ಚಿಕ್ಕಮಗಳೂರು: ಸಮಾಜದಲ್ಲಿ ಜಾತ್ಯಾತೀತವಾಗಿ ಸಹಾಯಹಸ್ತ ಕಲ್ಪಿಸಿರುವ ಸಿ. ಎನ್. ಅಕ್ಮಲ್ಗೆ ಈ ಬಾರಿ ಸಿಡಿಎ ಅಧ್ಯಕ್ಷ ಸ್ಥಾನ ಒದಗಿಸಿಕೊಡಬೇಕು ಎಂದು ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮುಸ್ಲೀಂ ಮುಖಂಡರುಗಳು ಶಾಸಕ ಹೆಚ್.ಡಿ.ತಮ್ಮಯ್ಯ ಅವರನ್ನು ಭಾನುವಾರ ಸಂಜೆ ಒತ್ತಾಯಿಸಿದರು.
ಕಾಂಗ್ರೆಸ್ ಪಕ್ಷದಲ್ಲಿ ನಿರಂತರ ಚಟುವಟಿಕೆಯಲ್ಲಿ ತೊಡಗಿ ಪಕ್ಷದ ಬೆನ್ನೆಲುಬಾಗಿ ಅಕ್ಮಲ್ ನಿಂತಿದ್ದಾರೆ. ಹಿಂದಿನ ಬಿಜೆಪಿ ಸರ್ಕಾರದಲ್ಲಿ ಹಲವಾರು ಪ್ರತಿಭಟನೆ, ಧರಣಿ ಸೇರಿದಂತೆ ಸಭೆ ಸಮಾರಂಭಗಳಲ್ಲಿ ಭಾಗಿ ಯಾಗಿ ಪಕ್ಷಕ್ಕಾಗಿ ದುಡಿದಿರುವ ಅವರಿಗೆ ನ್ಯಾಯಸಮ್ಮತವಾಗಿ ಸ್ಥಾನ ಕಲ್ಪಿಸುವುದು ಸೂಕ್ತ ಎಂದರು.
ಈ ವೇಳೆ ಮಾತನಾಡಿದ ಕಾಂಗ್ರೆಸ್ ಹಿರಿಯ ಮುಖಂಡ ಫಯಾಜ್ ನಗರ ಸೇರಿದಂತೆ ಜಿಲ್ಲೆಯಾ ದ್ಯಂತ ಸಾಮಾಜಿಕ ಕಳಕಳಿ ಮೂಡಿಸಿರುವ ಅಕ್ಮಲ್ ಕೊರೋನಾ ಸಂಕಷ್ಟದಲ್ಲಿ ಬದುಕನ್ನೆ ಕಳೆದುಕೊಂಡಿದ್ದ ನಿವಾಸಿಗಳಿಗೆ ಒಂದೇ ಧರ್ಮಕ್ಕೆ ಸೀಮಿತರಾಗದೇ ಪ್ರತಿ ಧರ್ಮವನ್ನು ತಮ್ಮದೆಂದು ಭಾವಿಸಿ ಹಲವಾರು ಸವ ಲತ್ತುಗಳನ್ನು ಒದಗಿಸಿದ್ದಾರೆ ಎಂದು ತಿಳಿಸಿದರು.
ಸಿ.ಎನ್.ಅಕ್ಮಲ್ ಸೇರಿದಂತೆ ಕುಟುಂಬವೇ ಕಾಂಗ್ರೆಸ್ ಪಕ್ಷಕ್ಕಾಗಿ ದುಡಿದಿದೆ. ಪ್ರಸ್ತುತ ಕೆಲವು ಕುಟು ಂಬದವರು ನಗರಸಭಾ ಸದಸ್ಯರಾಗಿದ್ದಾರೆ. ಹೀಗಾಗಿ ಇಷ್ಟೆಲ್ಲಾ ಪಕ್ಷ ಸಂಘಟಿಸುವಲ್ಲಿ ಶ್ರಮಿಸಿರುವ ಅವರಿಗೆ ಸಿಡಿಎ ಸ್ಥಾನ ಕಲ್ಪಿಸಿದರೆ ದಲಿತರು, ಮುಸ್ಲೀಂ ಹಾಗೂ ಹಿಂದುಳಿದ ವರ್ಗಕ್ಕೆ ಸಮಪರ್ಕವಾಗಿ ಕಾರ್ಯ ನಿರ್ವಹಿಸಲು ಶಕ್ತಿ ತುಂಬಿದಂತಾಗುತ್ತದೆ ಎಂದು ಹೇಳಿದರು.
ತುರ್ತು ಸಂದರ್ಭದಲ್ಲಿ ನಿವಾಸಿಗಳಿಗೆ ಉಚಿತವಾಗಿ ಅಂಬುಲೆನ್ಸ್ ಸೇವೆಯನ್ನು ಒದಗಿಸಿ ಮಾನವೀ ಯತೆ ಮೆರೆದಿರುವ ಅಕ್ಮಲ್ಗೆ ಶಾಸಕರು ಸ್ವಪ್ರಯತ್ನದಿಂದ ಅವಕಾಶ ಮಾಡಿಕೊಡಬೇಕು ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು ಈಗಾಗಲೇ ಅಕ್ಮಲ್ ಸೇರಿದಂತೆ ಅನೇಕರ ಅರ್ಜಿಗಳನ್ನು ತಮ್ಮ ಮಟ್ಟದಿಂದ ರಾಜ್ಯ ಮಟ್ಟಕ್ಕೆ ಕಳಿಸಲಾಗಿದ್ದು ಅಂತಿಮವಾಗಿ ರಾಜ್ಯ ನಾಯಕರುಗಳು ತೀರ್ಮಾನ ಕೈಗೊಳ್ಳಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಮುಖಂಡರುಗಳಾದ ಇರ್ಪಾಣ್, ಸಾದಿಕ್, ಮಹ್ಮದ್, ರಿಜ್ವಾನ್, ರಫೀಖ್, ನಾ ಜೀಬ್, ನಹೀಮ್, ಮಸೀದಿ ಗುರುಗಳು ಮತ್ತಿತರರು ಹಾಜರಿದ್ದರು.
Activists demand to give CDA seat to Akmal