ಚಿಕ್ಕಮಗಳೂರು: ರೈತರಿಗೆ ಯಾವುದೇ ಜಾತಿ ಮತ್ತು ಪಕ್ಷ ಇರುವುದಿಲ್ಲ ರೈತರೆಲ್ಲರೂ ಒಂದೇ ಜಾತಿ, ಒಂದೇ ಪಕ್ಷ ಎಂದು ಶಾಸಕ ಹೆಚ್.ಡಿ ತಮ್ಮಯ್ಯ ಅಭಿಪ್ರಾಯಿಸಿದರು.
ಇಂದು ಚಿಕ್ಕಮಗಳೂರು ತಾಲ್ಲೂಕಿನ ಕಳಸಾಪುರ ಹಿರೇಕೆರೆಗೆ ಬಾಗಿನ ಅರ್ಪಿಸಿ ಮಾತನಾಡಿದ ಅವರು. ಪ್ರಕೃತಿ ದೇವಿಯ ಕೃಪೆಯಿಂದಾಗಿ ಎಲ್ಲಾ ಕಡೆ ಉತ್ತಮವಾಗಿ ಮಳೆಯಾಗುತ್ತಿರುವುದರಿಂದ ರೈತರು ಖುಷಿಯಾಗಿದ್ದಾರೆ. ಉತ್ತಮ ಮಳೆ, ಉತ್ತಮ ಬೆಳೆ, ಬೆಳೆಗೆ ತಕ್ಕಂತೆ ಉತ್ತಮ ಬೆಲೆ ಸಿಗಲಿ ಎಂದು ದೇವರಲ್ಲಿ ಬೇಡಿಕೊಳ್ಳುತ್ತೇನೆ. ಈ ವರ್ಷ ಪ್ರಕೃತಿ ದತ್ತವಾಗಿ ಉತ್ತಮ ಮಳೆಯಾಗಿದ್ದು, ಮುಂದಿನ ದಿನಗಳಲ್ಲಿ ಕಳಸಾಪುರ ಕೆರೆಯಿಂದ ತಿಮ್ಮಪ್ಪರಾಯನ ಕೆರೆ, ಈಶ್ವರಹಳ್ಳಿ ಕೆರೆ, ಬೆಳವಾಡಿ ಕೆರೆ ತುಂಬುವ ಭರವಸೆ ಇದೆ ಎಂದರು.
ಲಕ್ಯಾ ಹೋಬಳಿಯ ಅನೇಕ ರೈತರು ಮಳೆಯ ಅಭಾವದಿಂದಾಗಿ ತೆಂಗು ಮತ್ತು ಅಡಿಕೆ ತೋಟಗಳನ್ನು ಕಳೆದುಕೊಂಡು ನಷ್ಟ ಅನುಭವಿಸಿ ಊರು ಬಿಡುವ ಪರಿಸ್ಥಿತಿ ಇತ್ತು. ಕಳೆದ ಎರಡು ವರ್ಷಗಳಿಂದ ಉತ್ತಮ ಮಳೆಯಿಂದಾಗಿ ಕರಗಡದ ಮೂಲಕ ಮೋಟಾರ್ ಚಾಲನೆ ಮಾಡಿ ಈ ಭಾಗಕ್ಕೆ ನೀರು ಹಾಯಿಸಲಾಗುತ್ತಿದೆ. ಇದೀಗ ರೈತರು ಕೆರೆಯ ನೀರಿನ ಮೇಲಿನ ನಂಬಿಕೆಯಿಂದ ಮತ್ತೆ ತೋಟಗಳನ್ನು ನಿರ್ಮಿಸಲು ಮುಂದಾಗಿದ್ದಾರೆ. ಅವರ ಕನಸು ನನಸಾಗಲಿ ಎಂದು ಶುಭ ಹಾರೈಸಿದರು.
ಅನೇಕ ಹೋರಾಟಗಳ ಫಲವಾಗಿ ಕರಗಡ ಯೋಜನೆ ಯಶಸ್ವಿಯಾಗಿದೆ ಗ್ರಾವಿಟಿಯಲ್ಲಿ ನೀರು ಹರಿಸುವ ಬಗ್ಗೆ ಅನೇಕರು ಬೇಡಿಕೆ ಇಟ್ಟಿದ್ದಾರೆ. ಹಂತ ಹಂತವಾಗಿ ಈ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳ ಜೊತೆಗೆ ನೀರಾವರಿ ಯೋಜನೆಗಳ ಬಗ್ಗೆ ಚರ್ಚಿಸಿದ್ದು ಭದ್ರಾ ಉಪಕಣಿವೆ ಮೂರನೇ ಹಂತದ ಟೆಂಡರ್ ಪ್ರಕ್ರಿಯೆ ಸಿದ್ದವಾಗಿದೆ, ರಣಘಟ್ಟ ಯೋಜನೆ ಕಾಮಗಾರಿಯನ್ನು ನಿರ್ದಿಷ್ಠ ಸಮಯದಲ್ಲಿ ಮುಗಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ಗಾಯಿತ್ರಿ ಶಾಂತೇಗೌಡ ಮಾತನಾಡಿ ಮನುಷ್ಯ ಪ್ರಯತ್ನದ ಜೊತೆಗೆ ದೈವ ಪ್ರಯತ್ನದ ಫಲವಾಗಿ ಕೆರೆಗಳು ತುಂಬಿವೆ. ಕರಗಡ ಯೋಜನೆಗೆ ಸಿದ್ದರಾಮಯ್ಯ ಹಾಗೂ ಶಿವರಾಜ ತಂಗಡಿಗಿಯವರ ಕೊಡುಗೆ ಅನನ್ಯ. ಈ ಭಾಗದ ರೈತರಿಗೆ ನೀರಾವರಿ ಯೋಜನೆಗಳನ್ನು ನೀಡುವ ಭರವಸೆಯನ್ನು ಈಡೇರಿಸುವಂತೆ ಶಾಸಕರ ಸಮ್ಮುಖದಲ್ಲಿ ಮುಖ್ಯಮಂತ್ರಿಗಳ ಬಳಿ ಚರ್ಚಿಸಿದ್ದೇವೆ. ಮುಖ್ಯಮಂತ್ರಿಗಳು ಪೂರಕವಾಗಿ ಸ್ಪಂದಿಸಿದ್ದಾರೆ ಎಂದರು.
ಸಿದ್ದರಾಮಯ್ಯನವರ ಬಗ್ಗೆ ವಿರೋಧ ಪಕ್ಷಗಳು ಮಾಡುತ್ತಿರುವ ಆರೋಪಗಳು ಸತ್ಯಕ್ಕೆ ದೂರವಾಗಿದ್ದು. ಅವರುಗಳ ಆರೋಪಕ್ಕೆ ಮುಂದಿನ ದಿನಗಳಲ್ಲಿ ಜನರು ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.
ಜಿಲ್ಲಾಪಂಚಾಯತಿ ಮಾಜಿ ಅಧ್ಯಕ್ಷರಾದ ರೇಖಾ ಹುಲಿಯಪ್ಪಗೌಡ. ಕರಗಡ ಹೋರಾಟ ಸಮಿತಿಯ ರವೀಶ್ ಬಸಪ್ಪ, ಗುರುಶಾಂತಪ್ಪ, ರೇಣುಕಾರಾಧ್ಯ.ಅಚ್ಯುತ್ ರಾಯರು.ಕೆಂಗೇಗೌಡ, ಗ್ರಾಮ ಪಂಚಾಯತಿ ಅಧ್ಯಕ್ಷರಾದ ರಾಧ, ಸದಸ್ಯರುಗಳಾದ ಮೋಹನ್, ಯೋಗಿಶ್,ಅಮೀರ್. ಮುಖಂಡರುಗಳಾದ ಶಂಕರ್ ನಾಯಕ್.ತಿಮ್ಮೇಗೌq ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
MLA H. D. Thammaiah offering bag to Kalasapur Hirekere