸಮರ್ಥನೆ ಮಾಡುತ್ತಿಲ್ಲ ಬಿಜೆಪಿ ರಾಜಕೀಯ ಮಾಡಬಾರದು ಎಂದರು
ನಾನು ಬಾಂಬ್ ಸ್ಪೋಟವನ್ನು ಖಂಡಿಸುತ್ತೇನೆ. ಬಿಜೆಪಿಯವರು ರಾಜಕೀಯ ಮಾಡಬಾರದು ಎಂದರು. ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಬ್ಲಾಸ್ಟ್ ಹಾಗೂ ಬಿಜೆಪಿ ಕಚೇರಿ ಮುಂದೆಯೇ ಸ್ಫೋಟ ವಾಗಿತ್ತು ಆಗ ಬಿಜೆಪಿ ಅಧಿಕಾರದಲ್ಲಿದ್ದರು ಎಂದರು.
ನಿಗಮ ಮಂಡಳಿಗಳಿಗೆ ಅಧಿಕಾರ ಹಂಚಿಕೊಳ್ಳದೇ ಇದ್ದರೆ ಅಧಿಕಾರಕ್ಕೆ ಬರಲು ಶ್ರಮಿಸಿದ ಕಾರ್ಯಕರ್ತರು ಏನು ಮಾಡಬೇಕೆಂದರು. ಕರ್ನಾಟಕದ ಬಜೆಟ್ ೩.೭೦ ಲಕ್ಷ ಕೋಟಿಯಾಗಿದೆ, ಅದಕ್ಕೆ ೨ ಕೋಟಿ ವೆಚ್ಚವಾಗಬಹುದು ಎಂದರು.
ಚಿಕ್ಕಮಗಳೂರು ಜಿಲ್ಲೆಯನ್ನು ಬರ ಪೀಡಿತ ತಾಲ್ಲೂಕು ಗಳ ಪಟ್ಟಿಯಿಂದ ಹೊರಗಿಟ್ಟಿರುವ ಬಗ್ಗೆ ಮಾತನಾಡಿ ಬರಪೀಡಿತ ಎಂದು ಘೋಷಣೆ ಮಾಡಲು ಕೆಲವು ನಿಯಮಾವಳಿಗಳು ಇದ್ದು ಅದರಂತೆ ೨೨೩ ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಲಾಗಿದೆ. ೧೭ ತಾಲ್ಲೂಕು ಉಳಿದುಕೊಂಡಿವೆ ಎಂದರು.
ಮಂಗನ ಕಾಯಿಲೆಗೆ ಜಿಲ್ಲೆಯಲ್ಲಿ ಮೂವರು ಮೃತಪಟ್ಟಿರುವ ಬಗ್ಗೆ ಪ್ರತಿಕ್ರಿಯಿಸಿ, ಆರೋಗ್ಯ ಸಚಿವರ ಬಳಿ ಈ ಬಗ್ಗೆ ಚರ್ಚಿಸುವುದಾಗಿ ಹೇಳಿದರು.
ಲೋಕಸಭೆಗೆ ತಯಾರಿ ನಡೆದಿದ್ದು, ಸಿದ್ಧತೆ ಇನ್ನಷ್ಟು ತೀವ್ರಗೊಳಿಸುವುದಾಗಿ ತಿಳಿಸಿದರು. ಕನಿಷ್ಠ ೨೦ ಸ್ಥಾನಗಳನ್ನು ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು.
ಅಕ್ರಮ ಭೂ ಒತ್ತುವರಿಗೆ ಸಂಬಂಧಿಸಿದಂತೆ ೨೫ ತಹಶೀಲ್ದಾರ ನೇಮಕಾತಿಯಾಗಿದ್ದು ವರದಿ ನೀಡಿದ್ದಾರೆ ಈ ಬಗ್ಗೆ ಪರಿಶೀಲನಾ ಹಂತದಲ್ಲಿದ್ದು, ಕಂದಾಯ ಸಚಿವರ ಬಳಿ ಮಾತನಾಡುವುದಾಗಿ ಹೇಳಿದರು.
ಆರ್.ಅಶೋಕ್ ಏನಾದರೂ ಮಾಡಿ ಕಾಂಗ್ರೆಸ್ಗೆ ಮತ ಹಾಕಿ ಎಂದು ಹೇಳಿರುವ ಬಗ್ಗೆ ಪ್ರತಿಕ್ರಿಯೆ ನೀಡಿ ಮತ ನೀಡಿ ಎಂದು ಕೇಳಿರಬಹುದು, ಏನಾದರೂ ಮಾಡಿ ಎಂದು ಕೇಳುತ್ತಾರೆಯೇ ಎಂದು ಪ್ರಶ್ನಿಸಿದರು.
Rameshwar cafe bomb case to NIA if necessary