ಚಿಕ್ಕಮಗಳೂರು: ಪರಿಶಿಷ್ಟ ಜಾತಿ ಮತ್ತು ವರ್ಗದ ನೌಕರರಿಗೆ ಡಿಸಿಸಿ ಬ್ಯಾಂಕ್ನಲ್ಲಿ ಸಂವಿಧಾನದ ಬದ್ಧವಾಗಿ ಮೀಸಲಾತಿಯನ್ನು ರೋಸ್ಟರ್ ನಿಯಮದ ಪ್ರಕಾರ ಕಡ್ಡಾಯವಾಗಿ ಜಾರಿಗೊಳಿಸಿ ಪದೋನ್ನತಿ ನೀಡಬೇಕು ಎಂದು ದಸಂಸ ಜಿಲ್ಲಾ ಮುಖಂಡರು ಬ್ಯಾಂಕ್ನ ಮುಖ್ಯ ಕಾರ್ಯನಿರ್ವಹಣಾ ಧಿಕಾರಿ ಜಿ.ತಿಮ್ಮಪ್ಪ ಅವರಿಗೆ ಸೋಮವಾರ ಮನವಿ ಸಲ್ಲಿಸಿ ಒತ್ತಾಯಿಸಿದರು.
ಬಳಿಕ ಮಾತನಾಡಿದ ದಸಂಸ ಜಿಲ್ಲಾ ಪ್ರಧಾನ ಸಂಚಾಲಕ ಮರ್ಲೆ ಅಣ್ಣಯ್ಯ ಹಲವಾರು ವರ್ಷಗಳ ಹಿಂದೆಯೇ ಬ್ಯಾಂಕಿನಲ್ಲಿ ಪ.ಜಾತಿ ಮತ್ತು ಪಂಗಡದ ನೌಕರರು ನೇಮಕಾತಿಗೊಳಿಸಿದೆ. ಆದರೆ ಬ್ಯಾಂಕಿನ ಎರಡನೇ ಬ್ಯಾಚ್ನ ನೌಕರರಿಗೂ ಜೇಷ್ಠತಾ ಪಟ್ಟಿಯನ್ನು ತಯಾರಿಸಿದ್ದು ಈ ಜೇಷ್ಟತಾ ಪಟ್ಟಿಯು ಸರಿ ಯಿಲ್ಲವೆಂದು ಹಿಂದಿನಿಂದಲೂ ಆಕ್ಷೇಪಣೆ ಸಲ್ಲಿಸಲಾಗಿದ್ದು ಯಾವ ಮಾನದಂಡದಿಂದ ತಯಾರಿಸಲಾ ಗಿದೆ ಎಂಬುದು ತಿಳಿಯುತ್ತಿಲ್ಲ ಎಂದು ಹೇಳಿದರು.
ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಮಾಜಿ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿಯವರು ಬ್ಯಾಂಕಿನ ನೌಕರರಿಗೆ ಪದೋನ್ನತಿ ನೀಡಿರುವುದಿಲ್ಲ. ಇದನ್ನು ಪ್ರಶ್ನಿಸಿ ಆಡಳಿತ ಮಂಡಳಿಯ ವಿರುದ್ಧ ಹಿರಿಯ ನೌಕ ರರು ಮೊಕದ್ದಮೆ ಹೂಡಿದ ಬಳಿಕ ಕೇಸ್ ಹಿಂಪಡೆಯಲು ಮಾಜಿ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿ ಸಭೆಯಲ್ಲಿ ಚರ್ಚಿಸಿ ಪ.ಜಾತಿ, ವರ್ಗದ ನೌಕರರಿಗೆ ಮೀಸಲಾತಿ ನೀಡುತ್ತೇವೆಂದು ನಿರ್ಣಯ ಕೈಗೊಂಡ ಬಳಿಕ ಮೊಖದ್ದಮೆ ಹಿಂಪಡೆಯಲಾಗಿದೆ ಎಂದರು.
ರಾಜ್ಯದ ಎಲ್ಲಾ ಜಿಲ್ಲೆಗಳ ಡಿಸಿಸಿ ಬ್ಯಾಂಕ್ಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪ.ಜಾತಿ, ವರ್ಗದ ನೌಕ ರರಿಗೆ ಸರ್ಕಾರದ ನಿಯಮದ ಪ್ರಕಾರ ರೋಸ್ಟರ್ ಪದ್ಧತಿಯನ್ನು ಅಳವಡಿಸಿಕೊಂಡು ಮೀಸಲಾತಿ ಅನ್ವಯ ಪದೋನ್ನತಿ ನೀಡಿರುತ್ತಾರೆ. ಆದರೆ ಚಿಕ್ಕಮಗಳೂರು ಮಾತ್ರ ಸರ್ಕಾರದ ನಿಯಮದ ಪ್ರಕಾರ ರೋಸ್ಟರ್ ಪದ್ಧತಿಯನ್ನು ಅಳವಡಿಸಿಕೊಂಡು ಮೀಸಲಾತಿ ಅನ್ವಯ ಪದೋನ್ನತಿ ನೀಡಿಲ್ಲ ಎಂದು ಹೇಳಿದರು.
ಸಂಘಗಳ ಕಾಯ್ದೆಯಡಿ ಪರಿಶಿಷ್ಟ ಜಾತಿ ಮತ್ತು ವರ್ಗದ ನೌಕರರಿಗೆ ನೇಮಕಾತಿ ಮತ್ತು ಪದೋನ್ನ ತಿ ಎರಡರಲ್ಲೂ ಸರ್ಕಾರದ ನಿಯಮದ ಪ್ರಕಾರ ಮೀಸಲಾತಿ ಅನ್ವಯ ಪದೋನ್ನತಿಯನ್ನು ನೀಡುವುದರ ಮೂಲಕ ಸಾಮಾಜಿಕ ನ್ಯಾಯವನ್ನು ಒದಗಿಸಿಕೊಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ದಸಂಸ ಜಿಲ್ಲಾ ಸಂಘಟನಾ ಸಂಚಾಳಕ ರಮೇಶ್, ಮುಖಂಡರುಗಳಾದ ಸೋಮಶೇಖರ್ ಸರಪನಹಳ್ಳಿ, ಸೋಮಶೇಖರ್ ಬಸವನಹಳ್ಳಿ, ಚೇತನ್ ಹಿರೇಮಗಳೂರು ಮತ್ತಿತರರು ಹಾಜರಿದ್ದರು.
Dasamsa insists on giving promotion to SC-ST employees