ಚಿಕ್ಕಮಗಳೂರು: ರೈತರು, ಕಾರ್ಮಿಕರು, ಮಹಿಳೆಯರು ಹಾಗೂ ಶೋಷಿತರಿಗೆ ನ್ಯಾ ಯ ಒದಗಿಸುವ ನಿಟ್ಟಿನಲ್ಲಿ ದಿ|| ಬಿ.ಕೆ.ಸುಂದರೇಶ್ರವರು ಚಳುವಳಿ ಹಮ್ಮಿಕೊಂಡು ಸರ್ಕಾರದ ತೀರ್ಮಾ ನಗಳ ವಿರುದ್ಧ ಹೋರಾಟಕ್ಕೆ ಮುಂದಾಗಿದ ಜನನಾಯಕ ಎಂದು ಕೆಪಿಸಿಸಿ ವಕ್ತಾರ ಹೆಚ್.ಹೆಚ್. ದೇವರಾಜ್ ಹೇಳಿದರು.
ನಗರದ ಜಿಲ್ಲಾ ಸಿಪಿಐ ಕಚೇರಿಯಲ್ಲಿ ದಿ|| ಬಿ.ಕೆ.ಸುಂದರೇಶ್ ಜನ್ಮದಿನದ ಅಂಗವಾಗಿ ವಿವಿಧ ಪಕ್ಷ ಹಾಗೂ ಪ್ರಗತಿಪರ ಮುಖಂಡರ ನೇತೃತ್ವದಲ್ಲಿ ಸೋಮವಾರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾ ಡಿದ ಅವರು ಸಮಾಜದ ಒಳಿತಿಗೆ ಜೀವನವನ್ನೇ ಮುಡಿಪಿಟ್ಟವರು ಎಂದು ಬಣ್ಣಿಸಿದರು.
ಜನಪರ ನಾಯಕನ್ನು ಕಳೆದುಕೊಂಡ ಸಮಾಜ ಸೈದ್ದಾಂತಿಕ ಹಾಗೂ ಸಂಘಟನಾತ್ಮಕವಾಗಿ ಹಿಂದುಳಿ ದಿದೆ. ಪ್ರತಿಯೊಬ್ಬರ ಜೊತೆಗೆ ಉತ್ತಮ ಒಡನಾಟ ಹೊಂದಿದ್ದ ಸುಂದರೇಶ್ ಮಾನವೀಯ ಧರ್ಮ ಹಾಗೂ ಮೌಲ್ಯ ಅಳವಡಿಸಿಕೊಂಡು ಸಮಾಜಕ್ಕೆ ಮಾದರಿಯಾಗಿ ಜೀವಿಸಿದವರು ಎಂದರು.
ಜಿಲ್ಲೆಯ ಜ್ವಲಂತ ಸಮಸ್ಯೆಗಳು ಹಾಗೂ ಕಾರ್ಮಿಕರು, ಶೋಷಿತರ ಧ್ವನಿಯನ್ನು ಎತ್ತಿಹಿಡಿದು ನ್ಯಾಯ ಕ್ಕಾಗಿ ಹೋರಾಡಿದ ಸುಂದರೇಶ್ರನ್ನು ಕಳೆದುಕೊಂಡ ಜಿಲ್ಲೆ ತಬ್ಬಲಿಯಾಗಿದೆ. ಪ್ರಸ್ತುತ ನಮ್ಮೊಂದಿಗೆ ಜೀವಂ ತವಾಗಿದ್ದರೆ ರಾಜ್ಯಕಂಡ ಅಪರೂಪದ ವ್ಯಕ್ತಿಯಾಗಿ ಹಾಗೂ ಬಡವರ ಆಸರೆಯಾಗಿ ಇರುತ್ತಿದ್ದರು ಎಂದರು.
ನೇರ, ದಿಟ್ಟ ಹಾಗೂ ಸಮಯಪ್ರಜ್ಞೆ ಜೀವನದಲ್ಲಿ ಅಳವಡಿಸಿಕೊಂಡು ಇತರರಿಗೆ ಮಾದರಿಯಾಗಿದ್ದ ಬಿ.ಕೆ.ಎಸ್. ವಿಚಾರಧಾರೆಗಳು ಸರ್ವಜನಾಂಗ ಒಪ್ಪುವಂತಾಗಿತ್ತು. ಕಾರ್ಮಿಕರ ಸಮಸ್ಯೆಗಳಿಗೆ ಕಾಲ್ನಡಿಗೆ ಜಾಥಾ ಹಮ್ಮಿಕೊಂಡ ವೇಳೆಯಲ್ಲಿ ರಾಜಕಾರಣಿ, ಬಲಾಡ್ಯರಿಂದ ಆಪತ್ತು ಎಂಬ ವಿಷಯ ಅರಿತಿದ್ದರು ಯಾ ವುದಕ್ಕೂ ಜಗ್ಗದೇ ಮುನ್ನುಗಿದ್ದರು ಎಂದು ತಿಳಿಸಿದರು.
ಸಿಪಿಐ ರಾಜ್ಯಸಭಾ ಮಂಡಳಿ ಸದಸ್ಯ ಹೆಚ್.ಎಂ.ರೇಣುಕಾರಾಧ್ಯ ಮಾತನಾಡಿ ಸಮಾಜದಲ್ಲಿ ಮಕ್ಕ ಳಿಗೆ ಗುಣಮಟ್ಟದ ವಿದ್ಯಾಭ್ಯಾಸ, ಸಮವಸ್ತ್ರ ಧರಿಸಬೇಕು ಎಂಬ ಆಲೋಚನೆ ಅವರಲ್ಲಿತ್ತು. ಅವರನ್ನು ಕಳೆದು ಕೊಂಡು ಮೂರು ದಶಕಗಳು ಕಳೆದರೂ ಸ್ಮರಿಸುವ ಗುಣವಿದೆ ಎಂದಾದರೆ, ಅವರ ಸಾಧನೆಗಳು ಎಷ್ಟಿರಬ ಹುದು ಎಂದು ಚಿಂತಿಸಬೇಕಿದೆ ಎಂದರು.
ಬಿ.ಎಸ್.ಪಿ. ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ ಮಾತನಾಡಿ ಸುಂದರೇಶ್ ಒಂದು ಹೆಸರಲ್ಲ, ಶಕ್ತಿ, ಅವರ ಹೋರಾಟದ ಸ್ಪೂರ್ತಿಯಿಂದ ಅನೇಕರು ಸಮಾಜಮುಖಿ ಕಾರ್ಯದಲ್ಲಿ ಗುರುತಿಸಿಕೊಂಡಿದ್ದಾರೆ. ಜಾತಿ ತಾರತಮ್ಯ ವಿರುದ್ಧ ಹೋರಾಡಿದ ಜೊತೆಗೆ ಪ್ರತಿ ಕುಟುಂಬಗಳು ಆರ್ಥಿಕವಾಗಿ ಸರಿಸಮಾನಾದರೆ ಮಾತ್ರ ಜಾತಿವಾದಕ್ಕೆ ಕಡಿವಾಣ ಹಾಕಲು ಸಾಧ್ಯ ಎಂದು ನಂಬಿದ ಮಹಾಚೇತನ ಎಂದು ಬಣ್ಣಿಸಿದರು.
ಈ ಸಂದರ್ಭದಲ್ಲಿ ಸಿಪಿಐ ಜಿಲ್ಲಾ ಕಾರ್ಯದರ್ಶಿ ರಾಧಾಸುಂದರೇಶ್, ಸಹಾಯಕ ಕಾರ್ಯದರ್ಶಿ ಜಿ.ರಘು, ತಾಲ್ಲೂಕು ಅಧ್ಯಕ್ಷ ಸಿ.ವಸಂತ್ಕುಮಾರ್, ಕಾರ್ಯದರ್ಶಿ ಸೋಮೇಗೌಡ, ಮುಖಂಡರುಗಳಾದ ಹೆಚ್.ಎಸ್.ಮಂಜಪ್ಪ, ವಿಜಯ್ಕುಮಾರ್, ಗುಣಶೇಖರ್, ಜಾನಕಿ ಮತ್ತಿತರರು ಉಪಸ್ಥಿತರಿದ್ದರು.
BK Sundaresh Birthday Celebration at District CPI Office