ಚಿಕ್ಕಮಗಳೂರು: ವಿದ್ಯಾರ್ಥಿಗಳು ಚಿಕ್ಕಂದಿನಿಂದಲೇ ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳುವ ಮೂಲಕ ಸಮಾಜದಲ್ಲಿ ಮುಂದೆ ವಿವಿಧ ಕ್ಷೇತ್ರಗಳಲ್ಲಿ ನಾಯಕರಾಗುವ ಅವಕಾಶಕ್ಕೆ ಸಹಕಾರಿಯಾಗಲಿದೆ ಎಂದು ಜಿಲ್ಲಾ ಒಕ್ಕಲಿಗರ ಸಂಘದ ಕಾರ್ಯದರ್ಶಿ ಎಂ.ಸಿ ಪ್ರಕಾಶ್ ಕರೆ ನೀಡಿದರು.
ಅವರು ಜೆವಿಎಸ್ ಶಾಲೆಯಲ್ಲಿ ಏರ್ಪಡಿಸಿದ ವಿದ್ಯಾರ್ಥಿಗಳ ಪರಿಷತ್ತಿನ ಪದಗ್ರಹಣ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ಪ್ರಜೆಗಳಿಂದ ಪ್ರಜೆಗಳಾಗಿ ಪ್ರಜೆಗಳಿಗೋಸ್ಕರ ನಡೆಸುವ ಆಡಳಿತ ವ್ಯವಸ್ಥೆಗೆ ಪ್ರಜಾಪ್ರಭುತ್ವ ಎಂದು ಕರೆಯುತ್ತೇವೆ. ಇದು ರಾಜಕೀಯ ವ್ಯವಸ್ಥೆ ಆಗಿದೆ. ಈ ನಿಟ್ಟಿನಲ್ಲಿ ಮಕ್ಕಳಿಂದ ಮಕ್ಕಳಿಗೋಸ್ಕರ ಮಕ್ಕಳಿಗಾಗಿ ನಡೆಸುವುದೇ ಸಂಘಟನೆ ಎಂದರು.
ಮುಂದೆ ನಮ್ಮ ರಾಜಕೀಯ ವ್ಯವಸ್ಥೆ ಹೇಗೆ ಇರಬೇಕೆಂಬ ಬಗ್ಗೆ ವಿದ್ಯಾರ್ಥಿಗಳಿಗೆ ಒಂದು ಪೂರಕವಾಗಿ ಅಡಿಪಾಯವನ್ನು ಹಾಕಲಾಗಿದೆ. ೧೮ ವ? ತುಂಬಿದ ಎಲ್ಲರಿಗೂ ಮತದಾನದ ಹಕ್ಕು ಬರುತ್ತದೆ ಇದು ಜಗತ್ತಿನ ಪ್ರತಿಷ್ಠಿತ ಮತದಾನದ ಹಕ್ಕು ಎಂದು ಹೇಳಿದರು.
ಯಾವ ವ್ಯಕ್ತಿಯನ್ನು ದೇಶದ ಪ್ರಧಾನಿ ಮತ್ತು ರಾಜ್ಯದಲ್ಲಿ ಮುಖ್ಯಮಂತ್ರಿ ಮಾಡಬೇಕೆಂಬುದನ್ನು ಮತದಾನದ ಹಕ್ಕು ನಿರ್ಧರಿಸುತ್ತದೆ, ವ್ಯವಸ್ಥೆ ಸರಿಯಾಗಿ ಇರಬೇಕಾದರೆ ನಿಮ್ಮ ಆಲೋಚನೆ ಸರಿಯಾದ ಅರ್ಹತೆ ಇರುವ ವ್ಯಕ್ತಿಯನ್ನು ಆಯ್ಕೆ ಮಾಡಿದಾಗ ಆ ವ್ಯಕ್ತಿ ಅಧಿಕಾರಕ್ಕೆ ಬಂದು ಸುಗಮ ಆಡಳಿತ ನಡೆಸುತ್ತಾರೆ ಎಂದರು.
ಇಂದು ಜಾತಿ, ಹಣ, ಹೆಂಡ ಇನ್ನು ಅನೇಕ ಕಾರಣಗಳಿಂದಾಗಿ ಮತದಾನದ ಹಕ್ಕು ಆತ್ಮಸಾಕ್ಷಿಗೆ ವಿರುದ್ಧವಾಗಿ ಚಲಾವಣೆ ಮಾಡುತ್ತಿರುವುದು ದೇಶದ ದುರಂತ ಎಂದು ವಿ?ಧಿಸಿದರು.
ಭವಿ?ದ ಕಲ್ಪನೆಯ ಆರ್ಥಿಕ ಸುಭದ್ರತೆ ರಾಷ್ಟ್ರೀಯ ಭದ್ರತೆಗೆ ಹೆಚ್ಚು ಪ್ರಾಮುಖ್ಯತೆ ಕೊಡುತ್ತಿರುವುದರಿಂದ ಈ ದೇಶ ಒಳ್ಳೆಯ ದಿಕ್ಕಿನಡೆಗೆ ಸಾಗುತ್ತಿದೆ. ಯಾವ ದೇಶದಲ್ಲಿ ಸುಶಿಕ್ಷಿತರು, ವಿದ್ಯಾವಂತರು ಶೇ.೯೦ರ? ಮತದಾನ ಮಾಡುವ ದೇಶಗಳು ಪ್ರಪಂಚದಲ್ಲೇ ಅತ್ಯುನ್ನತ ಸ್ಥಾನದಲ್ಲಿವೆ ಎಂದು ಹೇಳಿದರು.
ಸಂಘಟಿತ-ಅಸಂಘಟಿತ ವಲಯ ಇದ್ದು, ಸಂಘಟಿತ ಜೀವಿಗಳಾಗಿ ಬದುಕುತ್ತಿರುವುದರಿಂದ ಸಮಾಜದಲ್ಲಿ ಚೌಕಟ್ಟು ಇತಿ-ಮಿತಿಗಳನ್ನು, ಕಾನೂನುಗಳನ್ನು ರೂಪಿಸಿ ಅದರೊಳಗೆ ಬದುಕಲು ಅದಕ್ಕೆ ಒಬ್ಬ ನಾಯಕ ಇರಬೇಕೆನ್ನುವುದು ಒಂದು ಪ್ರಕ್ರಿಯೆ ಆಗಿದೆ ಎಂದು ವಿಶ್ಲೇಷಿಸಿದರು.
ಮತದಾರರ ಬೇಡಿಕೆಗಳನ್ನು ಈಡೇರಿಸಲು ನಾಯಕನಾದವನು ಶಕ್ತಿ ಮೀರಿ ಶ್ರಮಿಸುತ್ತಾನೆ, ಎಲ್ಲರ ಸೌಖ್ಯವನ್ನು ಬಯಸುವವರು ನಿಜವಾದ ನಾಯಕನಾಗಿ ಬೆಳೆಯಲು ಸಾಧ್ಯ, ಆಗ ಜನಮನ್ನಣೆಗೆ ಪಾತ್ರರಾಗುತ್ತಾರೆ ಎಂದು ತಿಳಿಸಿದರು.
ವಿದ್ಯಾರ್ಥಿಗಳ ಮುಂದಿನ ಭವಿ? ಭಾರತ ದೇಶದಲ್ಲಿ ಹೆಚ್ಚು ಸಕ್ರಿಯರಾಗಬೇಕು, ರಾಜಕೀಯ ಹೊರತಾಗಿ ಯಾವುದೇ ದೇಶಕ್ಕೆ ಭವಿ? ಇಲ್ಲ, ಆರ್ಥಿಕ ವ್ಯವಸ್ಥೆ ಮುಂದಾಲೋಚನೆ ಆಗಿದ್ದು ಅದಕ್ಕಾಗಿ ಶಾಲೆ ಹಂತದಲ್ಲೇ ಈ ಎಲ್ಲಾ ವ್ಯವಸ್ಥೆಗಳ ಬಗ್ಗೆ ಬೆಳಕು ಚೆಲ್ಲುವ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಸಂಘದ ಜಂಟಿ ಕಾರ್ಯದರ್ಶಿ ಕೆ.ಕೆ ಮನುಕುಮಾರ್ ಮಾತನಾಡಿ, ವಿದ್ಯಾರ್ಥಿಗಳಿಗೆ ಪ್ರಕೃತಿ-ಪರಿಸರದ ಬಗ್ಗೆ ತಿಳುವಳಿಕೆ ಮೂಡಿಸಲು ಒಂದು ಒಳ್ಳೆಯ ಅವಕಾಶವಾಗಿದ್ದು, ಜಿಲ್ಲೆಯ ತಾಲೂಕು ಮಟ್ಟದ ಸ್ಪರ್ಧೆಗಳಿಗೆ ಭಾಗವಹಿಸಲು ಕ್ರೀಡಾಪಟುಗಳ ಆಯ್ಕೆ ಮಾಡಲಾಗುವುದು ಎಂದರು.
ಜುಲೈ ೧೯ರಂದು ಜೆವಿಎಸ್ ಶಾಲೆಯಲ್ಲಿ ಅಕ್ಷರಾಭ್ಯಾಸ ಕಾರ್ಯಕ್ರಮ ಆಯೋಜಿಸಲಾಗಿದೆ. ಜೊತೆಗೆ ಮಕ್ಕಳ ದಸರಾ ಕಾರ್ಯಕ್ರಮ ಇದ್ದು, ಶಾಲಾ ವಾರ್ಷಿಕೋತ್ಸವ ಪರೀಕ್ಷೆಗಳನ್ನು ಎದುರಿಸಲು ಸನ್ನದ್ದರಾಗುವಂತೆ ಕರೆ ನೀಡಿದರು.
ಶಾಲಾ ಮುಖ್ಯ ಶಿಕ್ಷಕ ಕೆ.ಸಿ ವಿಜಿತ್ ಮಾತನಾಡಿ ಪ್ರಜಾಪ್ರಭುತ್ವ ವ್ಯವಸ್ಥೆಯ ಮಹತ್ವದ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಿದರು.ಇದೇ ಸಂದರ್ಭದಲ್ಲಿ ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಆಯ್ಕೆಯಾದ ಪದಾಧಿಕಾರಿಗಳಿಗೆ ಬ್ಯಾಡ್ಜ್ ನೀಡಿ ಗೌರವಿಸಲಾಯಿತು. ವೇದಿಕೆಯಲ್ಲಿ ಸಿಇಓ ಕುಳ್ಳೇಗೌಡ, ವ್ಯವಸ್ಥಾಪಕರಾದ ತೇಜಸ್ ಮತ್ತಿತರರು ಭಾಗವಹಿಸಿದ್ದರು. ಮತ್ತಿತರರಿದ್ದರು. ವಿದ್ಯಾರ್ಥಿನಿ ಮೋನಿಕಾ ಸ್ವಾಗತಿಸಿ, ದಿವ್ಯ ಕೊನೆಯಲ್ಲಿ ವಂದಿಸಿದರು.
Inauguration Ceremony of Students Council organized at JVS School