September 10, 2024

ಬದುಕಿನಲ್ಲಿ ಯಶಸ್ವಿಯಾಗಬೇಕಾದರೆ ಉನ್ನತವಾದ ಗುರಿ ಹೊಂದಿರಬೇಕು

0

ಚಿಕ್ಕಮಗಳೂರು: ಯುವಜನತೆ ತಮ್ಮ ಬದುಕಿನಲ್ಲಿ ಯಶಸ್ವಿಯಾಗಬೇಕಾದರೆ ವಿದ್ಯಾರ್ಥಿ ದೆಸೆಯಲ್ಲೇ ಉನ್ನತವಾದ ಗುರಿ ಮತ್ತು ಉತ್ತಮವಾದ ಕನಸುಗಳನ್ನು ಹೊಂದಿರಬೇಕು ಎಂದು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮೊಹಮ್ಮದ್ ನಯಾಜ್ ಹೇಳಿದರು.

ನಗರದ ಮಲೆನಾಡು ವಿದ್ಯಾಸಂಸ್ಥೆಯಲ್ಲಿ ಶನಿವಾರ ನಡೆದ ಎಂ,ಎಸ್, ಪದ್ಮಾವತಮ್ಮ, ಎಂ,ಕೆ, ಸಾಂಬಶಿವ ಶೆಟ್ಟಿ ಪ್ರಥಮ ದರ್ಜೆ ಕಾಲೇಜಿನ ವಿವಿಧ ವಿದ್ಯಾರ್ಥಿ ಸಂಘಗಳ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಉನ್ನತವಾದ ಗುರಿ, ಅತ್ಯುತ್ತಮವಾದ ಕನಸುಗಳನ್ನು ಹೊಂದಿರುವ ವಿದ್ಯಾರ್ಥಿಗಳು ಮಾತ್ರ ಜೀವನದಲ್ಲಿ ಯಶಸ್ವಿಯಾಗುತ್ತಾರೆ, ವಿದ್ಯಾರ್ಥಿ ಜೀವನ ಬದುಕಿನ ಅತ್ಯಂತ ಪ್ರಮುಖವಾದ ಘಟ್ಟ, ಅದು ಮತ್ತೆ ಮತ್ತೆ ನಮ್ಮ ಬದುಕಿನಲ್ಲಿ ಬರುವುದಿಲ್ಲ, ಹಾಗಾಗಿ ಶ್ರದ್ಧೆ ಮತ್ತು ಪರಿಶ್ರಮದಿಂದ ವಿದ್ಯಾರ್ಜನೆ ಮಾಡಬೇಕು ಎಂದು ಕಿವಿ ಮಾತು ಹೇಳಿದರು.

ವಿದ್ಯಾರ್ಥಿಗಳು ತಮ್ಮ ಸರ್ವತೋಮುಖ ಬೆಳವಣಿಗೆಗಾಗಿ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ಭಾಗವಹಿಸಬೇಕು ಎಂದು ಸಲಹೆ ಮಾಡಿದರು.

ಮಲೆನಾಡು ವಿದ್ಯಾಸಂಸ್ಥೆಯ ಗೌರವ ಕಾರ್ಯದರ್ಶಿ ಡಾ, ಡಿ, ಎಲ್, ವಿಜಯಕುಮಾರ್ ಮಾತನಾಡಿ ವಿದ್ಯಾರ್ಜನೆಗೆ ಯಾವುದೇ ಕೊರತೆಯಾಗದಂತೆ ವಿದ್ಯಾರ್ಥಿಗಳಿಗೆ ಸಂಸ್ಥೆಯಲ್ಲಿ ಎಲ್ಲಾ ರೀತಿಯ ಸವಲತ್ತು, ಸೌಲಭ್ಯಗಳನ್ನೂ ಒದಗಿಸಲಾಗುತ್ತಿದ್ದು ವಿದ್ಯಾರ್ಥಿಗಳು ಅದನ್ನು ಸಮರ್ಪಕವಾಗಿ ಬಳಸಿಕೊಂಡು ಶಿಕ್ಷಣವಂತರಾಗಿ ಹೊರಹೊಮ್ಮ ಬೇಕು ಎಂದು ಹೇಳಿದರು.

ಕಾಲೇಜಿನ ವಾರ್ಷಿಕ ವರದಿಯನ್ನು ಮಂಡಿಸಿದ ಪ್ರಾಂಶುಪಾಲೆ ಹಸೀನಾ ಬಾನು ಕೇವಲ ಐದು ವಿದ್ಯಾರ್ಥಿಗಳಿಂದ ಆರಂಭಗೊಂಡಿದ್ದ ಕಾಲೇಜು ಇಂದು ಸಹಸ್ರಾರು ವಿದ್ಯಾರ್ಥಿಗಳ ಭವಿ?ವನ್ನು ರೂಪಿಸುತ್ತಿದ್ದು ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ತನ್ನದೇ ಆದ ಛಾಪನ್ನು ಹೊಂದಿದೆ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಮಲೆನಾಡು ವಿದ್ಯಾಸಂಸ್ಥೆಯ ಅಧ್ಯಕ್ಷ ಎನ್,ಕೇಶವಮೂರ್ತಿ, ವಿದ್ಯಾರ್ಥಿಗಳು ಹೆತ್ತವರು ಮತ್ತು ಕಾಲೇಜಿನ ಕೀರ್ತಿಯನ್ನು ಹೆಚ್ಚಿಸಬೇಕು ಎಂದು ಹೇಳಿದರು.

ಕಾಲೇಜಿನ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸಮಾರಂಭದಲ್ಲಿ ಪುರಸ್ಕರಿಸಿ, ಬಹುಮಾನ ನೀಡಲಾಯಿತು, ಸಿಡಿಎ ಅಧ್ಯಕ್ಷ ಮೊಹಮ್ಮದ್ ನಯಾಜ್ ಅವರನ್ನು ಸನ್ಮಾನಿಸಿ,ಅಭಿನಂದಿಸಲಾಯಿತು.

ಮಲೆನಾಡು ವಿದ್ಯಾಸಂಸ್ಥೆಯ ಉಪಾಧ್ಯಕ್ಷೆ ರಾಧಾ ಸುಂದರೇಶ್, ಪದ ನಿಮಿತ್ತ ಸದಸ್ಯ ಎಂ,ಎಸ್, ಮಂಜುನಾಥ್, ನಿರ್ದೇಶಕ ಕನಕ ರಾಜ್, ಶೈಕ್ಷಣಿಕ ಸಲಹೆಗಾರ ಪ್ರೊ, ಕೆ,ಎನ್, ಮಂಜುನಾಥ ಭಟ್, ಉಪನ್ಯಾಸಕರಾದ ಸುಮಂತ್ ಕುಮಾರ್, ಕೆ,ಡಿ, ಸುದೀಪ್, ವಿದ್ಯಾರ್ಥಿಗಳಾದ ಶಶಾಂಕ್ ಯು ಅಂಬೋರೆ, ಭೂಮಿಕ ಉಪಸ್ಥಿತರಿದ್ದರು.

To be successful in life one must aim high

About Author

Leave a Reply

Your email address will not be published. Required fields are marked *