ಚಿಕ್ಕಮಗಳೂರು: ನಗರದ ಗ್ರಾಮೀಣ ಬಸ್ನಿಲ್ದಾಣವು ಕೆಸರುಮಯಗೊಂಡು ದುರಸ್ಥಿ ಗಾಗಿ ಆಗ್ರಹಿಸಿದರೂ ಜಿಲ್ಲಾಡಳಿತ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಭೀಮ್ ಆರ್ಮಿ, ಕನ್ನಡಪರ ಹಾಗೂ ದಲಿತ ಒಕ್ಕೂಟಗಳ ಸಂಘಟನೆಗಳ ನೇತೃತ್ವದಲ್ಲಿ ಬೇಸಾಯ ನಡೆಸಿ, ಭತ್ತದ ಸಸಿಗಳು ನೆಟ್ಟು ಮುಖ ಂಡರುಗಳು ಗುರುವಾರ ವಿನೂತನ ಪ್ರತಿಭಟನೆ ನಡೆಸಿದರು.
ಬಳಿಕ ಮಾತನಾಡಿದ ಭೀಮ್ಆರ್ಮಿ ಗೌರವಾಧ್ಯಕ್ಷ ಹೊನ್ನೇಶ್ ಬಡವರು, ದಲಿತರೇ ಹೆಚ್ಚಿನ ಸಂಖ್ಯೆ ಯಲ್ಲಿ ಆಗಮಿಸುವ ಈ ಬಸ್ನಿಲ್ದಾಣದಲ್ಲಿ ಮೂಲಭೂತ ಸೌಕರ್ಯಗಳಿಲ್ಲ. ಮಳೆಗಾಲದಲ್ಲಿ ಕೆಸರುಮಯ ವಾಗಿ ಅನೇಕ ಮಕ್ಕಳು ಮುಖ್ಯರಸ್ತೆಗೆ ಬರುವಷ್ಟರಲ್ಲಿ ಕೆಸರಿನಲ್ಲಿ ಬಿದ್ದು ಶಾಲೆಗೂ ತೆರಳದೇ ಪರದಾಡುವಂ ತಾಗಿದೆ ಎಂದರು.
ಹಳೆಯ ಕಾರಾಗೃಹ ಜಾಗದಲ್ಲಿ ಗ್ರಾಮೀಣ ಬಸ್ನಿಲ್ದಾಣ ನಿರ್ಮಿಸಿ ಮೂರ್ನಾಲ್ಕು ವರ್ಷಗಳು ಕಳೆ ದಿದೆ. ಇಂದಿಗೂ ಶೌಚಾಲಯ ಸ್ವಚ್ಚತೆಯಿಲ್ಲ. ಕಸದರಾಶಿ ಎಲ್ಲೆಂದರಲ್ಲೇ ಬಿದ್ದಿದೆ. ಇವುಗಳ ನಡುವೆ ನೂರಾ ರು ಮಂದಿ ಸಂಚರಿಸುತ್ತಿದ್ದಾರೆ. ಜೊತೆಗೆ ಮಳೆಗಾಲದಲ್ಲಿ ಕೆಸರಿನಿಂದ ಕೂಡಿದ್ದರೆ, ಬೇಸಿಗೆ ಕಾಲದಲ್ಲಿ ದೂಳು ಮಾಯವಾಗಿ ಮೂಗುಮುಚ್ಚಿ ಪ್ರಯಾಣಿಸಬೇಕಾಗುತ್ತದೆ ಎಂದು ತಿಳಿಸಿದರು.
ಈ ಹಿಂದೆ ಭೀರ್ಮ್ ಆರ್ಮಿ ಹಾಗೂ ಕನ್ನಡಪರ ಸಂಘಟನೆ ನೇತೃತ್ವದಲ್ಲಿ ತಂಗುನಿಲ್ದಾಣ ದುರಸ್ಥಿಗೆ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಒತ್ತಾಯಿಸಲಾಗಿತ್ತು. ಆದರೂ ಕೂಡಾ ಗಮನಹರಿಸದ ಹಿನ್ನೆಲೆಯಲ್ಲಿ ಇಂದು ನಿಲ್ದಾಣದ ಆವರಣದಲ್ಲಿ ಬೇಸಾಯಿ ನಡೆಸಿ, ಭತ್ತದ ಸಸಿಗಳನ್ನು ನೆಟ್ಟು ಜಿಲ್ಲಾಡಳಿತಕ್ಕೆ ಕಣ್ತೆರೆಸುವ ಕೆಲಸ ಮಾಡಲಾಗುತ್ತಿದೆ ಎಂದರು.
ಉಳ್ಳವರ ಮಕ್ಕಳು ಪಕ್ಕದ ಉತ್ತಮ ಬಸ್ನಿಲ್ದಾಣದಲ್ಲಿ ಅಥವಾ ಕಾರುಗಳಲ್ಲಿ ಪ್ರಯಾಣಿಸಿದರೆ, ಬಡ ವರು, ದೀನದಲಿತರ ಮಕ್ಕಳು ಗುಂಡಿಗೊಟರುಗಳಲ್ಲಿ ಸಂಚರಿಸುವ ಸ್ಥಿತಿ ಎದುರಾಗಿದೆ. ಮಳೆಗಾಲದಲ್ಲಿ ಕೆಸರಿನಿಂದ ಕೂಡಿರುವ ನಿಲ್ದಾಣವು ತುಂಬಾ ಜಾರಿಕೆಯಿದೆ. ವೃದ್ದರು, ಮಹಿಳೆಯರು ಮಳೆಯ ನಡುವೆ ಆತುರವಾಗಿ ತೆರಳಿದರೆ ಪ್ರಾಣಕ್ಕೂ ಕುತ್ತು ಸಂಭವಿಸಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಕನ್ನಡಸೇನೆ ಜಿಲ್ಲಾಧ್ಯಕ್ಷ ಪಿ.ಸಿ.ರಾಜೇಗೌಡ ಮಾತನಾಡಿ ಗ್ರಾಮೀಣ ಪ್ರದೇಶದ ಮಕ್ಕಳ ಗೋಳಾಟ ಹೇಳತೀರದಾಗಿದೆ. ಒಂದೆಡೆ ಜಿಲ್ಲಾಡಳಿತ ಕಣ್ಮುಚ್ಚಿ ಕುಳಿತಿದೆ. ಇನ್ನೊಂದೆಡೆ ಜನಪ್ರತಿನಿಧಿಗಳು ಇದೇ ಮಾ ರ್ಗದಲ್ಲಿ ಅನೇಕ ಬಾರಿ ಸಂಚರಿಸಿದರೂ ಪ್ರಯಾಣಿಕರ ಸಮಸ್ಯೆ ಕಾಣಿಸುತ್ತಿಲ್ಲ. ಕೂಡಲೇ ಎಚ್ಚೆತ್ತುಕೊಂಡು ಬಸ್ನಿಲ್ದಾಣ ಕಾಂಕ್ರೀಕರಣಗೊಳಿಸದಿದ್ದಲ್ಲಿ ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆಗೆ ಯತ್ನಿಸುತ್ತೇವೆ ಎಂದರು.
ಈ ಸಂದರ್ಭದಲ್ಲಿ ಭೀಮ್ ಆರ್ಮಿ ಜಿಲ್ಲಾ ಪ್ರದಾನ ಕಾರ್ಯದರ್ಶಿ ಲೋಕೇಶ್, ತಾಲ್ಲೂಕು ಅಧ್ಯಕ್ಷ ರಮೇಶ್, ಉಪಾಧ್ಯಕ್ಷ ರಾಕೇಶ್, ಸಾಮಾಜಿಕ ಜಾಲತಾಣದ ಅಧ್ಯಕ್ಷ ದಿಲೀಪ್, ಮುಖಂಡರುಗಳಾದ ಸುಜ ಯ್, ಕೀರ್ತಿ, ವಸಂತ, ಉಮೇಶ್, ಸುದೀರ್, ರಘು, ಕಿರಣ್, ಹುಣಸೆಮಕ್ಕಿ ಲಕ್ಷಣ, ಮಂಜುನಾಥ್. ಚಂದ್ರಶೇಖರ್, ಮಹೇಶ್, ಅನ್ವರ್, ಸತೀಶ್, ಜೈಕುಮಾರ್, ಮತ್ತಿತರರು ಹಾಜರಿದ್ದರು.
Sasinettu protest at rural bus stand