ಚಿಕ್ಕಮಗಳೂರು: ನಗರ ಸಭೆಯ ವ್ಯಾಪ್ತಿಯಲ್ಲಿ ರಸ್ತೆ, ಸರ್ಕಲ್ಗಳಲ್ಲಿ ಬ್ಯಾನರ್, ಬಂಟಿಂಗ್ಸ್, ಫ್ಲಕ್ಸ್ಗಳನ್ನು ಹಾಕಬಾರದು, ನಗರ ಸಭೆಯಲ್ಲಿ ನಿರ್ಣಯವಾಗಿರುವ ಐದು ಭಾಗಗಳಲ್ಲಿ ಮಾತ್ರ ಹಾಕುವಂತೆ ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಸಂಘ-ಸಂಸ್ಥೆಗಳಿಗೆ ಪೌರಾಯುಕ್ತ ಬಿ.ಸಿ ಬಸವರಾಜ್ ಸೂಚನೆ ನೀಡಿದ್ದಾರೆ.
ಅವರು ಇಂದು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಈ ವಿ?ಯ ತಿಳಿಸಿ, ಇದರಿಂದಾಗಿ ಸಾರ್ವಜನಿಕರಿಗೆ ಓಡಾಡಲು ಹಾಗೂ ಸಂಚಾರಕ್ಕೆ ಬಹಳ ತೊಂದರೆ ಆಗುತ್ತಿದೆ ಎಂಬ ದೂರುಗಳು ಬಂದ ಹಿನ್ನೆಲೆಯಲ್ಲಿ ಸ್ಥಳವನ್ನು ನಿಗಧಿಮಾಡಿ ನಿರ್ಣಯ ಮಾಡಲಾಗಿದ್ದು, ನಿಗದಿತ ಸ್ಥಳದಲ್ಲಿ ಇಡಬೇಕೆಂದು ಹೇಳಿದರು.
ಕೆಲವು ರಸ್ತೆಗಳಲ್ಲಿ ಫ್ಲೆಕ್ಸ್, ಕಟೌಟ್ ಇಡುತ್ತಿರುವುದರಿಂದ ಅಪಘಾತಗಳು ಹೆಚ್ಚಾಗುತ್ತಿವೆ ಆದ್ದರಿಂದ ನಗರಸಭೆ ಅನುಮತಿ ಪಡೆಯದೆ ಅಳವಡಿಸದಂತೆ ಮನವಿ ಮಾಡಿದ ಅವರು ಪ್ರತಿ ಫ್ಲೆಕ್ಸ್ ಹಾಕಲು ದಿನವೊಂದಕ್ಕೆ ೧೧೦ ರೂ ನಿಗಧಿಪಡಿಸಲಾಗಿದೆ ಎಂದರು.
ಡೆಂಗ್ಯೂ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಸಹಯೋಗದಲ್ಲಿ ನಗರದ ಎಲ್ಲಾ ವಾರ್ಡ್ಗಳಲ್ಲಿ ಪ್ರತಿದಿನ ಚರಂಡಿ ಸ್ವಚ್ಛತೆ, ಫಾಗಿಂಗ್, ಬ್ಲೀಚಿಂಗ್ ಪೌಡರ್ ಸಿಂಪಡಣೆ ಹಾಗೂ ಔ?ಧಿಗಳನ್ನು ಸ್ಪ್ರೇ ಮಾಡಲಾಗುತ್ತಿದೆ ಒಟ್ಟಾರೆ ಸಮರೋಪಾದಿಯಲ್ಲಿ ಕಾರ್ಯಚರಣೆ ನಡೆಸಲಾಗುತ್ತಿದೆ ಎಂದು ಹೇಳಿದರು.
ಈ ಸಂಬಂಧ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಭೆ ನಡೆಸಲಾಗಿದ್ದು, ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುವ ಬಗ್ಗೆ ಸಿಬ್ಬಂದಿಗೆ ಸೂಚನೆ ನೀಡಲಾಗುತ್ತಿದೆ. ಸಧ್ಯದಲ್ಲಿ ನಗರ ವ್ಯಾಪ್ತಿಯಲ್ಲಿ ಯಾವುದೇ ಡೆಂಗ್ಯೂ ಪ್ರಕರಣಗಳು ವರದಿಯಾಗಿಲ್ಲ ಜೊತೆಗೆ ಇಳಿಮುಖವಾಗಿದೆ ಎಂದರು.
ಕತ್ರಿಮಾರಮ್ಮ ದೇವಸ್ಥಾನದಿಂದ ಕಣಿವೆ ರುದ್ರೇಶ್ವರ ದೇವಾಲಯದವರೆಗೆ ಬೀದಿದೀಪ ಅಳವಡಿಸಲು ನಗರೋತ್ಥಾನ ಮೂರನೇ ಹಂತದಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಟೆಂಡರ್ ಪ್ರಕ್ರಿಯೆ ಆಗಬೇಕು, ಡಿಯುಡಿಸಿ ಯಿಂದ ಅದು ಪರಿಶೀಲನೆ ಆಗುತ್ತಿದೆ, ಆದ ನಂತರ ಕೆಲಸ ಪ್ರಾರಂಭವಾಗಲಿದೆ ಎಂದು ತಿಳಿಸಿದರು.
ನಗರಸಭೆ ಆವರಣದಲ್ಲಿ ನಿರ್ಮಾಣವಾಗುತ್ತಿರುವ ಪಾರ್ಕ್ ಮತ್ತು ಪುಡ್ಕೋರ್ಟ್ನ್ನು ಸಾರ್ವಜನಿಕ ಸಮರ್ಪಣೆಗೆ ಸಿದ್ಧವಾಗಿದ್ದು, ಜಿಲ್ಲಾ ಉಸ್ತುವಾರಿ ಸಚಿವರು ವಿಧಾನಸಭೆ ಅಧಿವೇಶನದಲ್ಲಿ ಭಾಗಿಯಾಗಿರುವುದರಿಂದ ಅವರು ದಿನಾಂಕ ನೀಡಿದ ನಂತರ ಉದ್ಘಾಟಿಸಲಾಗುವುದೆಂದು ಹೇಳಿದರು
Instructions to put flex buntings at the place fixed by the Municipal Council