ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗದಲ್ಲಿ ಆರ್ಭಟಿಸಿದ್ದ ವರುಣ ಸ್ವಲ್ಪ ಬಿಡುವು ನೀಡಿದೆ. ಸೋಮವಾರ ಮತ್ತು ಮಂಗಳ ವಾರ ರಾತ್ರಿಯಿಡಿ ಸುರಿದ ಮಳೆಗೆ ಮಲೆನಾಡಿಗರು ತತ್ತರಿಸಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದ್ದು, ಅನೇಕ ಆವಂತರ ಗಳನ್ನು ಸೃಷ್ಟಿಸಿದೆ.
ಭದ್ರಾನದಿ ತುಂಬಿ ಹರಿದಿದ್ದು, ಕಳಸ-ಹೊರನಾಡು ಸಂಪರ್ಕ ಕಲ್ಪಿಸುವ ಹೆಬ್ಬಾಳೆ ಸೇತುವೆ ನದಿ ನೀರಿನಲ್ಲಿ ಮುಳುಗಿದ್ದು, ಸಂ ಚಾರ ಕಡಿತಗೊಂಡಿತ್ತು. ಮುಂಜಾಗೃತ ಕ್ರಮವಾಗಿ ಪೊಲೀಸ್ ಸಿಬ್ಬಂದಿ ಬ್ಯಾರಿಕೇಟ್ ಅಳವಡಿಸಿ ವಾಹನ ಸಂಚಾರ ನಿಷೇಧಿಸಲಾ ಗಿತ್ತು. ಶೃಂಗೇರಿ ಶಾರದಾದೇವಿ ದೇವಸ್ಥಾನ ತಟದಲ್ಲಿ ಹರಿಯುವ ತುಂಗಾನದಿ ಪ್ರವಾಹ ಸೃಷ್ಟಿಸಿದ್ದು, ವಾಹನ ನಿಲುಗಡೆವರೆಗೂ ಪ್ರವಾಹದ ನೀರು ಹರಿದಿದ್ದರೇ, ದೇವಸ್ಥಾನ ಸಮೀಪದಲ್ಲಿರುವ ಕಪ್ಪೆ ಶಂಕರ ದೇಗುಲ ನದಿ ನೀರಿನಲ್ಲಿ ಜಲಾವೃತಗೊಂಡಿತ್ತು.
ಜಯಪುರ-ಕೊಪ್ಪ ಸಂಪರ್ಕ ಕಲ್ಪಿಸುವ ರಸ್ತೆಯ ನಾರ್ವೆ ಸಮೀಪ ರಸ್ತೆ ಬದಿ ಭೂಕುಸಿತ ಉಂಟಾಗಿದ್ದು, ಮುಂಜಾಗೃತ ಕ್ರಮವಾಗಿ ರಸ್ತೆ ಸಂಚಾರವನ್ನು ನಿಷೇಧಿಸಲಾಗಿದೆ. ರಸ್ತೆ ಸಂಪೂರ್ಣ ಕುಸಿಯುವ ಆತಂಕ ಎದುರಾಗಿದೆ. ಭೂಕುಸಿತ ಪ್ರದೇಶದಲ್ಲಿ ಬ್ಯಾರಿಕೇಟ್ ಅಳವಡಿಸಲಾಗಿದೆ. ಮಳೆ ಅರ್ಭಟಕ್ಕೆ ಮೂಡಿಗೆರೆ-ಬೇಲೂರು ಸಂಪರ್ಕ ರಸ್ತೆ ಬೊಮ್ಮೇನಹಳ್ಳಿ-ಕನ್ನೇಹಳ್ಳಿ ಬಳಿ ರಸ್ತೆ ಮಳೆ ನೀರಿ ನಲ್ಲಿ ಕೊಚ್ಚಿ ಹೋಗಿದ್ದು ಪರ್ಯಾಯ ರಸ್ತೆಯಲ್ಲಿ ಸಂಚರಿಸುವಂತಾಗಿದೆ.
ಕೊಟ್ಟಿಗೆಹಾರ ಬಸ್ನಿಲ್ದಾಣದ ಕಾಂಪೌಂಡ್ ಕುಸಿದು ಬಿದ್ದಿದೆ. ಭಾನುವಾರ-ಸೋಮವಾರ ಸುರಿದ ಬಾರಿ ಮಳೆಗೆ ಜಿಲ್ಲಾಡಳಿತ ಜಿಲ್ಲೆಯ ಕೊಪ್ಪ, ಶೃಂಗೇರಿ, ನರಸಿಂಹರಾಜಪುರ, ಮೂ ಡಿಗೆರೆ, ಕಳಸ ಹಾಗೂ ಚಿಕ್ಕಮಗಳೂರು ತಾಲೂಕಿನ ಅಂಗನವಾಡಿ, ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿತ್ತು.
ತುಂಗಾ, ಭದ್ರಾ, ಹೇಮಾವತಿ ನದಿಗಳು ಅಪಾಯದ ಮಟ್ಟದಲ್ಲಿ ಹರಿಯುತ್ತಿದ್ದು, ನದಿಪಾತ್ರದ ಜಮೀನುಗಳಿಗೆ ನೀರು ನುಗ್ಗಿದೆ. ನದಿಪಾತ್ರದ ಪ್ರದೇಶಗಳಿಗೆ ಜನರು ತೆರಳದಂತೆ ಎಚ್ಚರಿಕೆ ವಹಿಸಲಾಗಿದೆ. ಕುದುರೆಮುಖ, ಕಳಸ ಭಾಗದಲ್ಲಿ ಬಾರೀ ಮಳೆಯಾಗಿದ್ದು, ಭದ್ರಾನದಿ ತುಂಬಿ ಹರಿಯುತ್ತಿದೆ.
ತುಂಗಾ ನದಿಯಲ್ಲಿ ಪ್ರವಾಹ ಉಂಟಾಗಿದ್ದು, ಶೃಂಗೇರಿ ಶಾರದಾದೇವಿ ದೇವಸ್ಥಾನ ಸಮೀಪದ ವಾಹನ ನಿಲುಗಡೆವರೆಗೂ ನೀರು ಆವರಿಸಿದ್ದು, ಕಪ್ಪೆ ಶಂಕರ ಮುಳುಗಿದ್ದು, ಗಾಂಧಿ ಮೈದಾನದಲ್ಲಿ ನೀರು ಆವರಿಸಿದ್ದು ನೆರೆ ನೀರು ಅಂಗಡಿ ಮುಂಗಟ್ಟುಗಳಿಗೆ ನುಗ್ಗಿ ದ್ದು, ಅಪಾರ ಪ್ರಮಾಣದ ಹಾನಿಯಾಗಿದೆ. ಪಾರ್ಕಿಂಗ್ ಮಾಡಲಾಗಿದ್ದ ವಾಹನಗಳನ್ನು ಪೊಲೀಸರು ಮತ್ತು ಅಗ್ನಿಶಾಮಕ ದಳ ದ ಸಿಬ್ಬಂದಿ ಟ್ರ್ಯಾಕ್ಟರ್ ಮೂಲಕ ಎಳೆದು ಸುರಕ್ಷಿತ ಜಾಗಕ್ಕೆ ತರಲಾಗಿದೆ. ನೆರೆ ನೀರಿನ ಆತಂಕದಿಂದಾಗಿ ಪ್ಯಾರಲಲ್ ರಸ್ತೆಯಲ್ಲಿ ವಾಹನಗಳ ಸಂಚಾರ ನಿಷೇಧಿಸಿ ಬ್ಯಾರಿಕೇಡ್ ಹಾಕಲಾಗಿದೆ.
ಚಿಕ್ಕಮಗಳೂರು ತಾಲೂಕಿನಲ್ಲಿ ಸೋಮವಾರ ಬೆಳಗ್ಗೆಯಿಂದ ಇಡೀ ದಿನ ಮಳೆಯಾಗಿದ್ದು, ಮಳೆಯಿಂದಾಗಿ ವಾಹನಗಳ ಸಂಚಾ ರಕ್ಕೆ ತೊಂದರೆಯಾಗಿರುವುದಲ್ಲದೇ ಜನಜೀವನ ಅಸ್ತವ್ಯಸ್ತಗೊಂಡಿದೆ. ತಾಲೂಕಿನ ಮಲ್ಲಂದೂರು ಗ್ರಾಮದಲ್ಲಿ ಎರಡು ಕಾರುಗಳ ನಡುವೆ ಡಿಕ್ಕಿ ಸಂಭವಿಸಿದ್ದು, ಡಿಕ್ಕಿ ರಭಸಕ್ಕೆ ಕಾರೊಂದು ರಸ್ತೆ ಬದಿಯ ಕುಲುಮೆ ಮೇಲೆ ಉರುಳಿ ಬಿದ್ದಿದೆ.
ಘಟನೆಯಲ್ಲಿ ಪ್ರಯಾಣಿ ಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಜಾವಳಿ ಗ್ರಾಮ ಪಂಚಾಯತ್ ಕೆಳಗೂರು ಸಮೀಪದ ಜೆ.ಹೊಸಳ್ಳಿ ಮಾಳಿಗಾನಾಡು ರಸ್ತೆ ಉದ್ದಕ್ಕೂ ಮರಗಳು ಬಿದ್ದು ರಸ್ತೆ ಸಂಚಾರ ಬಂದ್ ಆಗಿತ್ತು. ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಸ್ಥಳೀಯರು ಮರ ತೆರವು ಗೊಳಿಸಿದರು.
ಕಡವಂತಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಾಸಾಪುರ ಗ್ರಾಮದ ಹತ್ತಿರ ರಸ್ತೆ ಮೇಲೆ ನೀರು ಹರಿದು ಶಿರವಾಸೆ-ಸಂಗಮೇಶ್ವರ ಪೇಟೆ ರಸ್ತೆ ಸಂಪರ್ಕ ಕಡಿತಗೊಂಡಿದೆ. ಮುಳ್ಳಯ್ಯನಗಿರಿ ಪ್ರದೇಶಕ್ಕೆ ತೆರಳುವ ಮಾರ್ಗದ ಮಧ್ಯೆ ನಾಲ್ಕೈದು ಕಡೆ ರಸ್ತೆ ಬದಿಯಲ್ಲಿ ಕುಸಿತವಾಗಿದೆ. ಬಾಳೂರು ಗ್ರಾಮದ ಶೇಷಪ್ಪ ಎಂಬುವರ ಮನೆ ಮೇಲೆ ಮರ ಬಿದ್ದಿದ್ದು, ಮನೆಗೆ ಹಾನಿಯಾಗಿದೆ.
ವಸ್ತಾರೆ ಹೋ ಬಳಿ ಚಿತ್ತವಳ್ಳಿ ಗ್ರಾಮದ ಹೇಮಾವತಿ ಎಂಬುವರ ಮನೆಗೆ ಹಾನಿಯಾಗಿದೆ. ಬಾರಿ ಮಳೆ ಹಿನ್ನೆಲೆಯಲ್ಲಿ ನದಿ ತೀರದ ಗ್ರಾಮಗಳಲ್ಲಿ ಜನರು ಸ್ಥಳಾಂತರ ಆಗುವ ಆತಂಕ ಎದುರಾಗಿದ್ದು, ಮುಂಜಾಗ್ರತಾ ಕ್ರಮಕ್ಕಾಗಿ ಪೊಲೀಸರು, ಅಗ್ನಿಶಾಮಕದಳ, ಸ್ವಯಂ ಸೇವ ಕರು, ಎನ್ಡಿಆರ್ಎಫ್ ತಂಡ ಹಾಗೂ ಜಿಲ್ಲಾಡಳಿತ ಸಜ್ಜಾಗಿದೆ.
Arbhata in the hilly part of the district – people’s lives are in complete chaos