ಚಿಕ್ಕಮಗಳೂರು: ನಗರಸಭಾ ನಾಮಿನಿ ಹಾಗೂ ಆಶ್ರಯ ಸಮಿತಿ ನೂತನ ಸದಸ್ಯರು ಗಳು ಸಿಕ್ಕಂತಹ ಅವಕಾಶವನ್ನು ಸದ್ಬಳಕೆ ಮಾಡಿಕೊಂಡು ಜನಸೇವೆಯಲ್ಲಿ ತೊಡಗಿಸಿಕೊಳ್ಳುವ ಮುಖಾಂತರ ಭವಿಷ್ಯದಲ್ಲಿ ಚುನಾಯಿತ ಪ್ರತಿನಿಧಿಯಾಗಬೇಕು ಎಂದು ಶಾಸಕ ಹೆಚ್.ಡಿ.ತಮ್ಮಯ್ಯ ಹೇಳಿದರು.
ನಗರದ ಶಾಸಕರ ಕಚೇರಿಯಲ್ಲಿ ನೂತನ ನಗರಸಭಾ ನಾಮಿನಿ ಸದಸ್ಯರಾದ ಪ್ರಕಾಶ್ರೈ ಕೆಂಪನಹಳ್ಳಿ, ಮೊಹಿಯುದ್ದೀನ್ ಷರೀಫ್, ಕೀರ್ತಿಶೇಟ್, ಸುರೇಶ್, ತಬ್ರೀಜ್ಅಹ್ಮದ್ ಹಾಗೂ ಆಶ್ರಯ ಸಮಿತಿ ಸದಸ್ಯ ರಾದ ಪ್ರಸಾದ್ ಅಮೀನ್, ಮಧುಕುಮಾರ್, ಫಯಾಜ್ ಆಯ್ಕೆಗೊಂಡ ಹಿನ್ನೆಲೆ ಭಾನುವಾರ ಸಂಜೆ ಅಭಿ ನಂದನೆ ಸಲ್ಲಿಸಿ ಅವರು ಮಾತನಾಡಿದರು.
ಆಯಾ ವಾರ್ಡಿನ ಚುನಾಯಿತ ಪ್ರತಿನಿಧಿಗಳು ಮೂಲಭೂತ ಸೌಕರ್ಯಗಳಿಗೆ ಒತ್ತು ನೀಡುವ ಕೆಲ ಸ ಮಾಡಲಿದ್ದು, ನಾಮಿನಿ ಸದಸ್ಯರುಗಳು ವಾರ್ಡಿನ ಬಡ ಕುಟುಂಬಕ್ಕೆ ಜನನ-ಮರಣ ಪ್ರಮಾಣ ಪತ್ರ, ಖಾತೆ ಮಾಡಿಸುವುದು ಹಾಗೂ ಮನೆ ನಿರ್ಮಿಸಲು ಅನುಮತಿ ಪತ್ರವನ್ನು ಒದಗಿಸುವ ಕಾರ್ಯಕ್ಕೆ ಮುಂ ದಾಗಿ ಜನತೆಯ ವಿಶ್ವಾಸ ಗಳಿಸಬೇಕು ಎಂದರು.
ಅಧಿಕಾರ ಎನ್ನುವುದು ಯಾರಿಗೂ ಶಾಶ್ವತವಲ್ಲ. ಇರುವಷ್ಟು ದಿವಸಗಳಲ್ಲಿ ಕೈಗೊಂಡಂತಹ ಕಾರ್ಯ ಗಳೇ ಜನಪ್ರತಿನಿಧಿಗಳಿಗೆ ಪ್ರೇರಣೆಯಾಗಲಿದೆ. ತಾವು ಕೂಡಾ ರಾಜಕೀಯ ಕ್ಷೇತ್ರದಲ್ಲಿ ಪ್ರಥಮ ಬಾರಿಗೆ ನಗರಸಭಾ ನಾಮಿನಿ ಸದಸ್ಯರಾಗಿ ಪಾದಾರ್ಪಣೆ ಮಾಡಿ ಇದೀಗ ಶಾಸಕನಾಗಿ ಕಾರ್ಯನಿರ್ವಹಿಸುವ ಸ್ಥಾನ ಪಡೆದಿದ್ದೇನೆ ಎಂದು ಉದಾಹರಣೆ ನೀಡಿದರು.
ಆಶ್ರಯ ಸಮಿತಿ ಸದಸ್ಯರುಗಳು ಸಭೆಗಳಲ್ಲಿ ಹಾಜರಾಗುವ ಮೂಲಕ ಬಡವರಿಗೆ ನಿವೇಶನ ಒದಗಿ ಸುವ ನಿಟ್ಟಿನಲ್ಲಿ ದಾಖಲಾತಿ ಪಡೆದು ಅರ್ಜಿ ಸಲ್ಲಿಸುವ ಕೆಲಸ ಮಾಡಬೇಕು. ಸಿಕ್ಕಂತಹ ಅವಧಿಯಲ್ಲಿ ಕನಿಷ್ಟ ಕುಟುಂಬಕ್ಕೆ ನಿವೇಶನ ಒದಗಿಸಿಕೊಡಬೇಕು. ಜೊತೆಗೆ ಪಕ್ಷನಿಷ್ಟೆಯಿಂದ ಕಾರ್ಯನಿರ್ವಹಿಸಬೇಕು ಎಂದು ಕಿವಿಮಾತು ಹೇಳಿದರು.
ನಗರಸಭಾ ಹಾಗೂ ಆಶ್ರಯ ಸಮಿತಿ ಸದಸ್ಯರುಗಳು ನಿರಂತರ ಜನಸಂಪರ್ಕದಿಂದ ಕಾರ್ಯನಿರ್ವ ಹಿಸಿದರೆ ಮುಂದೆ ಚುನಾಯಿತರಾಗಲು ಸಾಧ್ಯ. ಜೊತೆಗೆ ಪಕ್ಷವು ಅಧಿಕಾರ ಪಡೆದುಕೊಂಡರೆ ಮೀಸಲಾತಿ ಪ್ರಕಾರ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನವನ್ನು ಅಲಂಕರಿಸಬಹುದು. ಹೀಗಾಗಿ ದೊರೆತ ಅವಕಾಶಗಳನ್ನು ಸದುಯೋಗಪಡಿಸಿಕೊಂಡು ಮುನ್ನೆಡೆಯಬೇಕು ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಪಿ.ಮಂಜೇಗೌಡ ಮಾತನಾಡಿ ಪಕ್ಷದಲ್ಲಿ ಹಲವಾರು ಕಾಲಗಳಿಂದ ದುಡಿದಿರುವ ಮುಖಂಡರುಗಳು ನಾಮಿನಿ ಸದಸ್ಯರ ಸ್ಥಾನವನ್ನು ಸರ್ಕಾರ ಒದಗಿಸಿದೆ. ಆ ಹಿನ್ನೆಲೆಯಲ್ಲಿ ಮು ಖಂಡರುಗಳು ಜನತೆಯಲ್ಲಿ ಉತ್ತಮ ಬಾಂಧವ್ಯ ವೃದ್ದಿಸಿಕೊಂಡು ಮುನ್ನೆಡೆದರೆ ಯಶಸ್ಸು ಸಾಧ್ಯ ಎಂದರು.
ನಗರದ ವಾರ್ಡ್ಗಳಲ್ಲಿ ಸಂಕಷ್ಟದಿಂದ ಕೂಡಿರುವ ಕುಟುಂಬಕ್ಕೆ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದರೆ ಮಾತ್ರ ಜನತೆಯ ಮನಸ್ಸಿನಲ್ಲಿ ಶಾಶ್ವತವಾಗಿ ನೆಲೆಯೂರಲು ಸಾಧ್ಯ. ಸದಸ್ಯರುಗಳು ಕಷ್ಟ-ಸುಖಗಳಿಗೆ ಸ್ಪಂದಿ ಸಬೇಕು. ಇಂಥ ಕಾರ್ಯಗಳಿಂದ ಮುಂದಿನ ದಿನಗಳಲ್ಲಿ ಅಧಿಕಾರ ಪಡೆದು ಇನ್ನಷ್ಟು ಜನಪರ ಕಾಳಜಿ ಹೊಂದಬಹುದು ಸಲಹೆ ನೀಡಿದರು. ಈ ಸಂದರ್ಭದಲ್ಲಿ ಪಕ್ಷದ ಮುಖಂಡರುಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.
Honoring the new Nagar Sabha nominee members in the city MLA’s office