ಚಿಕ್ಕಮಗಳೂರು: ವಿಪರೀತ ತಾಪಮಾನ ಏರಿಕೆಯಿಂದ ಹಸಿರುಕವಚ ಕಣ್ಮರೆಯಾಗುತ್ತಿದೆ. ಮಾನವನ ದುರಾಸೆಯಿಂದ ಮರ-ಗಿಡಗಳನ್ನು ಕಳೆದುಕೊಂಡರೆ ಜೀವ ಸಂಕುಲದ ಅಪಾಯ ಕಟ್ಟಿಟ್ಟಬುತ್ತಿ ಎಂದು ರಾಜ್ಯ ಪರಿಸರ ತಜ್ಞರ ಮೌಲ್ಯಮಾಪನ ಸಮಿತಿ ಅಧ್ಯಕ್ಷ ಎ.ಎನ್. ಮಹೇಶ್ ಹೇಳಿದರು.
ನಗರದ ಸ್ಕೌಟ್ಸ್ ಭವನದಲ್ಲಿ ರಾಜ್ಯ ಪರಿಸರ ತಜ್ಞರ ಮೌಲ್ಯಮಾಪನ ಸಮಿತಿ ಅಧ್ಯಕ್ಷರಾಗಿ ನೇಮಕಗೊಂಡ ಹಿನ್ನೆಲೆಯಲ್ಲಿ ಬುಧವಾರ ದಂಟರಮಕ್ಕಿ ಗ್ರಾಮಸ್ಥರಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು ಮಾನವನ ಅಗತ್ಯತೆಗಿಂತ ಹೆಚ್ಚು ಪರಿಸರವನ್ನು ಹಾಳುಗೆಡವಿದರೆ ಸಮಸ್ತ ಜೀವರಾಶಿಗಳು ಬದುಕಲಾರದ ಸ್ಥಿತಿ ನಿರ್ಮಾಣವಾ ಗಲಿದೆ ಎಂದು ಎಚ್ಚರಿಸಿದರು.
ಮೌಲ್ಯಮಾಪನಾ ಸಮಿತಿಯ ವಿವಿಧ ಕ್ಷೇತ್ರಗಳಲ್ಲಿ ಪದಾಧಿಕಾರಿಗಳನ್ನು ನೇಮಿಸಲಾಗಿದ್ದು ಪರಿಸರಕ್ಕೆ ಪೂರ ಕವಾಗಿರುವ ಚಟುವಟಿಕೆಗಳನ್ನು ತಮ್ಮ ನೇತೃತ್ವದಲ್ಲಿ ನಡೆಸಲಾಗುವುದು. ರಾಜ್ಯದಲ್ಲಿ ಕೈಗಾರಿಕೋದ್ಯಮ ಬಳಕೆಯಿಂ ದ ಹಸಿರು ವಾತಾವರಣ ಕಣ್ಮರೆಯಾಗುತ್ತಿದೆ. ಕಾರ್ಬಲ್ ಡೈ ಆಕ್ಸೈಡ್ ಹೆಚ್ಚಳಗೊಂಡು ಪರಿಸರ ಮಲೀನವಾಗುತ್ತಿದೆ ಎಂದು ತಿಳಿಸಿದರು.
ಮೂಲಭೂತ ಸೌಕರ್ಯವನ್ನು ಪಡೆಯಲಿಚ್ಚಿಸಲು ಮಾನವ ಅಗತ್ಯತೆಗಿಂತ ಪರಿಸರ ಹಾಗೂ ವಾಹನಗಳ ಬಳಸಿಕೊಳ್ಳುತ್ತಿರುವುದು ಆತಂಕದ ಸಂಗತಿ. ಇದೇ ರೀತಿಯಲ್ಲಿ ಪರಿಸರವನ್ನು ನಿರ್ಲಕ್ಷ್ಯಿಸಿದರೆ ಮಾನವ ಸಂಕುಲಕ್ಕೆ ದೊಡ್ಡ ಅಪಾತ್ತು ಕಾದಿರುವುದು ಸತ್ಯದ ವಿಷಯ. ಹೀಗಾಗಿ ನಾಗರೀಕರು ಸ್ವಹಿತಾಸಕ್ತಿಯಿಂದ ಪರಿಸರಕ್ಕೆ ಪೂರಕವಾ ಗುವ ಕೆಲಸವನ್ನು ಮಾಡಬೇಕಿದೆ ಎಂದರು.
ದಂಟರಮಕ್ಕಿ ಹಾಗೂ ಆರದವಳ್ಳಿ ಗ್ರಾಮಕ್ಕೆ ಅವಿನಭಾವ ಸಂಬಂಧವಿದೆ. ತಮ್ಮ ತಂದೆ ನಿಂಗೇಗೌಡರು ಕಾಂ ಗ್ರೆಸ್ ಪಕ್ಷದಲ್ಲಿದ್ದ ಸಂದರ್ಭದಲ್ಲಿ ದಂಟರಮಕ್ಕಿ ಗ್ರಾಮಸ್ಥರು ಹಾಗೂ ಮುಖಂಡರುಗಳು ಬಹಳಷ್ಟು ಸಹಕಾರವನ್ನು ನೀಡಿದ್ದರು. ಆ ಅಭಿಮಾನ, ವಿಶ್ವಾಸ ಇಂದಿಗೂ ಮುಂದುವರೆಯುತ್ತಿರುವುದು ಖುಷಿಯ ಸಂಗತಿ. ತಂದೆಯವರ ಮಾರ್ಗದರ್ಶನ, ಜನತೆಯ ಪ್ರೀತಿ ಈ ಸ್ಥಾನಕ್ಕೆ ತಂದಿದೆ ಎಂದು ಹೇಳಿದರು.
ರಾಜಕೀಯ ತಮಗೆ ಬಯಸದೇ ಬಂದ ಭಾಗ್ಯ, ಬಾಲ್ಯದಿಂದಲೇ ತಂದೆಯವರೊಂದಿಗೆ ಅಲ್ಲಲ್ಲಿ ನಡೆಯು ವ ಕಾರ್ಯಕ್ರಮಗಳಿಗೆ ತೆರಳುತ್ತಿದ್ದೆ. ಬಳಿಕ ತಾನಾಗಿಯೇ ರಾಜಕಾರಣ ಒದಗಿಬಂತು. ಯುವಕಾಂಗ್ರೆಸ್ನಲ್ಲಿ ನಿರಂತ ರ ಸೇವೆ ಸಲ್ಲಿಸಿರುವುಲ್ಲದೇ ಸಾಮಾಜಿಕ ಸಂಘ-ಸಂಸ್ಥೆಗಳಾದ ಸ್ಕೌಟ್ಸ್ & ಗೈಡ್ಸ್, ವಿಜ್ಞಾನ ಪರಿಷತ್ನಲ್ಲಿ ತೊಡ ಗಿಸಿಕೊಂಡಿರುವುದಕ್ಕೆ ಉನ್ನತ ಹುದ್ದೆ ಅಲಂಕರಿಸಲು ಕಾರಣ ಎಂದರು.
ವಕೀಲ ಪುಟ್ಟೇಗೌಡ ಮಾತನಾಡಿ ತಾಲ್ಲೂಕಿನ ಆರದವಳ್ಳಿಯ ಪುಟ್ಟಗ್ರಾಮದಲ್ಲಿ ಜನಿಸಿದ ಎ.ಎನ್.ಮಹೇಶ್ ದೆಹಲಿವರೆಗೂ ಸಾಧನೆಗೈದಿರುವುದು ಸಂತೋಷ ವಿಷಯ. ಅವರ ತಂದೆ ನಿಂಗೇಗೌಡರ ಸಾಧನೆ ಹೇಳತೀರದು. ಕಾಂಗ್ರೆಸ್ ಜಿಲ್ಲಾಧ್ಯಕ್ಷರಾಗಿ ಜೊತೆಗೆ ಕಾರ್ಮಿಕರ ಸಂಘಟನೆ, ಜನಸಾಮಾನ್ಯರ ಜೊತೆ ಉತ್ತಮ ಒಡನಾಟವನ್ನು ಹೊಂದಿದ್ದರು ಎಂದರು.
ದಂಟರಮಕ್ಕಿ ಗ್ರಾಮಸ್ಥ ಭದ್ರೇಗೌಡ ಮಾತನಾಡಿ ರಾಜಕಾರಣದ ಪ್ರಾರಂಭದಿಂದಲೂ ಮಹೇಶ್ರವರು ಕಾಂಗ್ರೆಸ್ನಲ್ಲೇ ಗುರುತಿಸಿಕೊಂಡು ಹಲವಾರು ಹುದ್ದೆಗಳನ್ನು ಅಲಂಕರಿಸಿದ್ದರು. ಪಕ್ಷ ನೀಡುವ ಜವಾಬ್ದಾರಿಯನ್ನು ಅತ್ಯಂತ ಪ್ರಾಮಾಣಿಕವಾಗಿ ನಿರ್ವಹಿಸಿರುವ ಪರಿಣಾಮ ಭಾರತ ಸರ್ಕಾರ ಮೌಲ್ಯಮಾಪನಾ ಸಮಿತಿ ಅಧ್ಯಕ್ಷರಾಗಿ ನೇಮಿಸಿರುವುದೇ ಸಾಕ್ಷಿ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನಗರಸಭಾ ಸದಸ್ಯ ಗುರುಮಲ್ಲಪ್ಪ, ದಂಟರಮಕ್ಕಿ ಗ್ರಾಮಸ್ಥರಾದ ದೊಡ್ಡರಂಗೇಗೌಡ, ಸೋಮಣ್ಣ, ನಿಂಗಪ್ಪ, ಜಗದೀಶ್, ಕುಮಾರ್, ಪಾಪಣ್ಣಯ್ಯ, ಬಾಲರಾಜ್ ಮತ್ತಿತರರು ಹಾಜರಿದ್ದರು.
Honored by Dantaramakki Villagers Chairman State Environmental Expert Evaluation Committee at Scouts Bhavan in the city