ಚಿಕ್ಕಮಗಳೂರು: ನಗರದ ಕೆಲವೆಡೆ ಪುಂಡರ ವೀಲಿಂಗ್ ಹಾವಳಿ ಹಾಗು ವೇಗವಾಗಿ ಬೈಕ್ ಓಡಿಸುವುದರಿಂದ ಸಾರ್ವಜನಿಕರು ನಿತ್ಯ ಕಿರಿ ಕಿರಿ ಅನುಭವಿಸುತ್ತಿದ್ದಾರೆ.ಇದರ ಜೊತೆಗೆ ಯುವಕರ ಮಾರಾ ಮಾರಿ ಕೂಡ ಆಗಾಗ್ಗೆ ಈ ರಸ್ತೆಗಳಲ್ಲಿ ನಡೆಯುತ್ತಿದ್ದು ಜನರೀಗೆ ಕಿರಿ ಕಿರಿ ಉಂಟಾಗುತ್ತಿದೆ.
ಮುಖ್ಯವಾಗಿ ನಗರದ ವಿಜಯಪುರ ಬಡಾವಣೆಯ ಬಿ.ಎಸ್. ಎನ್.ಎಲ್ ಟವರ್ ರಸ್ತೆ, ಟಿಂಕರ್ ಬಾಬು ಗ್ಯಾರೇಜ್ ರೋಡ್, ೬೦ ಅಡಿ ರಸ್ತೆ ವಿಜಯ ಪುರ ಚರ್ಚ್ ಎದುರಿನ ರಸ್ತೆ ಹಾಗು ಅಕ್ಕ ಪಕ್ಕರ ರಸ್ತೆಗಳಲ್ಲಿ ಹಲವಾರು ಯುವಕರು ತಮ್ಮ ಮೋಟಾರ್ ಬೈಕ್, ಸ್ಕೂಟಿಗಳಲ್ಲಿ ನಿತ್ಯ ವೀಲಿಂಗ್ ಮಾಡುತಿರುತ್ತಾರೆ.
ಸಂಜೆ ವೇಳೆ ಹೆಚ್ಚು ಯುವಕರು ಇಲ್ಲಿನ ಕೆಲ ದಿನಸಿ ಅಂಗಡಿಗಳಲ್ಲಿ ಸೇರಿಕೊಂಡು ಸಿಗರೇಟ್ ಸೇದುವುದು ತಮ್ಮ ಬೈಕುಗಳಲ್ಲಿ ಕರ್ಕಶ ಶಬ್ದ ಬರುವಂತೆ ಮಾಡಿಕೊಂಡು ವೇಗವಾಗಿ ಬೈಕ್ ಓಡಿಸುವುದು ಮಾಡುತ್ತಿದ್ದು ಸಾರ್ವಜನಿಕರ ಸಂಚಾರಕ್ಕೆ ಸಮಸ್ಯೆ ಉಂಟಾಗುತ್ತಿದೆ. ಕೆಲ ಶಾಲಾ ಮಕ್ಕಳು ಕೂಡ ಸೈಕಲ್ಗಳಲ್ಲಿ ವೀಲಿಂಗ್ ಮಾಡಿಕೊಂಡು ಪಾದಚಾರಿಗಳೀಗೆ ತೊಂದರೆ ಕೊಡುತ್ತಿದ್ದಾರೆ. ಇಲ್ಲಿ ರಸ್ತೆಯಲ್ಲಿ ಮಕ್ಕಳು, ಮಹಿಳೆಯರು ವಯೋವೃದ್ದರು ಸಂಚಾರ ಮಾಡುತ್ತಿರುತ್ತಾರೆ
ಈ ಪುಂಡರ ಹಾವಳಿಯಿಂದ ಜನ ಬೇಸತ್ತಿದ್ದು ಸ್ಥಳೀಯ ಆನೇಕರು ಈ ಬಗ್ಗೆ ಅಸಮಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಇತ್ತಿಚ್ಚೆಗೆ ಈ ಭಾಗದಲ್ಲಿ ಕೆಲ ಪುಂಡ ಯುವಕರು ಗುಂಪು ಸೇರುವುದು, ಆನ್ ಲೈನ್ ಬೆಟ್ಟಿಂಗ್, ಹೊಡೆದಾಟ ಬಡಿದಾಟ ಹೆಚ್ಚಾಗಿದೆ.
ದಿನಾಂಕ ೧ ರಂದು ಮಧ್ಯರಾತ್ರಿ ೧೨ಗಂಟೆಗೆ ಈ ಬಿ.ಎಸ್. ಎನ್.ಎಲ್ ಟವರ್ ರಸ್ತೆಯಲ್ಲಿ ೨ ಯುವಕರ ಗುಂಪುಗಳ ನಡುವೆ ಬಡಿದಾಟವಾಗಿದ್ದು ಇಟ್ಟಿಗೆ, ಕಲ್ಲು, ಬಡಿಗೆಗಳಿಂದ ಹೊಡೆದಾಡಿಕೊಂಡಿದ್ದಾರೆ ಪೊಲೀಸರು ಆಗಮಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ನಿತ್ಯ ಈ ರೀತಿಯ ಆನೇಕ ಘಟನೆಗಳು ನಡೆಯುತ್ತಿದ್ದು ಸ್ಥಳೀಯ ನಿವಾಸಿಗಳೀಗೆ ಕಿರಿ ಕಿರಿ ಉಂಟಾಗುತ್ತಿದೆ ಈ ಬಗ್ಗೆ ಪೊಲೀಸರು ಹೆಚ್ಚಿನ ಕ್ರಮ ಕೈಗೊಳ್ಳಬೇಕು ಜೊತೆಗೆ ವೀಲಿಂಗ್ ಪುಂಡರನ್ನು ನಿಯಂತ್ರಿಸಬೇಕೆಂದು ಹಲವರು ಒತ್ತಾಯಿಸಿದ್ದಾರೆ.
Wheeling thugs are a problem in some parts of Chikkamagaluru city