ಚಿಕ್ಕಮಗಳೂರು: ರಾಜ್ಯದ ಮುಖ್ಯಮಂತ್ರಿ ಹಾಗೂ ಅಹಿಂದಾ ನಾಯಕ ಸಿದ್ದರಾಮ ಯ್ಯನವರ ೭೭ನೇ ಹುಟ್ಟುಹಬ್ಬವನ್ನು ಬ್ಲಾಕ್ ಕಾಂಗ್ರೆಸ್ ನೇತೃತ್ವದಲ್ಲಿ ಕಾರ್ಯಕರ್ತರು ತಾಲ್ಲೂಕು ಕಚೇರಿ ಸಮೀಪ ಗಣಪತಿ ದೇವಾಲಯದಲ್ಲಿ ಶನಿವಾರ ವಿಶೇಷ ಪೂಜೆ ಸಲ್ಲಿಸಿ ಧೀರ್ಘಾಯುಷ್ಯ ಲಭಿಸಲಿ ಎಂದು ಪ್ರಾರ್ಥಿಸಿದರು.
ಬಳಿಕ ಮಾತನಾಡಿದ ಶಾಸಕ ಹೆಚ್.ಡಿ.ತಮ್ಮಯ್ಯ ರೈತರು, ಅಲ್ಪಸಂಖ್ಯಾತರು ಹಾಗೂ ದೀನದಲಿತರ ಶ್ರೇಯೋಭಿವೃದ್ದಿ ಶ್ರಮಿಸುತ್ತಿರುವ ಸಿದ್ದರಾಮಯ್ಯನವರು ವೈಯಕ್ತಿಕ ಬದುಕಿಗಿಂತ ರಾಜ್ಯದ ಜನತೆಯ ಹಿತ ವನ್ನು ಕಾಪಾಡುವಲ್ಲಿ ಹೋರಾಡಿ, ನುಡಿದಂತೆ ನಡೆದ ಅಪರೂಪದ ನಾಯಕರು ಎಂದು ಹೇಳಿದರು.
ದೇಶದ ಯಾವುದೇ ರಾಜ್ಯಗಳಲ್ಲಿ ಘೋಷಿಸಿದ ಪಂಚ ಗ್ಯಾರಂಟಿಗಳನ್ನು ಅನುಷ್ಟಾನಕ್ಕೆ ತರುವ ಮೂಲಕ ಬಡವರ ಏಳಿಗೆಗೆ ದುಡಿದಿದ್ದಾರೆ. ಸಿದ್ದರಾಮಯ್ಯ ಇಡೀ ದೇಶದಲ್ಲೇ ಮೆಚ್ಚಿನ ಮುಖ್ಯಮಂತ್ರಿ ಎಂಬ ಹೆಸರು ಪಡೆದುಕೊಂಡಿರುವ ರಾಜಕಾರಣಿ ದುರೀಣ ಎಂದು ಬಣ್ಣಿಸಿದರು.
ರಾಜ್ಯದ ಬಡವರ ಸಂಕಷ್ಟವನ್ನು ಹಿಂದಿನಿಂದಲೂ ಅರಿತಿದ್ಧ ಸಿದ್ದರಾಮಯ್ಯನವರು ರಾಜ್ಯಸರ್ಕಾರ ರಚನೆಗೊಂಡ ಕೇವಲ ತಿಂಗಳಲ್ಲಿ ಗೃಹಲಕ್ಷ್ಮೀ, ಗೃಹಜ್ಯೋತಿ, ಯುವನಿಧಿ, ಉಚಿತ ಪ್ರಯಣ ಹಾಗೂ ಅನ್ನ ಭಾಗ್ಯವನ್ನು ಕರುಣಿಸಿ ಮನೆಮಗನಂತೆ ಸೇವೆ ಸಲ್ಲಿಸಿರುವ ನಾಯಕರನ್ನು ಎಂದಿಗೂ ಜನತೆ ಮರೆಯುವು ದಿಲ್ಲ ಎಂದು ತಿಳಿಸಿದರು.
ಈ ನಡುವೆ ವಿರೋಧ ಪಕ್ಷದ ಮುಖಂಡರುಗಳು ದಿನದಿಂದ ದಿನಕ್ಕೆ ಸುಳ್ಳು ಆರೋಪವೆಸಗಿ ಅಧಿ ಕಾರದಿಂದ ಕೆಳಗಿಳಿಸಲು ಶತಪ್ರಯತ್ನ ಮಾಡುತ್ತಿವೆ, ಅಧಿವೇಷನದಲ್ಲೂ ಸುಳ್ಳಿನ ಆರೋಪವಿಟ್ಟು ಸಭೆಯನ್ನು ನಡೆಸುತ್ತಿಲ್ಲ. ಆದರೆ ವಿರೋಧಿಗಳು ಸುಳ್ಳಿನ ಸರಮಾಲೆ ಹೊತ್ತಿರುವ ಕಾರಣ ಅವರ ಷಡ್ಯಂತ್ರದ ಆಸೆಗೆ ತಣ್ಣಿ ರು ಬೀಳಲಿದೆ ಎಂದು ಟೀಕಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಪಿ.ಮಂಜೇಗೌಡ ಮಾತನಾಡಿ ಜಾತ್ಯಾತೀತ ನಿಲುವು, ಬಡವರ ಪರ ಕಾಳಜಿ ಹೊಂದಿರುವ ನೆಚ್ಚಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಶತಾಯುಷಿಗೊಳ್ಳಲಿ ಎಂದು ಪ್ರಾರ್ಥನೆ ಸಲ್ಲಿಸಲಾಗಿದೆ. ಮುಂದಿನ ದಿನದಲ್ಲೂ ಜನಪರ ಸೇವೆ ಒದಗಿಸುವ ಶಕ್ತಿ ಭಗವಂತ ಕರುಣಿಸಲಿ ಎಂದು ಶುಭ ಕೋರಿದರು.
ಸಿದ್ದರಾಮಯ್ಯನವರ ಏಳಿಗೆ ಸಹಿಸಿಕೊಳ್ಳದೇ ಕೆಲವರು ಸುಖಸುಮ್ಮನೆ ಆರೋಪ, ಟೀಕೆ-ಟಿಪ್ಪಣಿಗಳು ಮಾಡುತ್ತಿವೆ. ಈ ಬಗ್ಗೆ ಕಾರ್ಯಕರ್ತರು ಕಿವಿಕೊಡದೇ ಸಿದ್ದರಾಮಯ್ಯ ಸರ್ಕಾರದ ಯೋಜನೆಗಳು, ಗ್ಯಾರಂ ಟಿಗಳನ್ನು ಸಮಾಜಕ್ಕೆ ಮುಟ್ಟಿಸುವ ರೀತಿಯಲ್ಲಿ ಕಾರ್ಯೋನ್ಮುಖರಾಗಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯೆ ಗಾಯತ್ರಿಶಾಂತೇಗೌಡ, ಕೆಪಿಸಿಸಿ ಪ್ರಧಾನ ಕಾರ್ಯ ದರ್ಶಿ ಡಾ|| ಡಿ.ಎಲ್.ವಿಜಯ್ಕುಮಾರ್, ಸಿಡಿಎ ಅಧ್ಯಕ್ಷ ಮೊಹಮ್ಮದ್ ನಯಾಜ್, ಜಿ.ಪಂ. ಮಾಜಿ ಅಧ್ಯಕ್ಷೆ ರೇಖಾಹುಲಿಯಪ್ಪಗೌಡ, ಗ್ಯಾರಂಟಿ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಎಂ.ಸಿ.ಶಿವಾನಂದಸ್ವಾಮಿ, ನಗರಸಭೆ ಸದಸ್ಯ ಲಕ್ಷ್ಮಣ್, ಮುಖಂಡರಾದ ಕೆ.ಎಸ್.ಶಾಂತೇಗೌಡ, ಪುಟ್ಟೇಗೌಡ, ಕೆ.ವಿ.ಮಂಜುನಾಥ್, ಮಲ್ಲೇಶ ಸ್ವಾಮಿ, ಆನ್ಸರ್ಆಲಿ, ಪ್ರಕಾಶ್ ರೈ, ವಾಸೀಮ್, ಮಧು, ಸಂತೋಷ್ ಲಕ್ಯಾ ಮತ್ತಿತರರು ಹಾಜರಿದ್ದರು.
Siddaramaiah’s 77th birthday celebration by Bloc Congress workers