ಚಿಕ್ಕಮಗಳೂರು: ಮಲೆನಾಡಿನಲ್ಲಿ ಮಳೆ, ಗಾಳಿ ಅಬ್ಬರಿಸುತ್ತಿದೆ. ಭಾರೀ ಪ್ರಮಾಣದಲ್ಲಿ ಸುರಿಯುತ್ತಿರುವ ಮಳೆಯಿಂದ ಭದ್ರಾನದಿ ತುಂಬಿ ಹರಿಯುತ್ತಿದ್ದು ನದಿ ನೀರು ಕಳಸ-ಹೊರನಾಡು ಸಂಪರ್ಕ ಕಲ್ಪಿಸುವ ಹೆಬ್ಬಾಳೆ ಸೇತುವೆ ಮೇಲೆ ಹರಿಯುತ್ತಿದೆ. ವಾಹನ ಸಂಚಾರವನ್ನು ಕಡಿತಗೊಳಿಸಲಾಗಿದೆ.
ಮುಂಜಾಗೃತ ಕ್ರಮವಾಗಿ ಪೊಲೀಸ್ ಇಲಾಖೆ ಸಿಬ್ಬಂದಿಗಳು ರಸ್ತೆಗೆ ಬ್ಯಾರಿಕೇಡ್ಗಳನ್ನು ಅಳವಡಿಸಿದ್ದರು ಜೀಪ್ ಚಾಲಕ ಸೇತುವೆ ಮೇಲೆ ರಭಸವಾಗಿ ಹರಿಯುತ್ತಿರುವ ನೀರಿನ ಮಧ್ಯೆಯೇ ಜೀಪ್ ಚಲಾಯಿಸಿಕೊಂಡು ಹೋಗಿದ್ದು ಸ್ವಲ್ಪದರಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಸೇತುವೆ ಮೇಲೆ ವಾಹನ ಸಂಚಾರವನ್ನು ಕಡಿತಗೊಳಿಸಿ ಪೊಲೀಸರು ಬ್ಯಾರಿಕೇಡ್ ಅಳವಡಿಸಿದ್ದರು. ಜೀಪ್ ಚಾಲಕ ಹುಚ್ಚಾಟ ಮೆರೆದಿದ್ದು ಅಲ್ಲಿದ್ದ ಸ್ಥಳೀಯರು ವಿಡಿಯೋ ಮಾಡಿದ್ದಾರೆ. ಸೇತುವೆ ಮೇಲಿನ ಸಂಚಾರವನ್ನು ಬಂದ್ಗೊಳಿಸಿ ಬ್ಯಾರಿಕೇಡ್ ಅಳವಡಿಸಿದ್ದರು.
ಬ್ಯಾರಿಕೇಡ್ ಪಕ್ಕದಲ್ಲಿ ತೆರಳಿದ ಜೀಪ್ ಚಾಲಕ ಸೇತುವೆ ಮಧ್ಯೆಭಾಗಕ್ಕೆ ತೆರಳುತ್ತಿದ್ದಂತೆ ನೀರಿನ ರಭಸಕ್ಕೆ ಜೀಪ್ ಚಾಲಕನ ನಿಯಂತ್ರಣ ತಪ್ಪಿದೆ. ಹೇಗೂ ನಿಯಂತ್ರಣಕ್ಕೆ ತಂದುಕೊಂಡ ಚಾಲಕ ದಡ ಸೇರಿದ್ದಾನೆ. ಸ್ವಲ್ಪ ಯಾಮಾರಿದರೂ ಜೀಪು ಮತ್ತು ಜೀಪ್ ಚಾಲಕ ನದಿನೀರಿನಲ್ಲಿ ಕೊಚ್ಚಿ ಹೋಗುವಂತಾಗುತ್ತಿತ್ತು. ಜೀಪ್ ಚಾಲಕನ ಹುಚ್ಚಾಟಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಜಲಪಾತಗಳು ಸೇರಿದಂತೆ ನದಿಪಾತ್ರದ ಪ್ರದೇಶಗಳಲ್ಲಿ ಜನರು ಅಪಾಯಕಾರಿ ಸಹಾಸಕ್ಕೆ ಕೈ ಹಾಕಬಾರದು ತಮ್ಮ ಸುರಕ್ಷತೆಗೆ ಒತ್ತು ನೀಡುವಂತೆ ಜಿಲ್ಲಾ ಪೊಲೀಸ್ ಇಲಾಖೆ ಮತ್ತು ಜಿಲ್ಲಾಡಳಿತ ಮನವಿ ಮಾಡಿದರು. ಕೆಲವರು ದುಸ್ಸಾಹಸಕ್ಕೆ ಕೈ ಹಾಕು ತ್ತಿದ್ದು, ಇಂತವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
Outward Hebbale Bridge road closure