ಚಿಕ್ಕಮಗಳೂರು: ಜಿಲ್ಲಾ ಕೃಷಿಕ ಸಮಾಜದ ಕಟ್ಟಡವನ್ನು ಸುಮಾರು ೧೨ ಲಕ್ಷ ರೂ ವೆಚ್ಚದಲ್ಲಿ ಪುನರ್ ನಿರ್ಮಾಣ ಮಾಡಲಾಗಿದೆ ಎಂದು ಸಮಾಜದ ಜಿಲ್ಲಾಧ್ಯಕ್ಷ ನರೇಂದ್ರ ತಿಳಿಸಿದರು.
ಅವರು ಇಂದು ಕೃಷಿ ಇಲಾಖೆ ಆವರಣದಲ್ಲಿ ನೂತನ ಕಟ್ಟಡ ಶುಭಾರಂಭಗೊಂಡ ಹಿನ್ನೆಲೆಯಲ್ಲಿ ಪೂಜೆ ನೆರವೇರಿಸಿ ಮಾತನಾಡಿದರು.
ನೂತನ ಕಟ್ಟಡ ನಿರ್ಮಾಣ ಕಾರ್ಯಕ್ಕೆ ಕೃಷಿಕ ಸಮಾಜದ ಪದಾಧಿಕಾರಿಗಳು, ಸಿಬ್ಬಂದಿ ಸಹಕರಿಸಿದ್ದು ನಂತರ ನಡೆಸಿದ ಸಭೆಯಲ್ಲಿ ಕೃಷಿಗೆ ಸಂಬಂಧಿಸಿದ ಮಳೆ-ಬೇಳೆ ಹಾಗೂ ಬೆಳೆಗೆ ಗೊಬ್ಬರ ನೀಡುವ ಬಗ್ಗೆ ಸಹ ಚರ್ಚಿಸಲಾಗುತ್ತದೆ ಎಂದು ಹೇಳಿದರು.
ಕೃಷಿ ಇಲಾಖೆ ಜಂಟಿ ನಿರ್ದೇಶಕರಾದ ಸುಜಾತ ಮಾತನಾಡಿ, ಕೃಷಿಕ ಸಮಾಜದ ಕಟ್ಟಡ ನೂತನವಾಗಿ ತುಂಬಾ ಚೆನ್ನಾಗಿ ನಿರ್ಮಾಣ ಮಾಡಲಾಗಿದೆ, ಅದೇ ರೀತಿ ಸದ್ಭಳಕೆ ಆಗಬೇಕು ಎಂದು ಹೇಳಿದರು.
ಇನ್ನು ಮುಂದೆ ಸಕ್ರಿಯವಾಗಿ ಕೃಷಿಕ ಸಮಾಜದ ಉದ್ದೇಶಗಳನ್ನು ಈಡೇರಿಸಲು ಬದ್ಧವಾಗಿದೆ, ರೈತರಿಗೆ ಪೂರಕವಾದ ರೇ?, ಕೃಷಿ, ತೋಟಗಾರಿಕೆ ಸೇರಿದಂತೆ ಬೇರೆ ಬೇರೆ ಇಲಾಖೆಗಳಿದ್ದು ಕೃಷಿಕ ಸಮಾಜಕ್ಕೆ ಮಾತ್ರ ಒಂದೇ ಇಲಾಖೆ ಇದೆ ಎಂದರು.
ಒಂದೇ ಸೂರಿನಡಿ ಕೃಷಿಕ ಸಮಾಜ ರೈತರಿಗೆ ಅಗತ್ಯ ಸೌಲಭ್ಯ ಕಲ್ಪಿಸಿದ್ದು, ಇನ್ನು ಮುಂದೆ ಇನ್ನ? ಪರಿಣಾಮಕಾರಿಯಾಗಿಸಲು ಎಲ್ಲರ ಸಹಕಾರ ಅಗತ್ಯ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಜೂನ್ ಮಾಹೆಯಲ್ಲಿ ಮಳೆ ಕೊರತೆ ಆಗಿತ್ತು ಆದರೆ ಈಗ ಪ್ರಾರಂಭವಾಗಿರುವುದು ರೈತರಲ್ಲಿ ಮಂದಹಾಸ ಬೀರಿದೆ, ಪೂರ್ವ ಮುಂಗಾರಿನಲ್ಲಿ ಬಿತ್ತನೆಗೊಂಡಿದ್ದ ಬೆಳೆಗಳಿಗೆ ನೀರಿನ ಕೊರತೆ ಕಂಡು ಬರುತ್ತಿದೆ ಎಂದು ಹೇಳಿದರು.
ರಸಗೊಬ್ಬರ ಜಿಲ್ಲೆಗೆ ಬೇಕಾಗುವ? ದಾಸ್ತಾನಿಡಲಾಗಿದೆ, ರಸಗೊಬ್ಬರ ಮತ್ತು ಬಿತ್ತನೆ ಬೀಜದ ಕೊರತೆ ಇಲ್ಲ, ಮೆಕ್ಕೆಜೋಳ, ರಾಗಿ, ಭತ್ತದ ಬೀಜವನ್ನು ದಾಸ್ತಾನಿಡಲು ಪ್ರಾರಂಭಿಸಲಾಗಿದೆ ಎಂದರು.
ಎಲ್ಲಾ ರೈತರು ಕೃಷಿ ಇಲಾಖೆ ಬಿಡುಗಡೆ ಮಾಡಿರುವ ಕ್ಯೂಆರ್ ಕೋಡ್ ಬಳಸಿ ರೈತ ಸಂಪರ್ಕ ಕೇಂದ್ರದಲ್ಲಿ ಎಲ್ಲಾ ಸೌಲಭ್ಯ ಪಡೆಯಬಹುದಾಗಿದೆ, ರೈತರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಿದರು.
ಇದುವರೆಗೆ ಎಳ್ಳು, ಹೆಸರು, ಉದ್ದು, ಶೇಂಗಾ, ಸೂರ್ಯಕಾಂತಿ, ಹತ್ತಿ ಬೆಳೆಗಳನ್ನು ಈಗಾಗಲೇ ಬಿತ್ತನೆ ಕಾರ್ಯ ಮುಕ್ತಾಯವಾಗಿದೆ, ಜಿಲ್ಲೆ ಅತಿ ಹೆಚ್ಚು ಬೆಳೆಯುವ ಬೆಳೆಗಳಾದ ಮೆಕ್ಕೆಜೋಳ, ರಾಗಿ, ಭತ್ತ ಈಗ ಬಿತ್ತನೆ ಕಾರ್ಯ ಆರಂಭವಾಗಲಿದೆ ಎಂದು ಹೇಳಿದರು.
ಎಲ್ಲಾ ತಾಲೂಕಿನಲ್ಲೂ ಕೃಷಿ ಪರಿಕರ ಮಾರಾಟಗಾರರ ಸಭೆ ಕರೆದು, ಎಲ್ಲಾ ಕೃಷಿ ಕಾಯ್ದೆಗಳ ಬಗ್ಗೆ ಮಾಹಿತಿ ನೀಡಲಾಗಿದೆ. ಅಕ್ರಮವಾಗಿ ದಾಸ್ತಾನು ಮಾಡಿ ಸಂಗ್ರಹಿಸಿಡುವವರ ವಿರುದ್ಧ ಅಗತ್ಯ ವಸ್ತುಗಳ ಕಾಯ್ದೆಯನ್ವಯ ಪ್ರಕರಣ ದಾಖಲಿಸಲಾಗುವುದೆಂದು ಎಚ್ಚರಿಸಿದರು.
ಮೂಡಿಗೆರೆ ಅಧ್ಯಕ್ಷ ಡಿ.ಎಲ್ ಅಶೋಕ್ಕುಮಾರ್ ಮಾತನಾಡಿ, ಹಳೆ ಕಟ್ಟಡ ರಿನ್ವೇ?ನ್ ಮಾಡಿರುವುದು ಹಳೆ ಬಾಟಲಿಗೆ ಹೊಸ ಮಧ್ಯ ಹಾಕಿದಂತಾಗಿದ್ದು, ಸರ್ಕಾರದ ಸುಮಾರು ೧೨ ಲಕ್ಷ ರೂ ನ?ವಾಯಿತು. ಮುಂದೆ ಇದೇ ರೀತಿ ಆಗದಂತೆ ಅಧಿಕಾರಿಗಳು ಎಚ್ಚರ ವಹಿಸಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಕೃಷಿಕ ಸಮಾಜದ ಉಪಾಧ್ಯಕ್ಷ ಮಂಜುನಾಥ್ ಕಾರ್ಯದರ್ಶಿ ಮನು ಶೃಂಗೇರಿಯ ರಂಗಣ್ಣ ಮಂಜುನಾಥ್ ಕೊಪ್ಪದ ಸದಾನಂದ್ ಏಕೆ ವಸಂತೇಗೌಡ ಸದಾಶಿವ ಜಿಲ್ಲಾ ಪ್ರತಿನಿಧಿ ಕಡೂರಿನ ಈಶ್ವರಪ್ಪ ಪ್ರಸನ್ನ ಕುಮಾರ್ ತರೀಕೆರೆಯ ರವಿ ಚಂದ್ರ ಮೌಳಿ ಇತರರು ಉಪಸ್ಥಿತರಿದ್ದರು
Reconstruction of District Agriculture Society building at a cost of Rs 12 lakhs