ಚಿಕ್ಕಮಗಳೂರು: ಇಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಅಧ್ಯಕ್ಷತೆಯಲ್ಲಿ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರ ನಡುವೆ ಖುರ್ಚಿ ಗಲಾಟೆ ನಡೆಯಿತು.
ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರನ್ನು ಸಮಾಧಾನ ಮಾಡಲು ಸಚಿವರು ಹೈರಾಣಾದರು.
ಉಸ್ತುವಾರಿ ಸಚಿವರು ಸಭೆಯಲ್ಲಿ ಆಸೀನರಾಗುತ್ತಿದ್ದಂತೆ ಶಾಸಕರು ವೇದಿಕೆ ಖುರ್ಚಿಯಲ್ಲಿ ಆಸೀನರಾದರು. ಈ ವೇಳೆ ಸಿ.ಟಿ.ರವಿ, ಹಾಗೂ ಎಸ್.ಎಲ್ ಭೋಜೇಗೌಡ ಈ ಹಿಂದಿನ ಎಲ್ಲಾ ಸಭೆಗಳಲ್ಲಿ ಶಾಸಕರು ಕೆಳಗಿನ ಆಸನಗಳಲ್ಲಿ ಕುಳಿತುಕೊಳ್ಳುವುದು ಸಂಪ್ರದಾಯ ಎಂದರು.
ಈ ವೇಳೆ ಕಡೂರು ಶಾಸಕ ಕೆ.ಎಸ್.ಆನಂದ್ ಶಾಸಕರ ಘನತೆ ಎತ್ತಿ ಹಿಡಿಯುವ ಉದ್ದೇಶದಿಂದ ಮೇಲೆ ಕುಳಿತುಕೊಳ್ಳಬೇಕು. ವಿಧಾನ ಪರಿ?ತ್ ಸದಸ್ಯರ ಸ್ಥಾನ ಸಾಂವಿಧಾನಿಕ ಹುದ್ದೆಯೇ ಅಲ್ಲ ಎನ್ನುತ್ತಿದ್ದಂತೆ ಸಿ.ಟಿ.ರವಿ ಮತ್ತು ಭೋಜೇಗೌಡ ಆಕ್ರೋಶ ವ್ಯಕ್ತಪಡಿಸಿದರು. ಕ್ಷಮೆ ಕೇಳಬೇಕೆಂದು ಆಗ್ರಹಿಸಿದರು.
ವೇದಿಕೆ ಮೇಲೆ ಕೂರಬೇಕೇ ಅಥವಾ ಕೆಳಗೆ ಕೂರಬೇಕೆ ಎನ್ನುವ ವಿಚಾರ ಸಭೆಯ ಅಧ್ಯಕ್ಷರ ವಿವೇಚನೆಗೆ ಬಿಟ್ಟಿದ್ದು ಎಂದು ಸಿಇಓ ಸಭೆಗೆ ಮಾಹಿತಿ ನೀಡಿದರು.
ಮಧ್ಯ ಪ್ರವೇಶಿಸಿದ ಕೆ.ಜೆ.ಜಾರ್ಜ್ ಈ ಗೊಂದಲಕ್ಕೆ ಸ್ಪ?ನೆ ಪಡೆದು ಮುಂದಿನ ಸಭೆಯಲ್ಲಿ ಅನುಸರಿಸಲಾಗುವುದು ಎಂದರು. ಸಿ.ಟಿ.ರವಿ ಮತ್ತು ಭೋಜೇಗೌಡ ವೇದಿಕೆ ಕೆಳಗಿನ ಖುರ್ಚಿಯಲ್ಲಿ ಕುಳಿತರು. ಗೊಂದಲದ ಸ್ಪ?ತೆ ಪಡೆದು ಮುಂದಿನ ಸಭೆಯಲ್ಲಿ ಅನುಸರಿಸೋಣ ಈಗ ವೇದಿಕೆಗೆ ಬನ್ನಿ ಎಂದು ಜಾರ್ಜ್ ಮತೆ ಮನವಿ ಮಾಡಿದರು. ಇದಕ್ಕೆ ಸಿ.ಟಿ.ರವಿ ಮತ್ತು ಭೋಜೇಗೌಡ ಕೆಳಗಿನ ಆಸನದಲ್ಲೇ ಕುಳಿತು ಸಭೆಯಲ್ಲಿ ಪಾಲ್ಗೊಂಡರು.
A scramble for a chair in the KDP meeting