ಚಿಕ್ಕಮಗಳೂರು: ಪ್ರತಿಯೊಬ್ಬರು ಸುತ್ತಮುತ್ತ ಇರುವ ಪರಿಸರವನ್ನು ಸ್ವಚ್ಛವಾಗಿಡುವ ಮೂಲಕ ಆರೋಗ್ಯ ಕಾಪಾಡಲು ಪೂರಕವಾಗಲಿದೆ ಎಂದು ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಟಿ.ರಾಜಶೇಖರ್ ತಿಳಿಸಿದರು.
ಅವರು ಇಂದು ನಗರದ ವಿಜಯಪುರ ಜೆವಿಎಸ್ ಕಾಲೇಜಿನಲ್ಲಿ ಏರ್ಪಡಿಸಲಾಗಿದ್ದ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಸಸಿ ನೆಡುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಸ್ವಚ್ಛ ಪರಿಸರದಿಂದ ಜೀವಿಸಲು ಬೇಕಾದ ಆಮ್ಲಜನಕ ಮತ್ತು ನೀರು, ಹಣ್ಣು-ಹಂಪಲು ಎಲ್ಲವೂ ದೊರೆಯಲಿದೆ. ಈ ನಿಟ್ಟಿನಲ್ಲಿ ಪರಿಸರವನ್ನು ಮುಂದಿನ ಪೀಳಿಗೆಗೆ ಉಳಿಸಲು ಸಸಿಗಳನ್ನು ನೆಟ್ಟು ಪೋ?ಣೆ ಮಾಡಬೇಕಾದ ಅನಿವಾರ್ಯತೆ ಇದೆ ಎಂದು ಹೇಳಿದರು.
ಇದನ್ನು ಎಲ್ಲರೂ ಪಾಲಿಸಿದಾಗ ಮಾತ್ರ ಈ ಭೂಮಿಯಲ್ಲಿ ಜನಿಸಿದಕ್ಕೆ ಸಾರ್ಥಕ. ಪರಿಸರ ನಮಗೆ ಏನು ಕೊಡುತ್ತದೆ ಎನ್ನುವುದಕ್ಕಿಂತ ಬದಲಾಗಿ, ನಾವು ಪರಿಸರಕ್ಕೆ ಏನು ಕೊಟ್ಟಿದ್ದೇವೆ ಎಂದು ಆತ್ಮವಿಮರ್ಶೆ ಮಾಡಿಕೊಳ್ಳಬೇಕಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಪರಿಸರವಾದಿ ಶ್ರೀದೇವ್ ಹುಲಿಕೆರೆ ಮಾತನಾಡಿ, ಪ್ರಪಂಚದಲ್ಲೇ ಚಿಕ್ಕಮಗಳೂರು ಜಿಲ್ಲೆ ಪಶ್ಚಿಮಘಟ್ಟ ಪ್ರದೇಶ ಹಾಗೂ ಸುಂದರ ಪರಿಸರ ಹೊಂದಿರುವ ಜಿಲ್ಲೆಯಾಗಿದ್ದು, ಪ್ರತಿಯೊಬ್ಬರೂ ಪರಿಸರ ರಕ್ಷಣೆ ಮಾಡಬೇಕಾದುದ್ದು ಶಾಸನಬದ್ಧ ಹಕ್ಕು ಎಂದು ಹೇಳಿದರು.
ಮುಂದಿನ ಪೀಳಿಗೆಗೆ ರೋಗಮುಕ್ತ ಸಮಾಜ ನೀಡಬೇಕಾದರೆ ಪರಿಸರ ಪ್ರಕೃತಿ ರಕ್ಷಣೆಗೆ ಎಲ್ಲರೂ ಮುಂದಾಗಬೇಕಾಗಿದೆ. ಕೇವಲ ಅರಣ್ಯ ಇಲಾಖೆಯಿಂದ ಮಾತ್ರ ಪರಿಸರ ರಕ್ಷಣೆ ಎಂಬಂತಾಗದೆ ಎಲ್ಲರ ಹೊಣೆ ಎಂದು ಭಾವಿಸಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಒಕ್ಕಲಿಗರ ಸಂಘದ ಉಪಾಧ್ಯಕ್ಷ ಲಕ್ಷ್ಮಣಗೌಡ, ಖಜಾಂಚಿ ಪ್ರಕಾಶ್, ಮನುಕುಮಾರ್ ಕೆ.ಕೆ, ಕಳವಾಸೆ ರವಿ, ಪದಾಧಿಕಾರಿಗಳು, ಜೆವಿಎಸ್ ಕಾಲೇಜಿನ ಪ್ರಾಂಶುಪಾಲೆ ತೇಜಸ್ವಿನಿ, ಮುಖ್ಯ ಶಿಕ್ಷಕ ವಿಜಿತ್. ಹಾಗೂ ಉಪನ್ಯಾಸಕರುಗಳು ಉಪಸ್ಥಿತರಿದ್ದರು.
ಪ್ರತಿಯೊಬ್ಬರು ಸುತ್ತಮುತ್ತ ಇರುವ ಪರಿಸರವನ್ನು ಸ್ವಚ್ಛವಾಗಿಡುವ ಮೂಲಕ ಆರೋಗ್ಯ ಕಾಪಾಡಲು ಪೂರಕವಾಗಲಿದೆ ಎಂದು ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಟಿ.ರಾಜಶೇಖರ್ ತಿಳಿಸಿದರು.
ಅವರು ಇಂದು ನಗರದ ವಿಜಯಪುರ ಜೆವಿಎಸ್ ಕಾಲೇಜಿನಲ್ಲಿ ಏರ್ಪಡಿಸಲಾಗಿದ್ದ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಸಸಿ ನೆಡುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಸ್ವಚ್ಛ ಪರಿಸರದಿಂದ ಜೀವಿಸಲು ಬೇಕಾದ ಆಮ್ಲಜನಕ ಮತ್ತು ನೀರು, ಹಣ್ಣು-ಹಂಪಲು ಎಲ್ಲವೂ ದೊರೆಯಲಿದೆ. ಈ ನಿಟ್ಟಿನಲ್ಲಿ ಪರಿಸರವನ್ನು ಮುಂದಿನ ಪೀಳಿಗೆಗೆ ಉಳಿಸಲು ಸಸಿಗಳನ್ನು ನೆಟ್ಟು ಪೋ?ಣೆ ಮಾಡಬೇಕಾದ ಅನಿವಾರ್ಯತೆ ಇದೆ ಎಂದು ಹೇಳಿದರು.
ಇದನ್ನು ಎಲ್ಲರೂ ಪಾಲಿಸಿದಾಗ ಮಾತ್ರ ಈ ಭೂಮಿಯಲ್ಲಿ ಜನಿಸಿದಕ್ಕೆ ಸಾರ್ಥಕ. ಪರಿಸರ ನಮಗೆ ಏನು ಕೊಡುತ್ತದೆ ಎನ್ನುವುದಕ್ಕಿಂತ ಬದಲಾಗಿ, ನಾವು ಪರಿಸರಕ್ಕೆ ಏನು ಕೊಟ್ಟಿದ್ದೇವೆ ಎಂದು ಆತ್ಮವಿಮರ್ಶೆ ಮಾಡಿಕೊಳ್ಳಬೇಕಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಪರಿಸರವಾದಿ ಶ್ರೀದೇವ್ ಹುಲಿಕೆರೆ ಮಾತನಾಡಿ, ಪ್ರಪಂಚದಲ್ಲೇ ಚಿಕ್ಕಮಗಳೂರು ಜಿಲ್ಲೆ ಪಶ್ಚಿಮಘಟ್ಟ ಪ್ರದೇಶ ಹಾಗೂ ಸುಂದರ ಪರಿಸರ ಹೊಂದಿರುವ ಜಿಲ್ಲೆಯಾಗಿದ್ದು, ಪ್ರತಿಯೊಬ್ಬರೂ ಪರಿಸರ ರಕ್ಷಣೆ ಮಾಡಬೇಕಾದುದ್ದು ಶಾಸನಬದ್ಧ ಹಕ್ಕು ಎಂದು ಹೇಳಿದರು.
ಮುಂದಿನ ಪೀಳಿಗೆಗೆ ರೋಗಮುಕ್ತ ಸಮಾಜ ನೀಡಬೇಕಾದರೆ ಪರಿಸರ ಪ್ರಕೃತಿ ರಕ್ಷಣೆಗೆ ಎಲ್ಲರೂ ಮುಂದಾಗಬೇಕಾಗಿದೆ. ಕೇವಲ ಅರಣ್ಯ ಇಲಾಖೆಯಿಂದ ಮಾತ್ರ ಪರಿಸರ ರಕ್ಷಣೆ ಎಂಬಂತಾಗದೆ ಎಲ್ಲರ ಹೊಣೆ ಎಂದು ಭಾವಿಸಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಒಕ್ಕಲಿಗರ ಸಂಘದ ಉಪಾಧ್ಯಕ್ಷ ಲಕ್ಷ್ಮಣಗೌಡ, ಖಜಾಂಚಿ ಪ್ರಕಾಶ್, ಮನುಕುಮಾರ್ ಕೆ.ಕೆ, ಕಳವಾಸೆ ರವಿ, ಪದಾಧಿಕಾರಿಗಳು, ಜೆವಿಎಸ್ ಕಾಲೇಜಿನ ಪ್ರಾಂಶುಪಾಲೆ ತೇಜಸ್ವಿನಿ, ಮುಖ್ಯ ಶಿಕ್ಷಕ ವಿಜಿತ್. ಹಾಗೂ ಉಪನ್ಯಾಸಕರುಗಳು ಉಪಸ್ಥಿತರಿದ್ದರು.
Environment Day Celebration at JVS College