ಚಿಕ್ಕಮಗಳೂರು: ಪರಿಶುದ್ಧ ವಾತಾವರಣ ಹಾಗೂ ಸ್ವಚ್ಚಂದ ಆಮ್ಲಜನಕ ಪಡೆಯುವ ನಿಟ್ಟಿನಲ್ಲಿ ಸಮಾಜದ ನಾಗರೀಕರು ಮನೆಗಳ ಸಮೀಪ ಸಸಿಗಳನ್ನು ನೆಟ್ಟು ಪೋಷಿಸುವ ಕಾರ್ಯ ಮಾಡಬೇ ಕಿದೆ ಎಂದು ನಗರಸಭಾ ಉಪಾಧ್ಯಕ್ಷ ಅಮೃತೇಶ್ ಚೆನ್ನಕೇಶವ ಹೇಳಿದರು.
ನಗರದ ಗೌರಿಕಾಲುವೆ ಸಮೀಪ ಜಯಪ್ರಕಾಶ್ ನಾರಾಯಣ ಉದ್ಯಾನವನದಲ್ಲಿ ಸಸಿ ನೆಡುವ ಕಾರ್ಯಕ್ರಮ ಹಾಗೂ ಸಾರ್ವಜನಿಕರ ಕುಂದುಕೊರತೆಯನ್ನು ಮಂಗಳವಾರ ಆಲಿಸಿ ಮಾತನಾಡಿದರು.
ಪರಿಸರಕ್ಕೆ ಪೂರಕವಾಗಿರುವ ವಿವಿಧ ತಳಿಗಳ ಸಸಿಗಳನ್ನು ಮನೆಗೊಂದು ಗಿಡದಂತೆ ನೆಟ್ಟು ಕಾಳಜಿ ಯಿಂದ ನಿರ್ವಹಿಸಬೇಕು. ಅವುಗಳು ಬೆಳೆದು ಬೃಹದಕಾರವಾದರೆ ಮರಗಳ ಮಹತ್ವ ತಿಳಿಯಲಿದೆ ಎಂದ ಅವರು ದಿನದಲ್ಲಿ ಕೆಲವು ಸಮಯವನ್ನು ಬಿಡುವು ಮಾಡಿಕೊಂಡು ಸಸಿಗಳನ್ನು ಬೆಳೆಸಲು ಮುಂದಾಗಬೇಕು ಎಂದರು.
ಗೌರಿಕಾಲುವೆ ವಾರ್ಡಿನಲ್ಲಿ ನಿವಾಸಿಗಳು ಸಣ್ಣಪುಟ್ಟ ಸಮಸ್ಯೆಗಳಿರುವ ಕಾರಣ ಸಂಪೂರ್ಣವಾಗಿ ಬಗೆ ಹರಿಸಿಕೊಡುವ ಕಾರ್ಯಕ್ಕೆ ಮುಂದಾಗುವೆವು. ಹೀಗಾಗಿ ನಿವಾಸಿಗಳು ಆತಂಕಕ್ಕೆ ಒಳಗಾಗಬಾರದು. ಇತ್ತೀ ಚೆಗೆ ಡೆಂಗ್ಯೂ ಪ್ರಕರಣಗಳು ಉಲ್ಬಣಿಸುತ್ತಿರುವ ಹಿನ್ನೆಲೆಯಲ್ಲಿ ಮನೆಗಳ ಸಮೀಪ ನೀರು ನಿಲ್ಲದಂತೆ ಗಮನ ಹರಿಸಬೇಕು ಎಂದು ತಿಳಿಸಿದರು.
ಪಾರ್ಕ್ ಅಭಿವೃದ್ದಿ ಸಮಿತಿ ಅಧ್ಯಕ್ಷ ರವಿ ಕಳವಾಸೆ ಮಾತನಾಡಿ ವಿಶಾಲ ಸ್ಥಳದಲ್ಲಿರುವ ಈ ಪಾರ್ಕ್ಗೆ ಮೂಲಭೂತ ಸೌಕರ್ಯಗಳ ಕೊರತೆ ಹೆಚ್ಚಿದೆ. ಸಂಜೆ ಸಮಯದಲ್ಲಿ ಪಾದಚಾರಿಗಳು ಸಂಚರಿಸಲು ವಾ ಕಿಂಗ್ಪಾತ್, ನೀರು ಹಾಗೂ ಆಸನದ ವ್ಯವಸ್ಥೆ ಕಲ್ಪಿಸಿಕೊಡಬೇಕು ಎಂದು ಉಪಾಧ್ಯಕ್ಷರಿಗೆ ಮನವಿ ಸಲ್ಲಿಸಿ ದರು.
ಸ್ಥಳೀಯ ನಿವಾಸಿಗಳು ಮಾತನಾಡಿ ಚರಂಡಿಯಲ್ಲಿ ಪ್ಲಾಸ್ಟಿಕ್ ತ್ಯಾಜ್ಯಗಳಿಂದ ಒಂದೇ ಸ್ಥಳದಲ್ಲಿ ನೀರು ನಿಲ್ಲುವಂತಾಗಿದೆ. ಮಳೆ ಸಮಯದಲ್ಲಿ ರಸ್ತೆಯ ಮೇಲೆಲ್ಲ ಹರಿದು ದುರ್ವಾಸನೆಯಿಂದ ಕೂಡಿದೆ. ಇದರಿಂದ ರಸ್ತೆಗಳಲ್ಲಿ ಸಾರ್ವಜನಿಕರು ಸಂಚರಿಸದ ಸ್ಥಿತಿ ನಿರ್ಮಾಣವಾಗಿದೆ ಎಂದು ಕೋರಿದಾಗ ಉಪಾಧ್ಯಕ್ಷರು ಸದ್ಯ ದಲ್ಲೇ ನಿವಾಸಿಗಳ ಸಮಸ್ಯೆಗಳಿಗೆ ಶೀಘ್ರದಲ್ಲೇ ಪರಿಹಾರ ಒದಗಿಸಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಕನ್ನಡಸೇನೆ ಜಿಲ್ಲಾಧ್ಯಕ್ಷ ಪಿ.ಸಿ.ರಾಜೇಗೌಡ, ಆಟೋ ಘಟಕದ ಅಧ್ಯಕ್ಷ ಜಯಪ್ರ ಕಾಶ್, ಭೂಮಿಕಾ ಟಿವಿ ಸಂಪಾದಕ ಅನಿಲ್ಆನಂದ್, ಪತ್ರಿಕಾ ಸಂಪಾದಕ ಪಿ.ರಾಜೇಶ್, ಪಾರ್ಕ್ ಅಭಿವೃದ್ದಿ ಸಮಿತಿ ಸದಸ್ಯರುಗಳಾದ ರಾಬರ್ಟ್, ವೆಂಕಟೇಶ್, ಅಶ್ರಫ್ಆಲಿ, ಮಸೂದ್, ಜಮೀಲ್, ಮೇಘರಾಜ್, ಹಸೀನಾ, ಸುಜಾತ ಮತ್ತಿತರರು ಹಾಜರಿದ್ದರು.
Plantation program at Jayaprakash Narayan Park near Gaurikaluve