ತರೀಕೆರೆ: ಕಳೆದೆರಡು ವಾರಗಳಿಂದ ತಾಲ್ಲೂಕಿನ ದುಗ್ಲಾಪುರ ಹಾಗೂ ಜಂಬದಹಳ್ಳ ವ್ಯಾಪ್ತಿಯ ಗ್ರಾಮಸ್ಥರಿಗೆ ಉಪಟಳ ನೀಡುತ್ತಿದ್ದ ಕರಡಿಯನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಕಳೆದ ವಾರ ಈ ಕರಡಿ ಜಂಬದಹಳ್ಳದ ರೈತರೊಬ್ಬರ ಮೇಲೆ ದಾಳಿ ನಡೆಸಿದ್ದನ್ನು ಸಾರ್ವಜನಿಕರಲ್ಲಿ ಭಯದ ವಾತವರಣ ಸೃಷ್ಠಿಯಾಗಿತ್ತು.
ಇದನ್ನು ಗಮನಿಸಿದ ಅರಣ್ಯ ಇಲಾಖೆ ಹಗಲು ರಾತ್ರಿ ಶತ ಪ್ರಯತ್ನದಿಂದ ಭದ್ರಾವತಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಆಶಿಶ್ ರೆಡ್ಡಿ ಹಾಗೂ ತರೀಕೆರೆ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಉಮರ್ ಬಾದಷಹ ರವರ ಮಾರ್ಗದರ್ಶನದಲ್ಲಿ ಲಕ್ಕವಳ್ಳಿ ವಲಯ ಅರಣ್ಯಾಧಿಕಾರಿ ರಾಘವೇಂದ್ರ ಕೆ.ಬಿ. ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಸೆರೆಹಿಡಿಯಲಾಗಿದೆ.
ಸೆರೆ ಹಿಡಿದಿದ್ದ ಕರಡಿಯನ್ನು ಹಿರಿಯ ಅಧಿಕಾರಿಗಳ ಮಾರ್ಗದರ್ಶನದಂತೆ ದೂರದ ಸುರಕ್ಷಿತ ಮತ್ತು ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಬಿಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಕಾರ್ಯಾಚರಣೆಯಲ್ಲಿ ಉಪ ವಲಯ ಅರಣ್ಯ ಅಧಿಕಾರಿ ಮನೋಜ್ ಕೆ.ಎಸ್., ಶಂಕರನಾರಾಯಣ ಎ., ಮಂಜುನಾಥ ಮೊಗೇರ, ಗಸ್ತು ಅರಣ್ಯಪಾಲಕರಾದ ಸುಬ್ರಹ್ಮಣ್ಯ, ಸಂತೋಷ್ , ಸಚಿನ್, ಸೂರ್ಯ, ಮುತ್ತು ಮತ್ತು ತರೀಕೆರೆ ವಲಯದ ಅಧಿಕಾರಿ ಸಿಬ್ಬಂದಿ ವರ್ಗ ಹಾಗೂ ಗ್ರಾಮಸ್ಥರ ಸಹಕರಿಸಿದ್ದಾರೆ.
The forest department seized the bear that was giving bribe