ಚಿಕ್ಕಮಗಳೂರು: ನಗರ ವ್ಯಾಪ್ತಿಯಲ್ಲಿ ಪ್ರತಿ ಚುನಾವಣೆಯಲ್ಲಿ ಕಡಿಮೆ ಮತದಾನವಾಗುತ್ತಿದ್ದು ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ೮೦ಕ್ಕೆ ಹೆಚ್ಚಿಸಲು ಸೆಲ್ಫಿ ವಿತ್ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ನಗರಸಭೆ ಪೌರಾಯುಕ್ತ ಕೃ?ಮೂರ್ತಿ ತಿಳಿಸಿದರು.
ಇಂದು ನಗರಸಭೆಯಲ್ಲಿ ಜಿಲ್ಲಾ ಸ್ವೀಟ್ ಸಮಿತಿ ಆಯೋಜಿಸಿದ್ದ ಮತದಾನ ಜಾಗೃತಿ ಕಾರ್ಯಕ್ರಮದ ಅಂಗವಾಗಿ ಸೆಲ್ಫಿ ವಿತ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ನಗರಸಭೆ ವ್ಯಾಪ್ತಿಯ ಪ್ರತಿ ವಾರ್ಡ್ನಲ್ಲಿ ಮತದಾನ ಜಾಗೃತಿ ಮೂಡಿಸಲು ನಿರ್ಧರಿಸಲಾಗಿದೆ. ಕಡ್ಡಾಯವಾಗಿ ಮತಗಟ್ಟೆಗೆ ಬಂದು ಮತದಾನ ಮಾಡಬೇಕೆಂದು ಮನವಿ ಮಾಡಲಾಗಿದೆ ಎಂದರು.
ನಗರಸಭೆಯಿಂದ ಎಲ್ಲಾ ಮತಗಟ್ಟೆಯಲ್ಲಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗಿದ್ದು, ಏ.೨೬ರಂದು ಕಡ್ಡಾಯವಾಗಿ ಮತದಾನ ಮಾಡಬೇಕೆಂದು ವಿನಂತಿಸಿದರು.
ಕಂದಾಯ ಪಾವತಿಸಲು ಸರ್ಕಾರದ ಆದೇಶದಂತೆ ಶೇಕಡ ೫ ರ? ರಿಯಾಯಿತಿ ಇದ್ದು, ಈ ಅವಧಿಯಲ್ಲಿ ಸಾರ್ವಜನಿಕರು ತೆರಿಗೆ ಪಾವತಿಸಿ ಇದರ ಸದುಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಿದರು.
ನಗರ ಸಭೆಯ ಎಲ್ಲಾ ಅಧಿಕಾರಿ ಸಿಬ್ಬಂದಿಗಳು ಕಂದಾಯ ವಸೂಲಾತಿಗೆ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದು ತಮ್ಮ ವಾರ್ಡ್ನಲ್ಲಿ ಶಾಮಿಯಾನ ಹಾಕಿ ತಮಟೆ ಬಾರಿಸಿದ್ದು ಇಲ್ಲಿಗೆ ಬಂದು ತೆರಿಗೆ ಪಾವತಿಸಲು ವಿನಂತಿಸಿದರು.
ಸಾರ್ವಜನಿಕರು ದೊಡ್ಡ ದೊಡ್ಡ ಅಪಾರ್ಟ್ಮೆಂಟ್ಗಳ ತೆರಿಗೆಯನ್ನು ಈ ರಿಯಾಯಿತಿ ಅವಧಿಯಲ್ಲಿ ಪಾವತಿಸಬೇಕು. ಈ ಮೂಲಕ ನಗರಸಭೆ ಅಭಿವೃದ್ಧಿಗೆ ಸಹಕರಿಸಬೇಕೆಂದು ಕೋರಿದರು.
ಈ ಸಂದರ್ಭದಲ್ಲಿ ಕಚೇರಿ ವ್ಯವಸ್ಥಾಪಕ ರವಿ, ಪರಿಸರ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ತೇಜಸ್ವಿನಿ, ಕಂದಾಯಾಧಿಕಾರಿ ರಮೇಶ್ ನಾಯ್ಡು, ಆರೋಗ್ಯ ಶಾಖೆಯ ಎಲ್ಲಾ ಮುಖಂಡರು, ಮೇಲ್ವಿಚಾರಕರು, ಪೌರಕಾರ್ಮಿಕರು ಉಪಸ್ಥಿತರಿದ್ದರು.
Selfie with program as part of voting awareness programme