ಚಿಕ್ಕಮಗಳೂರು: – ಅಧಿಕಾರಿಗಳ ಬೇಜವಾಬ್ದಾರಿತನದಿಂದ ರೈತರು ಫಸಲ್ ಭೀಮಾ ಯೋಜನೆಯ ವಿಮಾಹಣದಿಂದ ವಂಚಿತರಾಗಿದ್ದು, ಜಿಲ್ಲಾಡಳಿತ ತಪ್ಪಿತಸ್ಥ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳದಿದ್ದರೆ ರೈತ ಸಂಘಟನೆಗಳೋಂದು ಉಗ್ರ ಪ್ರತಿಭಟನೆ ನಡೆಸುವುದಾಗಿ ಕೆ.ಬಸವನಹಳ್ಳಿ ಗ್ರಾಮದ ಸಂತ್ರಸ್ಥ ರೈತ ಲಿಂಗದೇವರು ತಿಳಿಸಿದರು.
ನಗರದಲ್ಲಿಂದು ಕರೆದಿದ್ದಸುದ್ದಿಗೊಷ್ಟಿಯಲ್ಲಿ ಮಾತನಾಡಿದ ಅವರು ಕಡೂರು ತಾಲ್ಲೋಕು ಅಣ್ಣಗೆರೆ ಮತ್ತು ಯಗಟಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ೨೫೦ಕ್ಕೂ ಹೆಚ್ಚು ರೈತರು ತಾವು ಬೆಳೆದಿದ್ದ ರಾಗಿ ಬೆಳೆಗೆ ಪ್ರಧಾನ ಮಂತ್ರಿ ಫಸಲ್ ಭೀಮಾಯೋಜನೆಯಡಿ ವಿಮಾಕಂತನ್ನು ಪಾವತಿಸಿ ನೊಂದಾಯಿಸಿಕೊಂಡಿದ್ದರು.
ಕಡೂರು ತಾಲ್ಲೋಕನ್ನು೨೦೨೩-೨೪ನೇ ಸಾಲಿನಲ್ಲಿ ತೀವ್ರ ಬರಗಾಲ ಪ್ರದೇಶ ಎಂದು ಘೋಷಿಸಿದ್ದರೂ ಸ್ಥಳೀಯ ಅಧಿಕಾರಿಗಳು ಪ್ರತಿ ಭಾರಿಗಿಂತ ಈಬಾರಿ ಎರಡುಪಟ್ಟು ಹೆಚ್ಚು ಬೆಳೆಯಾಗಿದೆ ಎಂದು ವರದಿ ನೀಡಿರುವ ಕಾರಣ ರೈತರು ಬೆಂಕಿಯಿಂದ ಬಾಣಲೆಗೆ ಬಿದ್ದಂತಾಗಿದೆ ಎಂದರು.
ಫಸಲ್ ಭೀಮಾಯೋಜನೆಯಡಿ ರೈತರಿಗೆ ಬರಬೇಕಾದ ವಿಮಾಹಣ ಬಾರದೇ ಲಕ್ಷಗಟ್ಟಲೇ ಹಣ ಪಾವತಿಸಿದ ರೈತರಗೊಳು ಕೇಳುವವರಿಲ್ಲಂದಾಗಿದೆ. ಜಿಲ್ಲಾಡಳಿತ ಕೂಡಲೇ ತಪ್ಪಿತಸ್ಥ ಅಧಿಕಾರಿಗಳನ್ನು ಮೊಕದಮೆ ದಾಖಲಿಸಿ ನಷ್ಟಕ್ಕೆ ಕಾರಣರಾದ ಅಧಿಕಾರಿಗಳಿಂದಲೇ ಹಣ ವಸೂಲಿ ಮಾಡಿ ಸಂತ್ರಸ್ಥ ರೈತರಿಗೆ ನೀಡುವಂತೆ ಒತ್ತಾಯಿಸಿದರು.
ಈ ಗೋಷ್ಟಿಯಲ್ಲಿ ಸಂತ್ರಸ್ಥ ರೈತರಾದ ರವಿಕುಮಾರ್ ,ರಘೂ ,ಶಶಿಧರ್ ಇದ್ದರು.
Fierce protest if the district administration does not take action against the guilty officials