ಚಿಕ್ಕಮಗಳೂರು: ವಾಹನ ಸವಾರರಿಗೆ ತಿರುವುಗಳಲ್ಲಿ ಸುರಕ್ಷತೆ ವಹಿಸುವ ನಿಟ್ಟಿನಲ್ಲಿ ರೋಟರಿ ಕಾಫಿಲ್ಯಾಂಡ್ ಸಹಯೋಗದಲ್ಲಿ ನಗರದ ಎನ್.ಎಂ.ಸಿ. ವೃತ್ತ ಸೇರಿದಂತೆ ಐದು ಜಾಗದಲ್ಲಿ ೭೦ ಸಾವಿರ ರೂ.ಗಳ ವೆಚ್ಚದಲ್ಲಿ ಕಾನ್ವೆಸ್ಸ್ ಮಿರರ್ನ್ನು ಕೊಡುಗೆ ನೀಡಲಾಯಿತು.
ಬಳಿಕ ಮಾತನಾಡಿದ ಕಾಫಿಲ್ಯಾಂಡ್ ಅಧ್ಯಕ್ಷ ತನೋಜ್ನಾಯ್ಡು ಶೃಂಗಾರ್, ಎನ್.ಎಂಸಿ., ಪೈ ಕಲ್ಯಾಣ ಮಂಟಪದ ವೃತ್ತ, ಅಲ್ಲಂಪುರ-ಕೈಮರ ತಿರುವು ಹಾಗೂ ನಾಯ್ಡುಬೀದಿ ಮದ್ಯಭಾಗದಲ್ಲಿ ಕಾನ್ವೆ ಸ್ಸ್ ಮಿರರ್ಅನ್ನು ಅಳವಡಿಸಿ ವಾಹನ ಸವಾರರಿಗೆ ಅನುಕೂಲ ಮಾಡಿಕೊಡಲಾಗಿದೆ ಎಂದರು.
ಕಾಫಿಲ್ಯಾಂಡ್ನಿಂದ ಈಗಾಗಲೇ ಶಾಲಾ ವಿದ್ಯಾರ್ಥಿಗಳಿಗೆ ಸಂಚಾರಿ ಠಾಣಾ ಸಹಕಾರದೊಂದಿಗೆ ರಸ್ತೆ ಸುರಕ್ಷತಾ ಸಪ್ತಾಹವನ್ನು ಹಮ್ಮಿಕೊಂಡು ಅರಿವು ಮೂಡಿಸಲಾಗುತ್ತಿದೆ. ವರ್ಷದ ಕೊನೆಯ ಅವಧಿಯಲ್ಲಿ ಸವಾರರಿಗೆ ಅಪಘಾತ ತಪ್ಪಿಸುವ ನಿಟ್ಟಿನಲ್ಲಿ ಕಾನ್ವೆಸ್ ಮಿರರ್ ಅಳವಡಿಸಿ ಸಾಮಾಜಿಕ ಸೇವೆ ಸಲ್ಲಿಸಲಾಗಿದೆ ಎಂದು ಹೇಳಿದರು.
ಅಲ್ಲದೇ ಸಂಚಾರಿ ವಾಹನಕ್ಕೆ ಎಲ್.ಇ.ಡಿ. ಪರದೆ ಅಳವಡಿಸುವ ಮೂಲಕ ಒಂದು ವರ್ಷ ಗಳ ಕಾಲ ನಗರದ ಪ್ರಮುಖ ವೃತ್ತ ಹಾಗೂ ಬೀದಿಗಳಲ್ಲಿ ರಸ್ತೆ ಸುರಕ್ಷತಾ ನಿಯಮಗಳನ್ನು ಮನವರಿಕೆ ಮಾಡಿಕೊಡುವ ವಾಹನಕ್ಕೂ ಇಂದಿನಿಂದ ಚಾಲನೆ ನೀಡಲಾಗಿದೆ ಎಂದು ತಿಳಿಸಿದರು.
ಸಂಚಾರಿ ವಾಹನಕ್ಕೆ ಚಾಲನೆ ನೀಡಿ ಮಾತನಾಡಿದ ಟ್ರಾಫಿಕ್ ಇನ್ಸ್ಪೆಕ್ಟರ್ ಧನಂಜಯ್ ಈಗಾಗಲೇ ಇಲಾಖೆಯಿಂದ ಸಂಚಾರಿ ನಿಯಮಗಳ ಬಗ್ಗೆ ಸಾರ್ವಜನಿಕರು, ವಾಹನ ಸವಾರರಿಗೆ ಸಾಕಷ್ಟು ಅರಿವು ಕಾರ್ಯಕ್ರಮ ಹಮ್ಮಿಕೊಂಡಿದೆ. ಜೊತೆಗೆ ಕಾಫಿಲ್ಯಾಂಡ್ನಿಂದ ಕಾನ್ವೆಸ್ಸ್ ಮಿರರ್ ಅಳವಡಿಕೆಯಿಂದ ಸವಾ ರರಿಗೆ ಇನ್ನಷ್ಟು ಉಪಯೋಗವಾಗಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ರೋಟರಿ ಕಾಫಿಲ್ಯಾಂಡ್ ಕಾರ್ಯದರ್ಶಿ ನಾಗೇಶ್ ಕೆಂಜಿಗೆ, ಸಹ ಕಾರ್ಯದರ್ಶಿ ಆನಂದ್, ಮಾಜಿ ಅಧ್ಯಕ್ಷರುಗಳಾದ ಪ್ರಕಾಶ್, ರವೀಂದ್ರ ನಾಯ್ಡು, ನಾಸೀರ್ ಹುಸೇನ್, ದಯಾನಂದ್ ಮತ್ತಿತರರು ಹಾಜರಿದ್ದರು.
Convex mirror courtesy of Rotary Coffeeland