July 16, 2024

ಶೋಷಿತರ ಪರವಾಗಿ ಧ್ವನಿಎತ್ತಿದ ನಾಯಕ ಪ್ರೊ.ಕೃಷ್ಣಪ್ಪ

0
ಜಿಲ್ಲಾ ಬಿ.ಎಸ್.ಪಿ. ಕಚೇರಿಯಲ್ಲಿ ಮಹಾತ್ಮ ಪ್ರೊ.ಬಿ.ಕೃಷ್ಣಪ್ಪರವರ ಜನ್ಮದಿನ ಆಚರಣೆ

ಜಿಲ್ಲಾ ಬಿ.ಎಸ್.ಪಿ. ಕಚೇರಿಯಲ್ಲಿ ಮಹಾತ್ಮ ಪ್ರೊ.ಬಿ.ಕೃಷ್ಣಪ್ಪರವರ ಜನ್ಮದಿನ ಆಚರಣೆ

ಚಿಕ್ಕಮಗಳೂರು: ದಲಿತರ ಸಮುದಾಯಗಳ ಮೇಲೆ ಶೋ?ಣೆ ಹಿಂಸೆ ದೌರ್ಜನ್ಯಗಳ ವಿರುದ್ಧ ಧ್ವನಿ ಎತ್ತಿ, ಶೋ?ಣೆಗೆ ಒಳಗಾದ ಎಲ್ಲಾ ಸಮುದಾಯವನ್ನು ಒಗ್ಗೂಡಿಸಿ ಅವರ ಏಳಿಗೆಗೆ ದುಡಿದ ಮಹಾನಾಯಕ ಪ್ರೊ.ಬಿ.ಕೃಷ್ಣಪ್ಪ ಎಂದು ಬಿಎಸ್‌ಪಿ ರಾಜ್ಯ ಕಾರ್ಯದರ್ಶಿ ಕೆ.ಬಿ.ಸುಧಾ ಹೇಳಿದರು.

ನಗರದ ಜಿಲ್ಲಾ ಬಿ.ಎಸ್.ಪಿ. ಕಚೇರಿಯಲ್ಲಿ ಮಹಾತ್ಮ ಪ್ರೊ.ಬಿ.ಕೃಷ್ಣಪ್ಪರವರ ಜನ್ಮದಿನದ ಅಂಗವಾಗಿ ಭಾವಚಿತ್ರಕ್ಕೆ ಭಾನುವಾರ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.

ದೇಶದ ದೀನ, ದಲಿತರ ಹಾಗೂ ಹಿಂದುಳಿದ ವರ್ಗದವರ ಏಳಿಗೆಗಾಗಿ ತಮ್ಮ ಜೀವನವನ್ನೇ ಮುಡು ಪಾಗಿಟ್ಟ ಧೀಮಂತ ನಾಯಕ ಪ್ರೊ.ಬಿ.ಕೃಷ್ಣಪ್ಪ. ಅವರ ಬದುಕು ಇಂದಿನ ಹೋರಾಟಕ್ಕೆ ಸ್ಪೂರ್ತಿದಾಯಕ. ಸರ್ವರ ಏಳಿಗೆ ಬಯಸುವ ಮೂಲಕ ಸಾಮಾಜಿಕ ಹಾಗೂ ರಾಜಕೀಯವಾಗಿ ಹಿಂದುಳಿದ ವರ್ಗದವರನ್ನು ಶೋಷಣೆಯಿಂದ ಮುಕ್ತಗೊಳಿಸಲು ಶ್ರಮಿಸಿದವರು ಎಂದರು.

ಎಲ್ಲಾ ಕ್ಷೇತ್ರಗಳಲ್ಲಿ ತಮ್ಮದೇ ಪ್ರಭಾವ ಬೀರಿದ್ದ ಅವರು ಬಡವರ, ಕೃಷಿಕರ ಹಾಗೂ ಕೂಲಿ ಕಾರ್ಮಿ ಕರ ಧ್ವನಿಯಾಗಿ ಸದಾ ಹೋರಾಟ ಮಾಡುತ್ತಾ ಬಂದಿದ್ದು ಇಂದಿನ ಎಲ್ಲಾ ಹೋರಾಟಗಾರರಿಗೆ ಅವರು ಪ್ರೇರಣೆಯಾಗಿದ್ದು. ಅವರ ಮಾರ್ಗದಲ್ಲಿ ನಾವೆಲ್ಲರೂ ಸಾಗಬೇಕಿದೆ ಎಂದು ಕಿವಿಮಾತು ಹೇಳಿದರು.

ದೂರದೃಷ್ಟಿಕೋನ ಉಳ್ಳವರಾಗಿದ್ದ ಕೃಷ್ಣಪ್ಪನವರು ಜನರ ಏಳಿಗೆಗಾಗಿ ನಿರಂತರ ಕೆಲಸ ಮಾಡಿದ ವರು. ಹೋರಾಟದ ಮೂಲಕ ಜನರಲ್ಲಿ ಜಾಗೃತಿ ಮೂಡಿಸುತ್ತಾ ಶೋಷಣೆಯಿಂದ ಮುಕ್ತವಾಗಬಹುದು ಎಂನ ನಂಬಿಕೆಯಿಂದ ಬದುಕಿದವರು. ಅವರ ಜೀವನ ದಾರಿಯೇ ಇಂದಿನ ಹೋರಾಟಗಾರರಿಗೆ ದಾರಿದೀ ಪ ಎಂದು ಹೇಳಿದರು.

ಬಿಎಸ್‌ಪಿ ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ ಮಾತನಾಡಿ ಶೋಷಿತ ಸಮುದಾಯಗಳ ಬದುಕಿನಲ್ಲಿ ಸ್ವಾಭಿ ಮಾನದ ಹಣತೆ ಹಚ್ಚಿದವರು ದಸಂಸ ಸ್ಥಾಪಕ ಪ್ರೊ.ಬಿ.ಕೃಷ್ಣಪ್ಪ. ಡಾ.ಬಿ.ಆರ್.ಅಂಭೇಡ್ಕರ್ ಅವರ ತತ್ವ ಸಿದ್ದಾಂತಗಳಲ್ಲಿ ನಂಬಿಕೆಯಿಟ್ಟದ್ದ ಅವರು ಶೋಷಿತ ಸಮುದಾಯಗಳ ಪ್ರಗತಿಗೆ ಸಾಮಾಜಿಕ ಚಳುವಳಿ ರೂ ಪಿಸಿ ಸ್ವಾಭಿಮಾನದ ಸಂಕೇತವಾದವರು ಎಂದು ಸ್ಮರಿಸಿದರು.

ಮೌಢ್ಯಗಳನ್ನು ಮುಂದಿಟ್ಟುಕೊಂಡು ದಲಿತರಿಗೆ ಅನ್ಯಾಯದ ಂಆಡಿದ ಪುರೋಹಿತಶಾಹಿಗಳ ವಿರುದ್ಧ ಸೆಟೆದು ನಿಂತು ದಲಿತರಲ್ಲಿ ಜಾಗೃತಿ ಮೂಡಿಸಿದ ಮಹಾಚೇತನ ಬಿ.ಕೃಷ್ಣಪ್ಪ. ಅವರ ಆಚಾರ-ವಿಚಾ ರಗಳನ್ನು ನೆನಪು ಮಾಡಿಕೊಳ್ಳುವುದೇ ನಿಜವಾಗಿಯೂ ಅವರಿಗೆ ನೀಡುವ ದೊಡ್ಡ ಗೌರವ ಎಂದರು.

ಉಡುಪಿ- ಚಿಕ್ಕಮಗಳೂರು ಲೋಕಸಭಾ ಸಂಯೋಜಕ ಪಿ.ಪರಮೇಶ್ವರ್, ಸರ್ ಕಾರ್ಯಕ್ರಮ ವನ್ನು ಉದ್ದೇಶಿಸಿ ಉಪನ್ಯಾಸ ನೀಡಿದರು. ಈ ಸಂದರ್ಭದಲ್ಲಿ ಪಕ್ಷದ ಜಿಲ್ಲಾ ಉಪಾಧ್ಯಕ್ಷ ಕೆ.ಎಸ್. ಮಂಜುಳಾ, ಅಸೆಂಬ್ಲಿ ಉಪಾಧ್ಯಕ್ಷರಾದ ಸಿದ್ದಯ್ಯ, ಗಿರೀಶ್, ಶಂಕರ್, ಸರಸ್ವತಿ, ಪ್ರಧಾನ ಕಾರ್ಯದರ್ಶಿ ಆರ್. ವಸಂತ್, ಖಜಾಂಚಿ ಟಿ.ಎಚ್.ರತ್ನ ಉಪಸ್ಥಿತರಿದ್ದರು

District B.S.P. Birthday celebration of Prof. B. Krishnappa in the office

About Author

Leave a Reply

Your email address will not be published. Required fields are marked *