ಚಿಕ್ಕಮಗಳೂರು: ದೇಶದ ಹಿತ ಮತ್ತು ಜನರ ರಕ್ಷಣೆಗಾಗಿ ಬಿಜೆಪಿ ಚುನಾವಣೆಯಲ್ಲಿ ಹೋರಾಟ ನಡೆಸುತ್ತಿದ್ದರೆ ಕಾಂಗ್ರೆಸ್ ಗಾಂಧಿ ಕುಟುಂಬದ ರಕ್ಷಣೆಗಾಗಿ ಹೋರಾಟ ನಡೆಸುತ್ತಿದೆ ಎಂದು ಬಿಜೆಪಿ ಜಿಲ್ಲಾ ವಕ್ತಾರ ಹೆಚ್.ಎಸ್ ಪುಟ್ಟಸ್ವಾಮಿ ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು ಎನ್.ಡಿ.ಎ ನೇತೃತ್ವದಲ್ಲಿ ಪ್ರಧಾನಮಂತ್ರಿಯಾಗಿ ನರೇಂದ್ರ ಮೋದಿಯವರು ಅಧಿಕಾರ ವಹಿಸಿಕೊಂಡ ನಂತರ ಸರ್ವರ ಕಲ್ಯಾಣಕ್ಕಾಗಿ ಕೆಲಸ ಮಾಡುತ್ತಿರುವ ಪರಿಣಾಮವಾಗಿ ಇಂದು ಜಗತ್ತಿನ ಆರ್ಥಿಕ ಪಟ್ಟಿಯಲ್ಲಿ ಐದನೇ ಸ್ಥಾನವನ್ನು ಪಡೆಯುವ ಮೂಲಕ ಜಗತ್ತಿನ ಗಮನವನ್ನು ಸೆಳೆದಿದೆ ಎಂದರು.
ಬಡತನ ವಿ?ವರ್ತುಲದಿಂದ ಸದ್ದಡಗಿಸಿದ ಆರ್ಥಿಕ ಬೆಳವಣಿಗೆಯಿಂದ ಭಾರತವು ಇಂದು ನಾವೀನ್ಯತೆಯ ಕೇಂದ್ರವಾಗಿದೆ. ಜಾಗತಿಕ ಆರ್ಥಿಕ ಬೆಳವಣಿಗೆಗೆ ಶೇಕಡ ೧೬ ಕಿಂತ ಹೆಚ್ಚಿನ ಕೊಡುಗೆ ನೀಡಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ದೃಢವಾಗಿ ನಿಂತಿದೆ ಉದ್ಯಮಶೀಲತೆ ಮತ್ತು ಮೂಲಸೌಕರ್ಯಗಳಿಗೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದು ಹೇಳಿದರು.
ಡಿಜಿಟಲೀಕರಣಕ್ಕೆ ಹೆಚ್ಚಿನ ಒತ್ತು ನೀಡಿದ್ದು, ೨೬,೫೦೦ ಕೋಟಿ ಡಿಜಿಟಲ್ ಇಂಡಿಯಾ ಮೂಲಕ ೨೦೧೬ ರಿಂದ ಇಲ್ಲಿಯವರೆಗೆ ವ್ಯವಹಾರಗಳು ನಡೆದಿz. ಮೇಕ್ ಇನ್ ಇಂಡಿಯಾ ಮೂಲಕ ೧೪ ಕ್ಷೇತ್ರಗಳಲ್ಲಿ ೧ ಲಕ್ಷ ಕೋಟಿ ಬಂಡವಾಳ ಹೂಡಿಕೆ ಮಾಡಲಾಗಿದೆ. ಜಿಎಸ್ಟಿ ತೆರಿಗೆಯಲ್ಲಿ ಪ್ರತಿ ತಿಂಗಳು ೧.೬ ಲಕ್ಷ ಕೋಟಿ ಸಂಗ್ರಹ ಮಾಡಲಾಗುತ್ತಿದೆ. ೫೧ ಕೋಟಿ ಜನಧನ್ ಖಾತೆಯಲ್ಲಿ ೨ ಲಕ್ಷ ಕೋಟಿ ಉಳಿತಾಯವನ್ನು ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಪಿಎಂ ಆವಾಸ್ ಯೋಜನೆಯಲ್ಲಿ ೪ ಕೋಟಿ ಕುಟುಂಬಗಳಿಗೆ ಮನೆಗಳನ್ನು ನಿರ್ಮಿಸಲಾಗಿದೆ. ಉಜ್ವಲ್ ಯೋಜನೆಯಡಿ ೧೦ ಕೋಟಿ ಅಡಿಗೆ ಅನಿಲ ಸಂಪರ್ಕವನ್ನು ಕಲ್ಪಿಸಲಾಗಿದೆ. ಸ್ವಚ್ಛ ಭಾರತ್ ಮಿ?ನ್ ಯೋಜನೆಯಡಿ ೧೨ ಕೋಟಿ ಶೌಚಾಲಯಗಳನ್ನು ನಿರ್ಮಿಸಲಾಗಿದೆ ಎಂದು ತಿಳಿಸಿದರು.
ಮುಂಬರುವ ವ?ಗಳಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಇನ್ನು ೨ ಕೋಟಿ ಮನೆಗಳನ್ನು ಗ್ರಾಮೀಣ ಜನರಿಗೆ ನಿರ್ಮಿಸಿಕೊಡುವ ಯೋಜನೆಯನ್ನು ಕೇಂದ್ರ ಸರ್ಕಾರ ರೂಪಿಸಿz. ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆಯಡಿ ಮುಂದಿನ ೫ ವ?ಗಳ ಕಾಲ ೮೦ ಕೋಟಿ ಜನರಿಗೆ ಆಹಾರ ಭದ್ರತೆಯನ್ನು ಖಾತ್ರಿಪಡಿಸುವ ಭರವಸೆಯನ್ನು ಪ್ರಧಾನಮಂತ್ರಿ ಅವರು ನೀಡಿದ್ದಾರೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಸಿ.ಎಚ್ ಲೋಕೇಶ್, ಕೆ.ಪಿ ವೆಂಕಟೇಶ್, ಮಧುಕುಮಾರ್ ರಾಜ್ ಅರಸ್, ಸೋಮಶೇಖರ್ ಮತ್ತಿತರರು ಇದ್ದರು.
BJP is fighting in the election for the good of the country