ಬಾಳೆಹೊನ್ನೂರು: ಚಲಿಸುತ್ತಿದ್ದ ಬಸ್ಸಿನ ಚಕ್ರಗಳು ಕಳಚಿ, ರಸ್ತೆ ಮದ್ಯದಲ್ಲೆ ಜಖಂಗೊಂಡು ಅಪಘಾತಕ್ಕೊಳಗಾದ ದುರ್ಘಟನೆ ಬುಧವಾರ ಮುಂಜಾನೆ ಬಾಳೆಹೊನ್ನೂರಿನಲ್ಲಿ ನಡೆದಿದ್ದು, ಬಸ್ಸಿನಲ್ಲಿದ್ದ ೨೪ ಪ್ರಯಾಣಿಕರು ಅದೃಷ್ಟವಷಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಬೆಂಗಳೂರಿನಿಂದ ಶೃಂಗೇರಿ ಕಡೆಗೆ ತೆರಳುತ್ತಿದ್ದ, ಸುಗಮ ಟ್ರಾವೆಲ್ಸ್ ಸ್ಲೀಪರ್ ಕೋಚ್ ಬಸ್ ಬಾಳೆಹೊನ್ನೂರು ಪಟ್ಟಣದ ರೋಟರಿ ಸರ್ಕಲ್ ಬಳಿ ಚಕ್ರ ಕಳಚಿ ಅಪಘಾತಕ್ಕೊಳಗಾಗಿದ್ದು, ಸಮತಟ್ಟಾದ ರಸ್ತೆಯಲ್ಲಿ ಚಕ್ರ ಕಳಚಿದ ಕಾರಣ ಅಪಘಾತದಲ್ಲಿ ಪ್ರಯಾಣಿಕರು ಗಾಯಗೊಳ್ಳದೆ ಬಚಾವಾಗಿದ್ದಾರೆ.
ಘಟನೆ ನಡೆದ ಸ್ಥಳಕ್ಕೆ ಬಾಳೆಹೊನ್ನೂರು ಪಿಎಸೈ ರವೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿ ಅಜಾಗರೂಕತೆಯಿಂದ ವಾಹನ ನಿರ್ವಹಣೆ ಮಾಡಿ ವಾಹನ ಚಲಾಯಿಸುತ್ತಿದ್ದಕ್ಕಾಗಿ ಚಾಲಕ ಉದಯ್ ವಿರುದ್ದ ಐಎಂವಿ ಕಾಯ್ದೆ ಕಲಂ ೧೮೪ ಅಡಿ ಕೇಸ್ ದಾಖಲಿಸಿದ್ದಾರೆ.
ಯಾವುದೇ ವಾಹನವನ್ನು ಚಾಲನೆ ಮಾಡುವ ಮೊದಲು ಚಾಲಕರು ಚಕ್ರಗಳು, ಬ್ರೇಕ್ ಹಾರ್ನ್ ಹಾಗೂ ವಾಹನದ ಸುಸ್ಥಿತಿಯ ಬಗ್ಗೆ ಪರಿಶೀಲನೆ ಮಾಡಿಕೊಳ್ಳಬೇಕು. ಮತ್ತು ಚಾಲನಾ ಸಂಧರ್ಭದಲ್ಲಿ ಅತಿ ಅವಶ್ಯಕವಾಗಿ ಡ್ರೈವಿಂಗ್ ಲೈಸೆನ್ಸ್, ವಾಹನದ ಇನ್ಶೂರೆನ್ಸ್, ಎಮಿಷನ್ ಟೆಸ್ಟ್ , ಆರ್ ಸಿ ಕಡ್ಡಾಯವಾಗಿ ಹೊಂದಿರಬೇಕು.
ಇಲ್ಲದಿದ್ದಲ್ಲಿ ಅಂತಹವರ ವಿರುದ್ದ ಇಂಡಿಯನ್ ಮೋಟಾರ್ ವೆಹಿಕಲ್ ಆಕ್ಟ್ ಪ್ರಕಾರ ಪ್ರಕರಣ ದಾಖಲಿಸಿ ದಂಡ ವಿಧಿಸಲಾಗುತ್ತದೆ ಎಂದು ಬಾಳೆಹೊನ್ನೂರು ಠಾಣೆಯ ಪಎಸೈ ರವೀಶ್ ಹೇಳಿದ್ದಾರೆ.
The wheels of the moving bus fell off