ಚಿಕ್ಕಮಗಳೂರು: ತರ ಜಮೀನನ್ನು ಸುಭದ್ರವಾಗಿ ರಕ್ಷಣೆ ಮಾಡುವ ಉದ್ದೇಶದಿಂದ ಪ್ರತೀ ಪಹಣಿಗೆ ಆಧಾರ್ ಲಿಂಕ್ ಮಾಡುವ ಭೂ ಸುರಕ್ಷಾ ಎಂಬ ಹೊಸ ಯೋಜನೆಯನ್ನು ಕಂದಾಯ ಇಲಾಖೆ ಜಾರಿಗೊಳಿಸುತ್ತಿದೆ ಎಂದು ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಜೇಂದ್ರಕುಮಾರ್ ಕಟಾರಿಯಾ ಅವರು ತಿಳಿಸಿದರು.
ಅವರು ಇಂದು ಕೆಡಿಪಿ ಸಭೆಯಲ್ಲಿ ಭಾಗವಹಿಸಿದ್ದ ಸಂದರ್ಭದಲ್ಲಿ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರಿಗೆ ಈ ವಿ?ಯ ತಿಳಿಸಿ ರಾಜ್ಯದಲ್ಲಿ ೪೦.೩೦ ಲಕ್ಷ ಪಹಣಿಗಳಿದ್ದು ಹೆಸರುಗಳ ಗೊಂದಲ ವಿಭಾಗ, ಕ್ರಯಾ, ವಿಕ್ರಯಗಳಿಗೆ ಉಂಟಾಗುತ್ತಿರುವ ಗೊಂದಲ ಹಾಗೂ ಅಕ್ರಮ ಭೂ ವ್ಯವಹಾರವನ್ನು ತಡೆಗಟ್ಟುವ ಉದ್ದೇಶದಿಂದ ಪಹಣಿ ದಾಖಲೆಗೆ ನಿರ್ದಿಷ್ಟ ತಂತ್ರಾಂಶ ಅಳವಡಿಸಿ ಆಧಾರ್ ಜೋಡಣೆ ಮಾಡುವುದರಿಂದ ಜಮೀನುಗಳ ಮೇಲಿನ ವ್ಯವಹಾರಗಳಿಗೆ ಅನುಕೂಲವಾಗುತ್ತದೆ ಎಂದರು.
ರಾಜ್ಯಾದ್ಯಂತ ಈ ಕಾರ್ಯಕ್ರಮ ಜಾರಿಯಲ್ಲಿದ್ದು, ಈಗಾಗಲೇ ಶೇ. ೫೦ರ? ಪಹಣಿಗಳಿಗೆ ಆಧಾರ್ ಸಂಖ್ಯೆ ಜೋಡಣೆ ಆಗಿದ್ದು, ಇನ್ನೂ ಶೇಕಡ ೫೦ರ? ಬಾಕಿ ಇದ್ದು, ಬೆಳೆ ವಿಮೆ, ಸಾಲಸೌಲಭ್ಯ, ರೈತರಿಗೆ ಸರ್ಕಾರದ ಸೌಲಭ್ಯ ಪಡೆಯಲು ಇದರಿಂದ ಅನುಕೂಲವಾಗಲಿದೆ ಎಂದು ಹೇಳಿದರು.
ಸರ್ಕಾರಿ ಜಮೀನನ್ನು ಗುರುತಿಸಿ ರಕ್ಷಿಸುವ ಉದ್ದೇಶದಿಂದ ಲ್ಯಾಂಡ್ ಬಿಟ್ ಎಂಬ ತಂತ್ರಾಂಶವನ್ನು ಸಿದ್ಧಪಡಿಸಿದ್ದು, ಉಪಗ್ರಹ ಆಧಾರಿತ ಈ ಆಪ್ ಮೂಲಕ ಸರ್ಕಾರಿ ಜಮೀನುಗಳ ಪೂರ್ಣ ವಿವರ ಸಂಗ್ರಹಿಸಿ ಭೂಮಿ ತಂತ್ರಾಂಶಕ್ಕೆ ಸಂಯೋಜಿಸಲಾಗಿದೆ.
ಇದರಿಂದ ಸರ್ಕಾರಿ ಭೂಮಿಯನ್ನು ಗುರುತಿಸಿಕೊಂಡು ಪ್ರತಿ ೩ ತಿಂಗಳಿಗೊಮ್ಮೆ ಗ್ರಾಮ ಲೆಕ್ಕಾಧಿಕಾರಿಗಳು ಹಾಗೂ ಕಂದಾಯ ನಿರೀಕ್ಷಕರು ಸ್ಥಳ ಪರಿಶೀಲನೆ ನಡೆಸಿ ಲ್ಯಾಂಡ್ ಭೀಟ್ ಅಪ್ಗೆ ಅಪ್ಲೋಡ್ ಮಾಡುವಂತೆ ಸೂಚಿಸಲಾಗಿದೆ. ಈ ಯೋಜನೆಯಿಂದ ಸರ್ಕಾರಿ ಭೂಮಿಯ ಸಂಪೂರ್ಣ ವಿವರ ವಿವಿಧ ಯೋಜನೆಗಳಲ್ಲಿ ಮಂಜೂರಾತಿಗೆ ಕೋರಿಕೊಂಡಿರುವ ಜಮೀನುಗಳ ಮಾಹಿತಿ ಲಭ್ಯವಾಗಲಿದ್ದು, ಅರ್ಹ ಫಲಾನುಭವಿಗಳಿಗೆ ಭೂಮಿ ಮಂಜೂರು ಮಾಡಲು ಹಾಗೂ ಸಾರ್ವಜನಿಕ ಉಪಯೋಗಗಳಿಗೆ ಜಮೀನುಗಳನ್ನು ಕಾಯ್ದಿರಿಸಲು ಅನುಕೂಲವಾಗಲಿದೆ ಎಂದರು.
ರಾಜ್ಯದಲ್ಲಿ ೧.೪೦ ಲಕ್ಷ ಸರ್ಕಾರಿ ಜಮೀನಿದ್ದು, ಅದರಲ್ಲಿ ೮೧ ಸಾವಿರ ಎಕರೆ ಜಮೀನು, ಖಾಸಗಿ ವ್ಯಕ್ತಿಗಳಿಂದ ಕಬಳಿಕೆ ಆಗಿದೆ. ಇಂತಹ ಜಮೀನುಗಳನ್ನು ವಶಪಡಿಸಿಕೊಂಡು ಸರ್ಕಾರದ ಸುಪರ್ದಿಗೆ ತೆಗೆದುಕೊಳ್ಳಲಾಗುವುದು. ಈ ಕಾರಣಕ್ಕಾಗಿ ಕಂದಾಯ ಇಲಾಖೆ, ಅರಣ್ಯ ಇಲಾಖೆ, ಇನ್ನಿತರ ಇಲಾಖೆಗಳ ಸ್ವಾದೀನದಲ್ಲಿರುವ ಜಮೀನುಗಳ ನಕ್ಷೆ ತಯಾರಿಸಿಕೊಡಲು ಸೂಚಿಸಲಾಗಿದೆ ಎಂದು ತಿಳಿಸಿದರು.
ಖಾಸಗಿಯವರಿಂದ ಕಬಳಿಕೆ ಆದ ಜಮೀನನ್ನು ವಶಪಡಿಸಿಕೊಂಡು ಬೇಲಿ ನಿರ್ಮಿಸಿ ಸುರಕ್ಷಿತವಾಗಿಟ್ಟುಕೊಳ್ಳಲು ಕರ್ನಾಟಕ ಭೂ ಸಂರಕ್ಷಣಾ ಕಾರ್ಪೊರೇ?ನ್ನಲ್ಲಿ ಹಣಕಾಸಿನ ಸೌಲಭ್ಯ ಇದ್ದು, ಬೆಲೆಬಾಳುವ ಜಮೀನುಗಳಿಗೆ ಬೇಲಿ ನಿರ್ಮಿಸಿ ಕಾಯ್ದಿರಿಸಲು ಅನುದಾನ ನೀಡಲಾಗುವುದು. ಅದೇ ರೀತಿ ಕೆರೆಗಳನ್ನು ಸಂರಕ್ಷಿಸಲು ಒತ್ತೂವರೆ ಆಗಿರುವ ಎಲ್ಲಾ ಕೆರೆಗಳ ಸಮೀಕ್ಷೆ ನಡೆಸಿ, ಕೆರೆ ಅಂಗಳದ ಸುತ್ತ ಗಿಡ ನೆಡುವ ಮೂಲಕ ಕೆರೆಗಳ ಗಡಿ ಗುರುತಿಸಿಕೊಳ್ಳಲು ಕ್ರಮ ಕೈಗೊಳ್ಳಲಾಗಿದೆ
A new scheme called Bhu Suraksha linking Aadhaar to Pahani