ಚಿಕ್ಕಮಗಳೂರು: – ಆರ್ಥಿಕ ಹಾಗೂ ಸಾಮಾಜಿಕವಾಗಿ ಹಿಂದುಳಿದಿರುವ ಬಡ ವಿದ್ಯಾ ರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ವಿದ್ಯಾಸಂಸ್ಥೆ ಸ್ಥಾಪಿಸಿ ಗುಣಮಟ್ಟದ ಶಿಕ್ಷಣವನ್ನು ಒದಗಿಸಲಾಗುತ್ತಿದೆ ಎಂದು ವಿದ್ಯಾಸಂಸ್ಥೆ ಅಧ್ಯಕ್ಷರು ಹಾಗೂ ಹಳೇಬೀಡಿನ ಪುಷ್ಪಗಿರಿ ಸಂಸ್ಥಾನ ಮಠದ ಶ್ರೀ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ನಗರದ ಕೆ.ಎಂ.ರಸ್ತೆ ಸಮೀಪ ಶ್ರೀ ಗುರುಸಿದ್ದರಾಮೇಶ್ವರ ವಿದ್ಯಾಸಂಸ್ಥೆಯ ನೂತನ ಸಭಾಂಗಣ, ಕಂಪ್ಯೂಟರ್ ವಿಭಾಗ ಹಾಗೂ ಸಸಿ ನೆಡುವ ಮೂಲಕ ವನಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಂ ಗಳವಾರ ಅವರು ಮಾತನಾಡಿದರು.
ಸಮಾಜದಲ್ಲಿ ಅಶಕ್ತರಿಗೆ ಹಾಗೂ ಕಲಿಕೆಯ ಆಸಕ್ತಿ ಹೊಂದಿರುವ ಮಕ್ಕಳಿಗೆ ವಿದ್ಯಾಸಂಸ್ಥೆಯಲ್ಲಿ ಸಕಲ ಸೌಲಭ್ಯಗಳು ಹಾಗೂ ಪರಿಣಿತ ಶಿಕ್ಷಕರ ವೃಂದದಿಂದ ಗುಣಮಟ್ಟದ ವಿದ್ಯಾಭ್ಯಾಸ ನೀಡುತ್ತಿದೆ. ಅಲ್ಲದೇ ವರ್ಷಕ್ಕೆ ಕನಿಷ್ಟ ಆಯ್ದ ೧೦ ಮಕ್ಕಳಿಗೆ ಮಠದಿಂದ ಉಚಿತ ವಿದ್ಯಾಭ್ಯಾಸಕ್ಕೆ ಅನುವು ಮಾಡಿಕೊಡಲಾಗುತ್ತಿದೆ ಎಂದು ತಿಳಿಸಿದರು.
ವಿದ್ಯಾರ್ಥಿಗಳಿಗೆ ಪೂರಕವಾಗುವ ನಿಟ್ಟಿನಲ್ಲಿ ಶಾಲೆಯ ಸುತ್ತಮುತ್ತಲಿನ ವಾತಾವರಣವು ಹಚ್ಚಹಸಿರಿ ನಿಂದ ಕೂಡಿದೆ. ಅಲ್ಲದೇ ಸಮಾಜ ಬಾಂಧವರ ಸಹಕಾರವು ವಿದ್ಯಾಸಂಸ್ಥೆಗೆ ಸಾಕಷ್ಟಿರುವ ನಿಟ್ಟಿನಲ್ಲಿ ಮುಂದೆ ವಿದ್ಯಾಸಂಸ್ಥೆಯಲ್ಲಿ ೯ ಮತ್ತು ೧೦ನೇ ತರಗತಿಗಳನ್ನು ಪ್ರಾರಂಭಿಸುವ ಗುರಿ ಹೊಂದಲಾಗಿದೆ ಎಂದರು.
ವಿದ್ಯಾಸಂಸ್ಥೆಯಲ್ಲಿ ಇದೀಗ ೮ನೇ ತರಗತಿ ಪ್ರಾರಂಭಗೊಂಡಿದೆ. ವಿಶೇಷವೆಂದರೆ ಶಾಲೆಯಲ್ಲಿ ವ್ಯಾಸಂ ಗ ನಡೆಸಿದ ಅಥವಾ ನೇರವಾಗಿ ೮ನೇ ತರಗತಿಗೆ ಸೇರ್ಪಡೆಗೊಳ್ಳುವ ವಿದ್ಯಾರ್ಥಿಗಳಿಗೆ ಶುಲ್ಕರಹಿತ ಸಂಪೂ ರ್ಣ ಉಚಿತ ಶಿಕ್ಷಣವನ್ನು ವಿದ್ಯಾದಾಸೋಹದಡಿ ಮಠದಿಂದ ಕಲ್ಪಿಸಿಕೊಡಲಾಗಿದೆ ಎಂದು ಹೇಳಿದರು.
ಕಂಪ್ಯೂಟರ್ ವಿಭಾಗಕ್ಕೆ ಚಾಲನೆ ನೀಡಿ ಮಾತನಾಡಿದ ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಎಂ.ಸಿ.ಶಿವಾ ನಂದಸ್ವಾಮಿ ಸಮುದಾಯದ ಸಹಕಾರ ಹಾಗೂ ಪುಷ್ಪಗಿರಿ ಸಂಸ್ಥಾನ ಮಠದ ಆಶೀರ್ವಾದದಿಂದ ಶಾಲೆ ಯು ಉತ್ತಮವಾಗಿ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಶಾಲೆಗೆ ಸವಲತ್ತು ಒದಗಿಸುವ ಕಾರ್ಯಗಳಿರುವ ಹಿನ್ನೆಲೆಯಲ್ಲಿ ಜನಾಂಗದ ಹೆಚ್ಚಿನ ಸಹಕಾರ ಅವಶ್ಯವಿದೆ ಎಂದರು.
ಈ ಸಂದರ್ಭದಲ್ಲಿ ಶ್ರೀ ಗುರು ಸಿದ್ದರಾಮೇಶ್ವ ವಿದ್ಯಾಸಂಸ್ಥೆಯ ನಿಕಟ ಪೂರ್ವ ಅಧ್ಯಕ್ಷ ಬಿ.ಆರ್. ಜಗದೀಶ್, ಸದಸ್ಯರುಗಳಾದ ಸಿದ್ದರಾಮೇಗೌಡ, ಕಾರ್ಯದರ್ಶಿ ಸತೀಶ್, ಸಹ ಕಾರ್ಯದರ್ಶಿ ರಮೇಶ್, ಸರ್ಕಾರಿ ನಿವೃತ್ತ ನೌಕರರಾದ ತಿಮ್ಮಣ್ಣ, ಬಸವರಾಜಪ್ಪ, ಬಾಲಚಂದ್ರೇಗೌಡ, ಮಾಜಿ ಕಾರ್ಯದರ್ಶಿ ಚಂದ್ರ ಶೇಖರ್ ಮತ್ತಿತರರು ಹಾಜರಿದ್ದರು.
Vanamahotsava by planting saplings in Shri Gurusiddharameshwar Vidyasarina