ಚಿಕ್ಕಮಗಳೂರು: ಸ್ವಾತಂತ್ರ್ಯ ಹೋರಾಟದಲ್ಲಿ ತ್ಯಾಗ ಬಲಿದಾನ ಮಾಡಿದ ಮಹನೀಯರನ್ನು ಸ್ಮರಿಸಿಕೊಳ್ಳಲು ಇಂದು ದೇಶಾದ್ಯಂತ ಸ್ವಾತಂತ್ರೋತ್ಸವವನ್ನು ಸಡಗರ ಸಂಭ್ರಮದೊಂದಿಗೆ ಆಚರಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಮೀನಾನಾಗರಾಜ್.ಸಿ ತಿಳಿಸಿದರು.
ಅವರು ಇಂದು ನಗರಸಭಾ ಕಛೇರಿ ಆವರಣದಲ್ಲಿ ೭೮ನೇ ಸ್ವಾತಂತ್ರೋತ್ಸವದ ಅಂಗವಾಗಿ ಧ್ವಜಾರೋಹಣಾ ನೆರವೇರಿಸಿ ಮಹಾತ್ಮ ಗಾಂಧೀಜಿ ಮತ್ತು ಡಾ. ಬಿ.ಆರ್.ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಪುಷ್ವನಮನ ಸಲ್ಲಿಸಿ ಮಾತನಾಡಿದರು.
ಚಿಕ್ಕಮಗಳೂರು ನಗರಸಭೆ ೧೯೧೩ ರಲ್ಲಿ ನಿರ್ಮಿಸಲಾದ ಕಾರ್ಯಾಲಯವಾಗಿದ್ದು ಬ್ರಿಟೀಷ್ ಕಾಲದಿಂದಲೂ ಕಾರ್ಯವೈಕರಿಯನ್ನು ನಡೆಸುಕೊಂಡು ಬಂದಿದೆ, ದೇಶದ ಮೊಟ್ಟ ಮೊದಲ ಸಿ.ಎಂ.ಸಿಯನ್ನಾಗಿ ಮಾಡುವಲ್ಲಿ ಎಲ್ಲರೂ ಸಹಕರಿಸಬೇಕೆಂದು ತಿಳಿಸಿದರು.
ಸ್ವಚ್ಚತೆ ಮತ್ತು ನಗರದ ನಾಗರೀಕರ ಆರೋಗ್ಯ ಕಾಪಾಡುವಲ್ಲಿ ನಗರಸಭೆ ಪೌರ ಕಾರ್ಮಿಕರು ಪ್ರಮುಖ ಪಾತ್ರವಹಿಸಿದ್ದಾರೆ ಸ್ವಚ್ಛತೆ ಆಧ್ಯತೆನಾಡಿ ಕರ್ತವ್ಯ ನಿರ್ವಹಿಸುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.
ಪೌರಾಯುಕ್ತ ಬಿ.ಸಿ. ಬಸವರಾಜ್ ಮಾತನಾಡಿ ಬ್ರಿಟೀಷರ ಆಳ್ವಿಕೆಯಿಂದ ಮುಕ್ತಗೊಳಿಸಿ ಸ್ವಾತಂತ್ರ್ಯ ಹೋರಾಟಗಾರರನ್ನು ನೆನೆಪು ಮಾಡಿಕೊಂಡು ಅವರ ಆದರ್ಶಗಳ ಪ್ರಸ್ತುತ ಸಮಾಜಕ್ಕೆ ದಾರಿ ದೀಪವಾಗಬೇಕೆಂದು ಹೇಳಿದರು.
ಸ್ವಾತಂತ್ರ್ಯ ದಿನಾಚರಣೆ ಕೇವಲ ೧ ದಿನಕ್ಕೆ ಸೀಮಿತವಾಗಿದೆ ಪ್ರತಿದಿನವೂ ಆಚರಿಸುತ್ತಾ ಎಲ್ಲರು ಸ್ವತಂತ್ರರಾಗಿ ಬದುಕು ರೂಪಿಸಿಕೊಳ್ಳಬೇಕು ವಯಕ್ತಿಕ ಬದುಕಿಗೆ ಧಕ್ಕೆಯಾಗದಂತೆ ನಡೆದುಕೊಳ್ಳಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ನಗರಸಭೆ ಅಧಿಕಾರಿಗಳಾದ ರಮೇಶ್ ನಾಯ್ಡು, ಆರೋಗ್ಯ ನಿರೀಕ್ಷಕರಾದ ಈಶ್ವರ್, ವೆಂಕಟೇಶ್, ನಾಗಪ್ಪ, ರಂಗಪ್ಪ ಮತ್ತು ಸಿಬ್ಬಂದಿಗಳು ಇತರರು ಉಪಸ್ಥಿತರಿದ್ದರು.
78th independence day celebration in city council