July 16, 2024

ಕಳವಾಗಿದ್ದ 9 ಲಕ್ಷ ರೂ. ಮೌಲ್ಯದ ಡ್ರಿಪ್‌ಪೈಪ್‌ಗಳ ವಶ

0
ಕಳವಾಗಿದ್ದ 9 ಲಕ್ಷ ರೂ. ಮೌಲ್ಯದ ಡ್ರಿಪ್‌ಪೈಪ್‌ಗಳ ವಶ

ಕಳವಾಗಿದ್ದ 9 ಲಕ್ಷ ರೂ. ಮೌಲ್ಯದ ಡ್ರಿಪ್‌ಪೈಪ್‌ಗಳ ವಶ

ಚಿಕ್ಕಮಗಳೂರು: ಸುಮಾರು ೯ ಲಕ್ಷ ರೂ. ಮೌಲ್ಯದ ೮೦ ಡ್ರಿಪ್‌ಪೈಪ್‌ಗಳ ಬಂಡಲ್ ಗಳನ್ನು ಕಳವು ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿ ಐವರು ಆರೋಪಿಗಳನ್ನು ಅಜ್ಜಂಪುರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಕಳೆದ ಜೂ.೫ರಂದು ಅಜ್ಜಂಪುರ ತಾಲೂಕಿನ ಗಡೀಹಳ್ಳಿ ಮುಗಳಿ ಬಳಿಯ ಓಪನ್ ವೇರ್ ಹೌಸ್ ನೇಟಾಫಿಮ್ ನಲ್ಲಿ ಸಂಗ್ರಹಿಸಿಟ್ಟಿದ್ದ ಸುಮಾರು ೮೦ ಡ್ರಿಪ್ ಪೈಪ್ ಗಳ ಬಂಡಲ್ ಗಳು ಕಳವಾಗಿತ್ತು. ಈ ಸಂಬಂಧ ಅಂಗಡಿ ಮಾಲಕ ಅಜ್ಜಂಪುರ ಠಾಣೆಗೆ ದೂರು ನೀಡಿದ್ದರು.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ಖಚಿತ ಮಾಹಿತಿ ಮೇರೆಗೆ ಅಜ್ಜಂಪುರ ತಾಲೂಕಿನ ತಮ್ಮಟದಹಳ್ಳಿ ಗೇಟ್ ಬಳಿ ವಾಹನವೊಂದನ್ನು ಪರಿಶೀಲಿಸಿದಾಗ ಕಳವಾಗಿದ್ದ ೮೦ ಡ್ರಿಪ್ ಪೈಪ್ ಗಳ ಬಂಡಲ್ ಗಳು ಪತ್ತೆಯಾಗಿವೆ. ಪ್ರಕರಣಕ್ಕೆ ಸಂಬಂಧಿಸಿ ಮುಗಳಿ ಗ್ರಾಮದವರೇ ಆದ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಮುಗಳಿ ಗ್ರಾಮದ ಅಜ್ಜಂಪುರ ನಿವಾಸಿಗಳಾದ ಶರತ್ ಎಂ.ಎನ್., ಸಾಗರ್ ಎಂ.ಕೆ., ಯಶವಂತ್, ಯತಿರಾಜು ಮತ್ತು ವೆಂಕಟೇಶ ಬಂಧಿತ ಆರೋಪಿಗಳು. ಆರೋಪಿಗಳಿಂದ ೮೦ ಡ್ರಿಪ್ ಪೈಪ್ ಬಂಡಲ್ ಗಳು, ೧ ಮಹೇಂದ್ರ ಜೀತೋ ವಾಹನ ವಶಪಡಿಸಿಕೊಂಡಿದ್ದು, ಅವುಗಳ ಒಟ್ಟು ಮೌಲ್ಯ ಒಂಭತ್ತು ಲಕ್ಷ ರೂ. ಎಂದು ಪೊಲೀಸ್ ಇಲಾಖೆ ಪ್ರಕಟನೆ ತಿಳಿಸಿದೆ.

ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ಅಧಿಕ್ಷಕ ವಿಕ್ರಂ ಅಮಟೆ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ ಹಾಗೂ ತರೀಕೆರೆ ಉಪ ವಿಭಾಗದ ಡಿವೈಎಸ್ಪಿ ಹಾಲಮೂರ್ತಿ ಮಾರ್ಗದರ್ಶನದಲ್ಲಿ ಅಜ್ಜಂಪುರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ವಿರೇಂದ್ರ ನೇತೃತ್ವದಲ್ಲಿ ಠಾಣೆಯ ಅಪರಾಧ ವಿಭಾಗದ ಪಿಎಸ್ಸೆಗಳಾದ ಶ್ರೀಧರ್ ನಾಯ್ಕ, ಉಲ್ಲಾಸ್ ಮೊಹಾಲೆ ಹಾಗೂ ಸಿಬ್ಬಂದಿ ಈ ಪ್ರಕರಣವನ್ನು ಬೇಧಿಸಿದ್ದಾರೆ.

ಪೊಲೀಸ್ ಸಿಬ್ಬಂದಿ ಬಸವರಾಜಪ್ಪ, ಎಂ.ತಿಪ್ಪೇಶ್, ಉಮೇಶ್, ರಂಗನಾಥ್, ಮಂಜನಾಯ್ಕ, ಶಿವರಾಜ್, ರವಿ ನಾಯ್ಕ, ಪರಮೇಶ್ವರ ನಾಯ್ಕ, ದುರ್ಗಪ್ಪ, ಶಶಿಕುಮಾರ್, ಮಲ್ಲಪ್ಪ, ಚಾಲಕರಾದ ಶಿವಾನಂದ ಮತ್ತು ಜಿಲ್ಲಾ ತಾಂತ್ರಿಕ ವಿಭಾಗದ ಸಿಬ್ಬಂದಿ ನಯಾಝ್, ರಬ್ಬಾನಿ, ಶೇಷಾದ್ರಿ, ಬಸವರಾಜ್, ಪ್ರಭು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಈ ಪ್ರಕರಣದಲ್ಲಿ ಯಶಸ್ವಿಯಾಗಿ ಆರೋಪಿಗಳನ್ನು ಪತ್ತೆ ಮಾಡಿ ದಸ್ತಗಿರಿ ಮಾಡಿದ ಎಲ್ಲಾ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಪೊಲೀಸ್ ಅಧೀಕ್ಷಕ ಡಾ.ವಿಕ್ರಮ್ ಅಮಟೆ ಶ್ಲಾಘಿಸಿದ್ದಾರೆ.

9 lakh was stolen. Possession of Drippipes of Value

 

About Author

Leave a Reply

Your email address will not be published. Required fields are marked *