ಬೀರೂರು: ಕಾಫಿನಾಡಿನಲ್ಲಿ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ತಾಲ್ಲೂಕಿನ ಜೀವನಾಡಿ ಮದಗದಕೆರೆಯು ಶುಕ್ರವಾರ ಮೈದುಂಬಿ ಹಾಲ್ನೊರೆಯಂತೆ ಹರಿಯುತ್ತಿರುವುದು ರೈತರ ಮೊಗದಲ್ಲಿ ಹರ್ಷಮೂಡಿಸಿದೆ.
ಮಲೆನಾಡು ಭಾಗಗಳಲ್ಲಿ ವರುಣನ ಆರ್ಭಟವು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದ ಪರಿಣಾಮ ಗಿರಿಶ್ರೇಣಿಗಳಲ್ಲಿ ಸುರಿದ ಮಳೆಯು ಮದಗದಕೆರೆಗೆ ತುಂಬಿಕೊಳ್ಳುವ ಮೂಲಕ ಹೊಸ ನೀರಿನ ಸೆಲೆಯು ಕೆರೆಯ ಕೋಡಿಯು ವಾಡಿಕೆಯಂತೆ ಕುತುಹೂಲ ಹೆಚ್ಚಿಸಿಕೊಂಡಿದ್ದ ರೈತರಿಗೆ ಶುಕ್ರವಾರ ಬೆಳಗ್ಗಿನ ಜಾವ ಕೆರೆ ತುಂಬಿ ಕೋಡಿ ಕಟ್ಟೆಯ ಮೇಲ್ಬಾಗದ ಎರಡು ಅಡಿ ಎತ್ತರದಷ್ಟು ನೀರು ಹಾಲಿನಂತೆ ಹರಿಯಲಾರಂಭಿಸಿದೆ.
೬೫ ಅಡಿ ಸಾಮಾರ್ಥ್ಯವನ್ನು ಹೊಂದಿರುವ ಕೆರೆಯು ಕಡೂರು-ಬೀರೂರು ಒಳಗೊಂಡ ತಾಲ್ಲೂಕಿನ ಸುಮಾರು ೫ ಸಾವಿರ ಎಕರೆ ಪ್ರದೇಶಗಳಿಗೆ ನೀರಾವರಿ ಸೌಲಭ್ಯ ಸಿಗುವ ಮದಗಕೆರೆಗೆ ರೈತರ ಆನಂದವನ್ನು ಹೆಚ್ಚಿಸಿದೆ. ಬಹುತೇಕ ಮಂಗಳವಾರ ಅಥವಾ ಶುಕ್ರವಾರ ಕೆರೆ ಕೋಡಿ ಬೀಳುವುದು ಇಲ್ಲಿನ ವಿಶೇಷವಾಗಿದೆ. ಈ ಬಾರಿಯೂ ಮುಂದುವರಿದೆ.
ಕೆರೆಯ ನೀರು ತುಂಬಿ ರಾಜಕಾಲುವೆಗಳ ಮೂಲಕ ೪೦ಕ್ಕು ಹೆಚ್ಚು ಸರಣಿ ಆಶ್ರಿತ ಕೆರೆಗಳಿಗೆ ಹರಿದು ಹೋಗುತ್ತಿದ್ದು, ಜಮೀನು ತೋಟಗಳಿಗೆ ಸಮೃದ್ದಿ ಮಳೆಯ ವಾತಾವರಣದ ಅನುಭವವಾಗುತ್ತಿದೆ. ಗ್ರಾಮೀಣ ಭಾಗದ ತಗ್ಗುಪ್ರದೇಶದ ಜಮೀನುಗಳು ಜಲಾವೃತಗೊಂಡಿದೆ. ನೀರಿನ ರಭಸವನ್ನು ಮತ್ತಷ್ಟು ಹೆಚ್ಚಿದರೆ. ಹಳೆ ಮದಗದಕೆರೆ ಭಾಗದ ತಗ್ಗು ಪ್ರದೇಶದ ರಸ್ತೆಗಳ ಮೇಲೆ ಹರಿಯಲಾರಂಭಿಸಲಿದೆ. ಇನ್ನು ಗದ್ದೆ ಬಯಲು ರಸ್ತೆ, ಹೊಗರೆಹಳ್ಳಿ ಮಾರ್ಗದ ರಸ್ತೆ ಸೇರಿದಂತೆ ಬುಕ್ಕಸಾಗರ ಕೆರೆಯ ಚಾನೆಲ್ ರಸ್ತೆಗಳಲ್ಲಿ ಕಚ್ಚಾರಸ್ತೆಗಳಾಗಿ ಸಂಚಾರಕ್ಕೆ ವ್ಯತ್ಯಯವಾಗಲಿದೆ.
ಕೋಡಿ ಹರಿಯುತ್ತಿರುವ ಕೆರೆಯ ನೀರಿನ ದೃಶ್ಯವನ್ನು ಕಣ್ತುಂಬಿಕೊಳ್ಳಲು ಜನದಟ್ಟಣೆ ಹೆಚ್ಚಳವಾಗುವ ಸಾಧ್ಯತೆ ಹಿನ್ನಲೆಯಲ್ಲಿ ಕೆರೆಯ ಸುತ್ತಮುತ್ತಲ ಪರಿಸರದಲ್ಲಿ ಸಾರ್ವಜನಿಕರು ಹೆಚ್ಚು ಜಾಗೃತಿ ವಹಿಸುವಂತೆ ಹಾಗೂ ಜಾನುವಾರುಗಳನ್ನು ಬಿಡದಂತೆ ಈಗಾಗಲೇ ತಾಲ್ಲೂಕು ಆಡಳಿತ ಪ್ರಕಟಣೆಯ ಮೂಲಕ ಸೂಚನೆ ನೀಡಿದೆ.
ಆದರೂ ಕೆರೆಯ ಸೊಬಗನ್ನು ನೋಡಲು ವಾರಂತ್ಯದಲ್ಲಿ ಲಗ್ಗೆ ಇಡುವ ಯುವಕರುಗಳ ದಂಡು ಮೊಬೈಲ್ನಲ್ಲಿನ ಸೆಲ್ಫಿಗಳ ಹುಚ್ಚಾಟಗಳ ನಡೆಸುವ ಸಾಧ್ಯತೆಗಳು ಮತ್ತು ಮೋಜುಮಸ್ತಿಯ ತಾಣವಾಗಿಸಿಕೊಳ್ಳುವ ಸಾಧ್ಯತೆಗಳಿದ್ದು, ಈ ಹಿನ್ನಲೆಯಲ್ಲಿ ಕೆರೆಯ ಭಾಗದಲ್ಲಿ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಿದರೆ ಕೆರೆಯ ಪರಿಸರವನ್ನು ಕಾಪಾಡಲು ಹಾಗೂ ಹೆಚ್ಚು ಜಾಗೃತಿ ವಹಿಸಲು ಸಾಧ್ಯವಾಗಲಿದೆ ಎಂಬುದು ಈ ಭಾಗದ ಗ್ರಾಮಸ್ಥರ ಒತ್ತಾಯವಾಗಿದೆ.
ಇನ್ನು ತಾಲ್ಲೂಕಿನಾದ್ಯಂತ ಜಿಟಿಜಿಟಿ ಮಳೆಯ ವಾತಾವರಣ ಮುಂದುವರೆದಿದ್ದು. ದಿನವೀಡಿ ಸೋನೆ ಮಳೆ ಸುರಿಯುತ್ತಿರುವ ಹಿನ್ನಲೆಯಲ್ಲಿ ಮೋಡಕವಿದು ಶುಕ್ರವಾರ ದಿನವಿಡೀ ಮಳೆ ಸುರಿದ ಹಿನ್ನಲೆ ಮಲೆನಾಡಿನ ಥಂಡಿ ವಾತಾವರಣ ಸೃಷ್ಟಿಯಾಗಿಸಿದೆ.
ಜಿಲ್ಲೆಯ ಬಯಲುಸೀಮೆ ತಾಲ್ಲೂಕು ಹೊರತುಪಡಿಸಿ ಮಲೆನಾಡು ಭಾಗದ ೬ ತಾಲ್ಲೂಕಗಳಲ್ಲಿ ಶಾಲಾ-ಅಂಗನವಾಡಿ ಮಕ್ಕಳಿಗೆ ಶುಕ್ರವಾರವು ಮುಂದೂಡಿದ ರಜೆ ಘೋಷಣೆಗೆ ಕಡೂರು ತಾಲ್ಲೂಕಿಗೂ ಅನ್ವಯವಾಗಬಹುದೆಂಬ ಎಂಬ ಆಶಾಭಾವನೆ ಹೊಂದಿದ್ದ ಪೋಷಕರ ವಲಯದಲ್ಲಿ ನಿರಾಸೆ ಉಂಟಾಗಿ ಬಯಲುಸೀಮೆ ಭಾಗದ ಶಾಲಾ ಮಕ್ಕಳ ಆರೋಗ್ಯದ ಬಗ್ಗೆಯೂ ಕಾಳಜಿ ಹೊಂದದಿರುವ ಶಿಕ್ಷಣ ಇಲಾಖೆಯ ಅಧಿಕಾರಿಗಳ ವಿರುದ್ದ ಪೋಷಕರು ಅಸಮಾಧಾನವ್ಯಕ್ತಪಡಿಸಿದರು.
ಮಳೆಯ ಪ್ರಮಾಣವು ದಿನದಿಂದ ದಿನಕ್ಕೆ ತಾಲ್ಲೂಕಿನಲ್ಲಿ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಕಡೂರು-ಬೀರೂರು ಶೈಕ್ಷಣಿಕ ವಲಯದ ಶಾಲಾ ಮಕ್ಕಳಿಗೆ ರಜೆ ನೀಡುವಲ್ಲಿ ಅಧಿಕಾರಿಗಳು ಮೀನಾಮೇಷ ಎಣಿಸುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಆದರೆ ಶುಕ್ರವಾರದ ಸೋನೆ ಮಳೆಯ ಪರಿಸ್ಥಿತಿಯು ಮುಂದುವರೆದಿದ್ದು, ಮಳೆಯಲ್ಲಿಯೇ ಮಕ್ಕಳನ್ನು ಶಾಲೆಗೆ ಕಳುಹಿಸಬೇಕಾದ ಪರಿಸ್ಥಿತಿ ಪೋಷಕರಿಗೆ ಎದುರಾಯಿತು.
ತಾಲ್ಲೂಕಿನಲ್ಲಿ ಮಳೆಗೆ ಡೆಂಗ್ಯೂ ಮತ್ತಿತರ ಸಾಂಕ್ರಾಮಿಕ ರೋ ಗಗಳು ಹೆಚ್ಚುತ್ತಿರುವ ಪರಿಣಾಮ ಮಳೆ ಒಡೆತದ ಜೊತೆ ಮಕ್ಕಳ ಆರೋಗ್ಯದ ಕಡೆ ಗಮನ ಹರಿಸಲಿ , ರೋ ಗಗಳು ಮಕ್ಕಳಿಗೇಬಾದರೂ ತಗುಲಿದರೆ ಕೂಲಿದ ಸಮಯದಲ್ಲಿ ನಮ್ಮ ಪಾಡೇನು ಎಂದು ಕೆಲವು ಪೋಷಕರು ಪತ್ರಿಕೆಗೆ ಅಳಲು ತೋಡಿಕೊಂಡಿದ್ದು ಇಂತಹ ಪರಿಸ್ಥಿತಿಗೆ ತಕ್ಕಂತೆ ಕ್ರಮ ಕೈಗೊಳ್ಳವೇಕೆಂದು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದರು.
Madagada Lake is the lifeline of the plains