ಚಿಕ್ಕಮಗಳೂರು: ದೇಶದ ಅಂಗ ರಕ್ಷಕರು ಯೋಧರು, ದೇಶವನ್ನೇ ತಮ್ಮ ದೇಹ ಎಂದು ಭಾವಿಸಿ ಕಾಪಾಡುವ ಅವರ ಸೇವೆಯ ಕುರಿತ ಮಂಜುಳಾ ಹುಲ್ಲಳ್ಳಿಯವರ ಅನುವಾದಿತ ಕೃತಿ ಸಾರ್ಥಕವಾದದ್ದು ಎಂದು ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್ ತಿಳಿಸಿದರು.
ಅವರು ನಗರದ ಪ್ರಜಾಪಿತ ಭ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಜ್ಞಾನ ಪ್ರಕಾಶ ಭವನದಲ್ಲಿ ಪ್ರಸನ್ನ ಇಂಟರ್ನ್ಯಾಷನಲ್ಸ್ ಮೈಸೂರು, ಜಿಲ್ಲಾ ಮಾಜಿ ಯೋಧರ ಸಂಘ ಹಾಗೂ ಪ್ರಜಾಪಿತ ಭ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಯುವಜನ ಸೇವಾ ಕ್ರೀಡಾ ಇಲಾಕೆ
ಉಪನಿರ್ದೇಶಕಿ ಮಂಜುಳಾ ಹುಲ್ಲಳ್ಳಿ ಅವರ ಅನುವಾದಿತ ಕೃತಿ ಹಮಾರೆ ಗೌರವಶಾಲಿ ಯೋದ್ಧ್ ಹಾಗೂ ನಮ್ಮ ಹೆಮ್ಮೆಯ ಯೋಧ ಮರುಮುದ್ರಣ ಕೃತಿಗಳನ್ನು ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.
ಯೋಧರ ಬಗ್ಗೆ ಬರೆದಿರುವ ಸಾಹಿತ್ಯ ಕರುಳು, ಹೃದಯವನ್ನು ಹಿಂಡುವಂತಿದೆ. ಬಹುದೊಡ್ಡ ಸ್ಥಾನದಲ್ಲಿದ್ದು, ಸರ್ಕಾರಿ ಸೇವೆಯಿಂದ ನಿವೃತ್ತರಾದರೂ ಯೋಧರ ಬಗ್ಗೆ ಉತ್ತಮ ಕೃತಿ ರಚಿಸಿದ್ದಾರೆ. ಮಂಜುಳಾ ಅವರು ಸಾಹಿತ್ಯ ಕ್ಷೇತ್ರಕ್ಕೆ ಮಂಗಳವನ್ನು ನೀಡಿದ್ದಾರೆ ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಲೆಫ್ಟಿನೆಂಟ್ ಜನರಲ್ ಬಗ್ಗವಳ್ಳಿ ಸೋಮಶೇಖರ್ ರಾಜು ಮಾತನಾಡಿ, ಯೋಧರ ಕುರಿತಾಗಿ ರಚಿಸಿರುವ ಮಂಜುಳಾ ಹುಲ್ಲಳ್ಳಿ ಅವರ ಕೃತಿ ಆಸಕ್ತಿದಾಯಕವಾದದ್ದು ಪ್ರತಿಯೊಬ್ಬರೂ ಅದನ್ನು ಕೊಂಡು ಓದಬೇಕು.
ಯೋಧರಿಗಿರುವ ಗೌರವವನ್ನು ಪುಸ್ತಕ ಮಾಧ್ಯದ ಮೂಲಕ ಎಲ್ಲರ ಮುಂದೆ ತಂದಿರುವುದು ಹೆಮ್ಮೆ ವಿಚಾರ. ದೇಶಕ್ಕಾಗಿ ಹೋರಾಡಿದ ಅಪ್ರತಿಮ ಯೋಧರ ಬಗ್ಗೆ ಮಕ್ಕಳಿಗಾಗಿ ಕಾಮಿಕ್ಸ್ ರೂಪದ ಕೃತಿಗಳೂ ಬಂದಿವೆ. ವಿದ್ಯಾರ್ಥಿಗಳು ಸಹ ಉನ್ನತ ವ್ಯಾಸಂಗ ಗಳಿಸಿ ಇಂಜಿನೀಯರ್, ವೈದ್ಯರು ಏನು ಬೇಕಾದರೂ ಆಗಲು ಸಾಧ್ಯವಿದೆ. ಆದರೆ ಸೇನೆಯಲ್ಲಿ ಸೇವೆ ಸಲ್ಲಿಸುವ ಅವಕಾಶ ಎಲ್ಲರಿಗೂ ಸಿಗುವುದಿಲ್ಲ. ಅಂತಹ ಅವಕಾಶ ಸಿಕ್ಕರೆ ಅದುಪಯೋಗಪಡಿಸಿಕೊಳ್ಳಬೇಕು ಎಂದರು.
ಕೃತಿಗಳ ಕತೃ ಮಂಜುಳಾ ಹುಲ್ಲಳ್ಳಿ ಅವರನ್ನು ಗೌರವಿಸಲಾಯಿತು. ರಾಜಯೋಗಿನಿ ಬಿ.ಕೆ.ಭಾಗ್ಯಕ್ಕ ಅಧ್ಯಕ್ಷತೆ ವಹಿಸಿದ್ದರು. ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಪ್ರತಿನಿಧಿ ಎಚ್.ಡಿ.ಸುರೇಶ್ ಸ್ವಾಗತಿಸಿದರು. ಕೃತಿಯ ಹಿಂದಿ ಅನುವಾದಕರಾದ ಡಾ.ಜಿ.ಎಸ್.ದೇವಕಿ ಪ್ರಸನ್ನ, ಭಾರತ ಸರ್ಕಾರದ ವಾರ್ತಾ ಮತ್ತು ಪ್ರಚಾರ ಸಚಿವಾಲಯದ ಉಪ ನಿರ್ದೇಶಕಿ ಡಾ.ಟಿ.ಸಿ.ಪೂರ್ಣಿಮಾ, ಜಿಲ್ಲಾ ಮಾಜಿ ಯೋಧರ ಸಂಘದ ಅಧ್ಯಕ್ಷ ಕ್ಯಾ. ಸಿ.ಎಸ್.ಮಂಜುನಾಥ್, ಸಂಸ್ಕೃತಿ ಚಿಂತಕ ಎಚ್.ಎಸ್.ಸತ್ಯನಾರಾಯಣ್, ಯೋಧ ಕೆ.ವೈ.ಕಮಲೇಶ್ಗೌಡ ಉಪಸ್ಥಿತರಿದ್ದರು.
Presentation of Manjula Hullalli’s translated works