ಚಿಕ್ಕಮಗಳೂರು: ಶ್ರೀ ಕ್ಷೇತ್ರ ಬಿಂಡಿಗ ದೇವಿರಮ್ಮ ದೇವಾಲಯ ವ್ಯವಸ್ಥಾಪನ ಸಮಿತಿ ವತಿಯಿಂದ ನಿರ್ಮಾಣಗೊಂಡ ಶ್ರೀ ದೇವಿರಮ್ಮನವರ ಭಕ್ತಿ ಗೀತೆಗಳ ಗುಚ್ಛ ಶ್ರೀ ದೇವಿ ಅಂಬೆ ಜಗದಂಬೆ ಲೋಕಾರ್ಪಣೆ ಕಾರ್ಯಕ್ರಮವನ್ನು ಶ್ರೀ ಅಮ್ಮನವರ ದಿವ್ಯ ಸಾನಿಧ್ಯದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಆಶಾಕಿರಣ ಅಂದ ಮಕ್ಕಳ ಪಾಠಶಾಲೆಯ ಅಧ್ಯಕ್ಷರಾದ ಡಾ. ಜೆಪಿ ಕೃಷ್ಣೇಗೌಡ ಜ್ಯೋತಿ ಬೆಳಗುವುದರ ಮೂಲಕ ಉದ್ಘಾಟಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು ತಾಯಿ ದೇವರಮ್ಮನವರಿಗೆ ಸಾವಿರಾರು ವರ್ಷಗಳ ಇತಿಹಾಸವಿದೆ ದೇವಿರಮ್ಮ ಈ ಸ್ಥಳದಲ್ಲಿ ನೆಲೆಸಿರುವುದಕ್ಕೆ ಒಂದು ರೋಚಕವಾದ ಕಥೆ ಇದೆ. ಚಾಮುಂಡೇಶ್ವರಿ ಮಹಿಷಾಸುರನನ್ನು ಸಂಹಾರ ಮಾಡಿ ವಿಶ್ರಾಂತಿಗಾಗಿ ಈ ಬೆಟ್ಟದ ಮೇಲೆ ನೆಲೆಸಿದ್ದಾಳೆ ಎಂಬ ಪೂರ್ವಿಕರ ನಂಬಿಕೆ ಇದೆ ಹೇಳಿದರು .
ಸಾಹಿತಿಗಳಾದ ಕಲ್ಕಟ್ಟೆ ನಾಗರಾಜ್ ಅವರು ಮಾತನಾಡಿ ನಾನೊಬ್ಬ ಹಾಡುಗಾರ ನಾನೊಬ್ಬ ದೊಡ್ಡ ಸಿಂಗರ್ ಎಂಬ ಮನೋಭಾವ ಬಂತು ಎಂದರೆ ಅದು ಅಹಂಕಾರ ಆದರೆ ತನ್ನೊಳಗಿನ ಅಹಂಕಾರವನ್ನು ದೂರ ಮಾಡುವ ಶಕ್ತಿ ಸಂಗೀತಕ್ಕಿದೆ ನಾವು ವಿದ್ಯಾರ್ಥಿಗಳಾಗಿದ್ದಾಗ ನಮಗೆ ನಮ್ಮ ತಂದೆಯವರು ಅನೇಕ ಹಾಡುಗಳನ್ನು ಬರೆದು ಕೊಡುತ್ತಿದ್ದರು ನಾನು ಅದನ್ನು ಓದುತ್ತಾ ಓದುತ್ತಾ ಸಂಗೀತದ ಮೇಲೆ ಆಸಕ್ತಿ ಹೆಚ್ಚಾಗಿ ಇಂದು ೮೦೦೦ ಗೀತೆಗಳನ್ನು ಬರೆಯುವ ಅವಕಾಶ ಸಿಕ್ಕಿದೆ ಅದೇ ನನ್ನ ಅದೃಷ್ಟ ಎಂದು ಹೇಳಿದರು ಬಹಳ ವಿಶೇಷವಾಗಿ ಖ್ಯಾತ ಗಾಯಕರಾದ ಎಸ್ ಪಿ ಬಾಲಸುಬ್ರಹ್ಮಣ್ಯ ಅವರು ನಾನು ಬರೆದಿರುವ ಭಾವದಲೆಯಲಿ ಶಾರದೆ ಗಾನ ಹಾಡನ್ನು ಹಾಡಿರುವುದು ನನ್ನ ಜೀವನದಲ್ಲಿ ಮರೆಯಲಾಗದ ನೆನಪು ಎಂದು ಹೇಳಿದರು.
ಶ್ರೀ ಕ್ಷೇತ್ರ ಬಿಂಡಿಗ ದೇವಿರಮ್ಮ ದೇವಾಲಯ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಕುಲಶೇಖರ್ ಅವರು ಮಾತನಾಡಿ ನಮ್ಮ ಹಿರಿಯರು ಹೇಳುತ್ತಾ ಇದ್ರು ಒಳ್ಳೆ ಸಂಗೀತಕ್ಕೆ ಮಳೆ ಬರಿಸುವ ಶಕ್ತಿ ಇದೆ ಎಂದು ಆದರೆ ಅದು ಇಂದು ನಿಜ ಆಗಿದೆ ನಾಗರಾಜ್ ಕಲ್ಕಟ್ಟೆ ಅವರು ಬರೆದಿರುವ ಗೀತೆಗಳನ್ನು ದೇವರು ಕೂಡ ಒಪ್ಪಿಕೊಂಡು ಮಳೆ ಸುರಿಸಿದ್ದಾನೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ದೇವಸ್ಥಾನ ವ್ಯವಸ್ಥಾಪನ ಸಮಿತಿಯ ರಾಜೇಗೌಡ, ನಿಂಗಪ್ಪ, ಸಂಗೀತ ರಚನೆಕಾರರಾದ ರೇಖಾ ನಾಗರಾಜರಾವ್, ಗಾಯಕರಾದ ಮಲ್ಲಿಗೆ ಸುದೀರ್, ಅನುಷಾ ಅಂಚನ್, ರಶ್ಮಿ, ಭಾಗ್ಯಶ್ರೀ ಗೌಡ, ವೈಷ್ಣವಿ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಉಪಸ್ಥಿತರಿದ್ದರು.
Sri Devi Ambe Jagadambe Lokarpane a collection of devotional songs by Sri Devi Ramman