ಚಿಕ್ಕಮಗಳೂರು: ಒಕ್ಕಲಿಗ ಜನಾಂಗದ ಅಭಿವೃದ್ಧಿ ದೃಷ್ಟಿಯಿಂದ ಹಾಗೂ ವಿದ್ಯಾರ್ಥಿ ವೇತನ ನೀಡಲು ಅನುಕೂಲವಾಗುವಂತೆ ಸಮಾಜದ ಮನೆಮನೆಗೆ ಸಂಪರ್ಕ ಮಾಡಿ ದೇಣಿಗೆ ಸಂಗ್ರಹಿಸುವ ಅಭಿಯಾನಕ್ಕೆ ಮುಂದಿನ ದಿನಗಳಲ್ಲಿ ಚಾಲನೆ ನೀಡಲಾಗುವುದು ಎಂದು ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಟಿ.ರಾಜಶೇಖರ್ ತಿಳಿಸಿದ್ದಾರೆ.
ಅವರು ಸಮಾಜದ ಅಭಿವೃದ್ಧಿಗಾಗಿ ಸಂಘದ ನಿರ್ದೇಶಕ ಕಳವಾಸೆ ರವಿ, ಕೋಮಲ ನೀಡಿದ ೫ ಲಕ್ಷ ರೂಗಳ ಚೆಕ್ನ್ನು ಪಡೆದು ನಂತರ ಮಾತನಾಡಿದರು.
ಕಳವಾಸೆ ರವಿ ದಂಪತಿಗಳು ೫ ಲಕ್ಷ ರೂಗಳ ದೇಣಿಗೆಯನ್ನು ನೀಡುವ ಮೂಲಕ ಒಕ್ಕಲಿಗ ಸಮುದಾಯದ ಅಭಿವೃದ್ಧಿಗೆ ಪೂರಕವಾಗಿ ಸ್ಪಂದಿಸಿದ್ದಾರೆ. ಪ್ರಸಕ್ತ ಸಾಲಿನಲ್ಲಿ ಜಿಲ್ಲಾ ಒಕ್ಕಲಿಗರ ಸಂಘಕ್ಕೆ ಐ.ಡಿ ಮೋಹನ್ ೫ ಲಕ್ಷ ರೂಗಳ ದೇಣಿಗೆ ನೀಡಿದ್ದು, ಸಮಾಜದ ಇತರೆ ೫ ಜನ ತಲಾ ೨೫ ಸಾವಿರ ರೂಗಳಂತೆ ದೇಣಿಗೆ ನೀಡಿದ್ದಾರೆಂದು ಹೇಳಿದರು.
ದಾನಿಗಳಿಂದ ದೇಣಿಗೆ ಸಂಗ್ರಹಿಸಿ ವಾಣಿಜ್ಯ ಮಳಿಗೆ ಮತ್ತು ಬೇರೆ ಬೇರೆ ಅಭಿವೃದ್ಧಿ ಕಾರ್ಯಕೆ, ಸಂಘದ ಚಟುವಟಿಕೆಗಳಿಗೆ ಬಳಸಲಾಗುವುದು. ಇದಕ್ಕೆ ಸಹಕರಿಸುತ್ತಿರುವ ಸಮಾಜದ ದಾನಿಗಳಿಗೆ ಧನ್ಯವಾದಗಳನ್ನು ಹೇಳುತ್ತೇನೆ ಎಂದರು.
ದೇಣಿಗೆ ನೀಡಿದ ಕಳವಾಸೆ ರವಿ ಮಾತನಾಡಿ, ಸರ್ವ ಜನಾಂಗದ ವಿದ್ಯಾರ್ಥಿಗಳ ವ್ಯಾಸಂಗಕ್ಕಾಗಿ ಅನುಕೂಲವಾಗುವಂತೆ ಈ ವಂತಿಕೆಯನ್ನು ನೀಡಲಾಗಿದ್ದು, ಒಕ್ಕಲಿಗರು ತಲತಲಾಂತರದಿಂದ ಕೃಷಿಕರಾಗಿದ್ದು, ಪರದೇಶಪ್ಪನ ಮಠ, ಕವಿಕಲ್ ಮಠ ಮುಂತಾದವುಗಳಿಗೆ ದೀಪಾವಳಿ ಹಬ್ಬದ ಸಂದರ್ಭದಲ್ಲಿ ದಾನ-ಧರ್ಮ ಮಾಡುತ್ತಿರುವುದು ನಮ್ಮ ಹಿರಿಯರಿಂದ ಪ್ರಭಾವಿತರಾಗಿ ಸಮಾಜಕ್ಕೆ ಅಳಿಲು ಸೇವೆ ಸಲ್ಲಿಸುತ್ತಿದ್ದೇನೆ ಎಂದರು.
ಒಕ್ಕಲಿಗ ಜನಾಂಗದ ಅಭಿವೃದ್ಧಿಗೆ ಈ ಹಣವನ್ನು ನೀಡಿದ್ದು, ಇದರಿಂದ ಸಮುದಾಯ ಭವನದಲ್ಲಿ ನಿರ್ಮಾಣವಾಗುತ್ತಿರುವ ವಾಣಿಜ್ಯ ಮಳಿಗೆಗೆ ಬಳಕೆಯಾಗಲಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಲಕ್ಷ್ಮಣ್ ಗೌಡ, ಕಾರ್ಯದರ್ಶಿ ಎಂ.ಸಿ.ಪ್ರಕಾಶ್, ನಿರ್ದೇಶಕರುಗಳಾದ ಬಿ.ಎಲ್ ಸಂದೀಪ್, ಕೆ.ಎಸ್.ನಾರಾಯಣ ಗೌಡ, ಕೆ.ಯು.ರತೀಶ್ ಕುಮಾರ್, ಕೆ.ಕೆ.ಮನುಕುಮಾರ್, ಎಂ.ಬಿ.ಆನಂದ್, ಬಿ.ಎಸ್.ಚಂದ್ರಪ್ಪ, ಎಂ.ಕೆ.ದಿನೇಶ್, ಹೆಚ್.ಬಿ.ಲಕ್ಷ್ಮೀ, ಬಿ.ಸುಜಿತ್, ಕೆ.ಕೆ.ವೆಂಕಟೇಶ್, ಹೆಚ್.ಎನ್.ಶ್ರೀಧರ್, ಟಿ.ಡಿ.ಮಲ್ಲೇಶ್, ಜಿ.ಹೆಚ್.ದಿನೇಶ್, ಕೆ.ಪಿ.ಪೃಥ್ವಿರಾಜ್, ಹೆಚ್.ಎಂ.ಸತೀಶ್, ಎಮ್.ಹೆಚ್.ರಾಮಚಂದ್ರ, ಕೆ.ಎಸ್.ಜಗನಾಥ್, ಕೆ.ಎಸ್.ರಮೇಶ್, ಎಸ್.ಆರ್.ಚೇತನ್, ಐ.ಡಿ.ಮೋಹನ್ ಕುಮಾರ್, ಹೆಚ್.ಆರ್.ಹೇಮಾವತಿ, ಕೆ.ಎ.ರಾಜೇಗೌಡ, ಐ.ಎಸ್.ಉಮೇಶ್ ಚಂದ್ರ, ಎ.ಪೂಣೇಶ್ ಮತ್ತಿತರರು ಉಪಸ್ತಿತರಿದ್ದರು.
A campaign to collect donations for the development of Okkaliga race