ಚಿಕ್ಕಮಗಳೂರು: ಜಾತ್ಯಾತೀತ ನಿಲುವು ಒಳಗೊಂಡಿರುವ ಕಾಂಗ್ರೆಸ್ನಲ್ಲಿ ಪಕ್ಷನಿಷ್ಟೆ ಹಾ ಗೂ ಪ್ರಾಮಾಣಿಕವಾಗಿ ದುಡಿದಿರುವ ಕಾರ್ಯಕರ್ತರನ್ನು ಗುರುತಿಸಿ ಸ್ಥಾನಮಾನ ಕಲ್ಪಿಸಿರುವುದಕ್ಕೆ ಸಿಡಿಎ ನೂತನ ಪದಾಧಿಕಾರಿಗಳ ಆಯ್ಕೆಯೇ ನೈಜಸಾಕ್ಷಿ ಎಂದು ಶಾಸಕ ಹೆಚ್.ಡಿ.ತಮ್ಮಯ್ಯ ಹೇಳಿದರು.
ನಗರಾಭಿವೃದ್ದಿ ಪ್ರಾಧಿಕಾರದ ನೂತನ ಅಧ್ಯಕ್ಷ ಮಹಮ್ಮದ್ ನಯಾಜ್ ಹಾಗೂ ಸದಸ್ಯರುಗಳಾದ ರಾಘವೇಂದ್ರ, ಶ್ರದೀಪ್, ಗುಣವತಿ ಹಾಗೂ ಆಶಾರವರ ಪದಗ್ರಹಣ ಕಾರ್ಯಕ್ರಮದಲ್ಲಿ ಸೋಮವಾರ ಪಾಲ್ಗೊಂಡು ಅಭಿನಂದನೆ ಸಲ್ಲಿಸಿ ಅವರು ಮಾತನಾಡಿದರು.
ಕಾಂಗ್ರೆಸ್ ಹಿಂದಿನಿಂದಲೂ ಸರ್ವಜನಾಂಗ ಶ್ರೇಯೋಭಿವೃದ್ದಿ ಶ್ರಮಿಸುವ ಏಕೈಕ ಪಕ್ಷ. ಅದರಂತೆ ಸಿಡಿಎ ನೂತನ ಪದಾಧಿಕಾರಿಗಳನ್ನು ಸರ್ವಧರ್ಮ ಪ್ರಾರ್ಥನೆ ಮೂಲಕ ಅಧಿಕಾರದ ಗದ್ದುಗೆ ಕೂರಿಸಲಾ ಗಿದೆ. ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳ ಆದೇಶದಂತೆ ಸಿಕ್ಕಂತಹ ಅವಧಿಯಲ್ಲಿ ತಾರತಮ್ಯ ವೆಸಗದೇ ಸಮಾನತೆಯ ನ್ಯಾಯ ಒದಗಿಸಬೇಕು ಎಂದರು.
ನೂತನ ಅಧ್ಯಕ್ಷರು ಹಾಗೂ ಸದಸ್ಯರುಗಳು ಜವಾಬ್ದಾರಿ ಅರಿತು ಕಾರ್ಯನಿರ್ವಹಿಸುವ ಜೊತೆಗೆ ಯಾವುದೇ ಲೋಪವೆಸಗದಂತೆ ಚಿಕ್ಕಮಗಳೂರಿನ ಜನತೆಗೆ ಸವಲತ್ತು ಒದಗಿಸಬೇಕು. ಅಲ್ಲದೇ ಸಿಡಿಎ ಮಾ ಜಿ ಅಧ್ಯಕ್ಷರುಗಳ ಜಾತ್ಯಾತೀತ ನಿಲುವು, ಸಲಹೆ ಹಾಗೂ ಸಹಕಾರವನ್ನು ಪಡೆದು ಮುನ್ನೆಡೆಯಬೇಕು ಎಂದು ತಿಳಿಸಿದರು.
ಸಿಡಿಎ ಮೊಟ್ಟಮೊದಲ ಅವಧಿಗೆ ಅನೇಕ ಮುಖಂಡರುಗಳು ಆಕ್ಷಾಂಕಿಯಾಗಿದ್ದರು. ಆದರೆ ರಾಜ್ಯ ಮಟ್ಟದ ತೀರ್ಮಾನಕ್ಕೆ ನಾವುಗಳು ತಲೆಬಾಗಲೇಬೇಕು. ಹೀಗಾಗಿ ಮುಂದಿನ ಅವಧಿಯಲ್ಲಿ ಪಕ್ಷನಿಷ್ಟೆ ಹೊಂದಿ ರುವ ಮುಖಂಡರಿಗೆ ಖಂಡಿತ ಅವಕಾಶ ಕಲ್ಪಿಸಿಕೊಡಲಾಗುವುದು ಎಂದು ಭರವಸೆ ನೀಡಿದರು.
ನೂತನ ಅಧ್ಯಕ್ಷ ಮಹಮ್ಮದ್ ನಯಾಜ್ ಮಾತನಾಡಿ ಪಕ್ಷದಲ್ಲಿ ಅನೇಕ ವರ್ಷಗಳ ಸೇವೆಯನ್ನು ಪರಿಗಣಿಸಿ ಸಣ್ಣವಯಸ್ಸಿನಲ್ಲಿ ದೊಡ್ಡ ಜವಾಬ್ದಾರಿ ನೀಡಿದೆ. ಸಾಮಾಜಿಕ ಬದ್ಧತೆ, ಸದಸ್ಯರುಗಳು ಒಗ್ಗಟ್ಟಿನಿಂದ ಕ್ಷೇತ್ರದ ಜನತೆಗೆ ನ್ಯಾಯಸಮ್ಮತವಾಗಿ ಕರ್ತವ್ಯ ನಿರ್ವಹಿಸುತ್ತೇನೆ. ಅಲ್ಲದೇ ತಮ್ಮ ಆಯ್ಕೆಗೆ ಸಹಕರಿಸಿ ಮುಖ್ಯ ಮಂತ್ರಿಗಳು, ಉಸ್ತುವಾರಿ ಸಚಿವರು, ಶಾಸಕರು, ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ವಿಧಾನ ಪರಿಷತ್ ಮಾಜಿ ಸದಸ್ಯೆ ಗಾಯತ್ರಿ ಶಾಂತೇಗೌಡ ಮಾತನಾಡಿ ಅಧಿಕಾರದ ಆಸನ ಶಾಶ್ವ ತವಲ್ಲ, ಅವಧಿಯಲ್ಲಿ ಕೈಗೊಂಡಂತಹ ಅಭಿವೃದ್ದಿ ಕೆಲಸಗಳೇ ಶಾಶ್ವತ. ಈ ತತ್ವವನ್ನು ನೂತನ ಪದಾ ಧಿಕಾರಿಗಳು ಬದುಕಿನಲ್ಲಿ ಅಳವಡಿಸಿಕೊಂಡು ಮುನ್ನೆಡೆದರೆ ಜನಮಾನಸದಲ್ಲಿ ನೆಲೆಯೂರಲು ಸಾಧ್ಯ ಎಂ ದು ಕಿವಿಮಾತು ಹೇಳಿದರು.
ಇದೇ ವೇಳೆ ನಗರಾಭಿವೃದ್ದಿ ಪ್ರಾಧಿಕಾರದ ಪದಾಧಿಕಾರಿಗಳಿಗೆ ಹಿಂದೂ ಸಂಪ್ರದಾಯ ಮಂತ್ರಕ್ಷತೆ ಹಾಕಲಾಯಿತು. ಮಸೀದಿ ಗುರುಗಳು ಹಾಗೂ ಕ್ರಿಶ್ಚಿಯನ್ ಧರ್ಮಾನುಸಾರ ಮಂತ್ರಪಠಿಸಿ ಪದಾಧಿಕಾರಿಗಳು ಉತ್ತಮವಾಗಿ ಕಾರ್ಯನಿರ್ವಹಿಸಲಿ ಎಂದು ಶುಭಕೋರಿದರು.
ಈ ಸಂದರ್ಭದಲ್ಲಿ ಎಐಸಿಸಿ ಕಾರ್ಯದರ್ಶಿ ಬಿ.ಎಂ.ಸಂದೀಪ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಗಳಾದ ಡಾ|| ಡಿ.ಎಲ್.ವಿಜಯ್ಕುಮಾರ್, ರೇಖಾಹುಲಿಯಪ್ಪಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಪಿ. ಮಂಜೇಗೌಡ, ಗ್ಯಾರಂಟಿ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಎಂ.ಸಿ.ಶಿವಾನಂದಸ್ವಾಮಿ, ನಗರಸಭೆ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್, ಮುಖಂಡರುಗಳಾದ ಎಂ.ಎಲ್.ಮೂರ್ತಿ, ಕೆ.ಎಸ್.ಶಾಂತೇಗೌಡ, ಹನೀಫ್, ತನೋಜ್ ನಾಯ್ಡು, ಬಿ.ಹೆಚ್.ಹರೀಶ್, ಮಲ್ಲೇಶಸ್ವಾಮಿ, ಹಿರೇಮಗಳೂರು ರಾಮಚಂದ್ರ, ರೂಬೆನ್ ಮೋ ಸಸ್, ನಗರಸಭಾ ಸದಸ್ಯರುಗಳಾದ ಮುನೀರ್ ಅಹ್ಮದ್, ಖಲಂದರ್, ಶಾದಬ್, ಅನ್ಸರ್ ಆಲಿ ಮತ್ತಿತರರು ಹಾಜರಿದ್ದರು.
Inauguration of the new Chairman of Urban Development Authority Muhammad Nayaz