ಚಿಕ್ಕಮಗಳೂರು: ಬೋವಿ ಜನಾಂಗ ನಿಂತ ನೀರಾಗದೇ ಚೇತನ್ಯಶೀಲ, ಸಂಚಲನಶೀಲ ಹಾಗೂ ಹಕ್ಕಿಗಾಗಿ ಧ್ವನಿಗೂಡಿಸಲು ಒಗ್ಗಟ್ಟಿನಿಂದ ಮುಂದಾದರೆ ಮಾತ್ರ ಸಮುದಾಯವನ್ನು ಸರ್ಕಾರ ಗುರು ತಿಸಿ ಆರ್ಥಿಕ ಅಭಿವೃದ್ದಿಗೆ ಶ್ರಮಿಸಲಿದೆ ಎಂದು ಭೋವಿಗುರುಪೀಠಧ್ಯಕ್ಷ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ತಿಳಿಸಿದರು.
ಜಿಲ್ಲಾ ಭೋವಿ ಸಮಾಜ ವತಿಯಿಂದ ಏರ್ಪಡಿಸಿದ್ಧ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿಯ ವರ ದೀಕ್ಷಾ ರಜತ ಮಹೋತ್ಸವದ ಅಂಗವಾಗಿ ಜಿಲ್ಲಾ ಮಟ್ಟದ ಪೂರ್ವಭಾವಿ ಸಭೆಯನ್ನು ಕಡೂರು ಪಟ್ಟ ಣದ ಸುರುಚಿ ಸಭಾಂಗಣದಲ್ಲಿ ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಬೆರಳಣಿಕೆಯಷ್ಟು ಮಂದಿ ಸಮಾಜದ ಮುಂಚೂಣಿಗೆ ಧಾವಿಸುತ್ತಿರುವುದು ಗಮನಿಸುತ್ತಿದ್ದೇವೆ. ಆದರೆ ಬಹುತೇಕರು ಇಂದಿಗೂ ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ಮಠ ಸ್ಥಾಪಿಸುವ ಉದ್ದೇಶವೆಂದರೆ ಕೇವಲ ಪೂಜೆಯ ಕಾಯಕವಲ್ಲ, ಕಾಯಕದ ಜೊತೆಗೆ ಸಮಾಜದ ಏಳಿ ಗೆಗೆ ಶ್ರಮಿಸುವುದು ಮುಖ್ಯವಾಗಬೇಕು ಎಂದು ತಿಳಿಸಿದರು.
ಬೋವಿ ಸಮಾಜ ಕಡೆಗಣಿಸಿದರೆ ಸರ್ಕಾರ ರಚಿಸುವುದು ಕಷ್ಟವೆನಿಸಬೇಕೆಂಬ ರೀತಿಯಲ್ಲಿ ಜನಾಂಗ ಬೆಳವಣಿಗೆ ಹೊಂದಬೇಕು. ಆ ನಿಟ್ಟಿನಲ್ಲಿ ಸಮಾಜ ಬಾಂಧವರು ಮಠದ ಜೊತೆಗೂಡಿ ಹಕ್ಕಿಗಾಗಿ ಹೋರಾಟ ನಡೆಸಿ ಜನಾಂಗದ ಶಕ್ತಿ ಪ್ರದರ್ಶನ ತೋರಬೇಕಿದೆ ಎಂದು ಹೇಳಿದರು.
ಹಲವಾರು ದಶಕಗಳಿಂದ ಸಮುದಾಯ ಸಾಮಾಜಿಕ ಹಾಗೂ ಆರ್ಥಿಕ ಬೆಳವಣಿಗೆಯಿಂದ ದೂರ ಉಳಿದಿದೆ. ರಾಜ್ಯದಲ್ಲೇ ಬಹಳಷ್ಟು ಸಂಖ್ಯೆಯಲ್ಲಿ ಜನಾಂಗವು ಹಿನ್ನೆಡೆ ಹೊಂದಿರುವುದು ಬೇಸರ ಸಂಗತಿ. ಹೀಗಾಗಿ ವಿವಿಧ ತಾಲ್ಲೂಕುಗಳಲ್ಲಿ ಜನಾಂಗದವರನ್ನು ಗುರುತಿಸಿ ತಾವು ಸೇರಿದಂತೆ ಸಮಾಜದ ಮುಖ ಂಡರುಗಳು ಭೇಟಿ ನೀಡಿ ರಜತ ಮಹೋತ್ಸವಕ್ಕೆ ಆಹ್ವಾನಿಸಲಾಗುತ್ತಿದೆ ಎಂದರು.
ಸದ್ಯದಲ್ಲೇ ತಾಲ್ಲೂಕುವಾರ ರಜತ ಮಹೋತ್ಸವದ ರಥಯಾತ್ರೆ ವಾಹನವು ಪಾದರ್ಪಣೆ ಮಾಡ ಲಿದೆ. ಸ್ಥಳೀಯ ಮುಖಂಡರುಗಳಿಗೆ ಅದ್ದೂರಿಯಾಗಿ ರಥವನ್ನು ಸ್ವಾಗತಿಸಿ ಬೋವಿ ಜನಾಂಗವಿರುವ ಗ್ರಾಮ ಗಳಲ್ಲಿ ಸಂಚರಿಸಲು ಸಹಕರಿಸಬೇಕು. ದೀಕ್ಷಾ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಕರೆ ತರಲು ಮುಂದಾಗ ಬೇಕು ಎಂದು ತಿಳಿಸಿದರು.
ಭೋವಿ ಅಭಿವೃದ್ದಿ ನಿಗಮದ ಅಧ್ಯಕ್ಷ ಎಸ್.ರವಿಕುಮಾರ್ ಮಾತನಾಡಿ ಸಮುದಾಯದ ಉಳಿವಿಗಾ ಗಿ ಜುಲೈ ೨೦ ರಂದು ಸ್ವಾಮೀಜಿಯವರ ನೇತೃತ್ವದಲ್ಲಿ ಜನಾಂಗವನ್ನು ಒಂದುಗೂಡಿಸಲು ರಜತ ಮಹೋ ತ್ಸವ ಕಾರ್ಯ ಹಮ್ಮಿಕೊಂಡಿದೆ. ಇಂದಿಗೂ ಜನಾಂಗದ ಬಹುತೇಕರಿಗೆ ಜನಪ್ರತಿನಿಧಿಗಳು, ಅಧಿಕಾರಿಗಳ ಪರಿಚಯವಿಲ್ಲದ ಕಾರಣ ಜನಾಂಗವನ್ನು ಬಲಿಷ್ಟಗೊಳಿಸುವ ಈ ಮಹೋತ್ಸವ ಸಹಕಾರಿ ಎಂದರು.
ಬೆರಳಣಿಕೆಯಷ್ಟು ಮಂದಿ ಮಾತ್ರ ಸರ್ಕಾರಿ ಹಾಗೂ ರಾಜಕೀಯ ಕ್ಷೇತ್ರದಲ್ಲಿ ದಾಪುಗಾಲುಹಿಟ್ಟಿದ್ದಾರೆ. ಶೇ.೮೦ ಮಂದಿ ಅರಿವಿಲ್ಲದಂತೆ ಬದುಕುತ್ತಿದ್ದು, ಇವರನ್ನು ಸಮಾಜದ ಮುಂಚೂಣಿಗೆ ತರಬೇಕೆಂಬ ಆಶ ಯವಿದೆ. ಹೀಗಾಗಿ ಸ್ವಾಮೀಜಿಯರಿಗೆ ಶಕ್ತಿ ತುಂಬುವ ಕೆಲಸವನ್ನು ಆರ್ಥಿಕ ಸದೃಢವಾಗಿರುವ ಸಮುದಾ ಯದ ಮುಖಂಡರು ಮಾಡಬೇಕಿದೆ ಎಂದು ತಿಳಿಸಿದರು.
ನಾಡಿನಲ್ಲಿ ಹಲವಾರು ಜಾತಿ-ಜನಾಂಗಗಳ ಮಠವು ಬಹಳಷ್ಟು ಬಲಶಾಲಿಯಾಗಿದೆ. ಆ ಸಾಲಿನಲ್ಲಿ ಭೋವಿ ಜನಾಂಗದ ಮಠವು ಹೆಜ್ಜೆ ಹಾಕಬೇಕೆಂಬುದು ಜನಾಂಗದ ಅಭಿಪ್ರಾಯವಾಗಿದೆ ಎಂದ ಅವರು ಭೋವಿ ಸಮುದಾಯದಿಂದ ಪಡೆದಂತಹ ಸೌಲಭ್ಯಗಳಿಂದ ಕಿಂಚಿತ್ತಾದರೂ ಮಠಕ್ಕೆ ಸಮರ್ಪಿಸಿದರೆ ಅಗ್ರ ಗಣ್ಯ ಸ್ಥಾನದಲ್ಲಿ ಪೀಠವು ಬೆಳೆಯಲಿದೆ ಎಂದರು.
ಜಿಲ್ಲಾ ಬೋವಿ ಸಮಾಜದ ಅಧ್ಯಕ್ಷ ಕೊಲ್ಲಾಭೋವಿ ಮಾತನಾಡಿ ಬೃಹತ್ ಮಟ್ಟದಿಂದ ಚಿತ್ರದುರ್ಗ ಜಿಲ್ಲೆಯಲ್ಲಿ ಜುಲೈ ೨೦ ರಂದು ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿಯವರ ದೀಕ್ಷಾ ರಜತ ಮಹೋತ್ಸವ ಕಾರ್ಯಕ್ರಮ ನಡೆಯಲಿದ್ದು ಸಾಗರೋಪಾದಿಯಲ್ಲಿ ಭೋವಿ ಸಮಾಜ ಕುಟುಂಬ ಸಮೇತ ಆಗಮಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಭೋವಿ ಸಮಾಜದ ಉಪಾಧ್ಯಕ್ಷ ದಾಸಭೋವಿ, ಕಾರ್ಯದರ್ಶಿ ಮಂಜು ನಾಥ್, ಖಜಾಂಚಿ ಪರಮೇಶ್, ಕಡೂರು ಅಧ್ಯಕ್ಷ ನಾಗರಾಜ್, ಅಜ್ಜಂಪುರ ಅಧ್ಯಕ್ಷ ರುದ್ರೇಶ್, ಜಿ.ಪಂ. ಮಾಜಿ ಸದಸ್ಯ ಶೃಂಗೇರಿ ಶಿವಣ್ಣ, ಮುಖಂಡರುಗಳಾದ ಹೇಮಣ್ಣ, ಶಾಂತಕುಮಾರ್, ಷಣ್ಮುಖಭೋವಿ, ತಿಪ್ಪೇಶ್, ಮಧುಚನ್ನವೀರ ಮತ್ತಿತರರು ಉಪಸ್ಥಿತರಿದ್ದರು.
District Level Preliminary Meeting by Zilla Bhovi Samaj